»   »  ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗಾಭರಣ

ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗಾಭರಣ

Subscribe to Filmibeat Kannada
T S Nagabharana
ಕರ್ನಾಟಕ ಸರ್ಕಾರ ಹೊಸದಾಗಿ ರಚಿಸಿರುವ ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರನ್ನಾಗಿ ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅವರನ್ನು ನೇಮಕ ಮಾಡಿದೆ. ನಾಗಾಭರಣ ನಿರ್ದೇಶನದ 'ನಂ ಯಜಮಾನ್ರು' ಚಿತ್ರ ಬಿಡುಗಡೆಯಾಗುತ್ತಿರುವ(ಫೆ.27) ಸಂದರ್ಭದಲ್ಲೇ ಅವರು ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಷರಾಗಿ ನೇಮಕವಾಗಿರುವುದು ಕಾಯತಾಳೀಯ.

ಅಕಾಡೆಮಿಯ ಸದಸ್ಯರಾಗಿ ಎಚ್.ಎನ್. ಮಾರುತಿ, ನಟ ಜೈ ಜಗದೀಶ್, ಚಿಂದೋಡಿ ಬಂಗಾರೇಶ್, ಎಂ.ಎನ್.ವ್ಯಾಸರಾವ್, ಗುಣಶೀಲಂ, ರವಿಶಂಕರ್, ಕೆ.ಎಚ್.ಸಾವಿತ್ರಿ ನೇಮಕಗೊಂಡಿದ್ದಾರೆ. ವಾರ್ತಾ ಇಲಾಖೆಯ ನಿರ್ದೇಶಕ ಜಗನ್ನಾಥ್ ಪ್ರಕಾಶ್ ಅವರನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡಲಾಗಿದೆ.

ಸಹಾಯಧನಕ್ಕಾಗಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ಆಯ್ಕೆ ಮಾಡಲು ಸಲಹಾ ಸಮಿತಿಗೆ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. 30 ಚಿತ್ರಗಳಿಗೆ ತಲಾ ರು.10 ಲಕ್ಷ ಸಹಾಯಧ ನೀಡಲಾಗುತ್ತದೆ. ಸದಸ್ಯರಾಗಿ ಕುಂ.ವೀರಭದ್ರಪ್ಪ, ಲಕ್ಷ್ಮಣ ಕೊಡಸೆ, ಹಾಸನ ರಘು, ರಿಚರ್ಡ್ ಕ್ಯಾಸ್ಟಲಿನೋ, ಆರ್.ನಾರಾಯಣಸ್ವಾಮಿ, ಶಾಲಿನಿ ಪ್ರಭು, ರಾಜನ್ ನೇಮಿಸಲಾಗಿದೆ. ವಾರ್ತಾ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಚಲನಚಿತ್ರ ಅಕಾಡೆಮಿ ರಚನೆ ಕೆಲವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಕಡೆಗೂ ಸರ್ಕಾರ ಚಲನಚಿತ್ರ ಅಕಾಡೆಮಿಯನ್ನು ರಚಿಸಿ ಆದೇಶ ಹೊರಡಿಸಿದೆ. ಮಾಧ್ಯಮ ಅಕಾಡೆಮಿ, ಟಿಎಸ್ ಆರ್ ಪ್ರಶಸ್ತಿ ಆಯ್ಕೆ ಸಮಿತಿ, ಕ್ಷೇಮಾಭಿವೃದ್ಧಿ ದತ್ತಿ, ಕೊಡವ ಅಕಾಡೆಮಿಗಳನ್ನು ಸರ್ಕಾರ ಪ್ರಕಟಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕರ್ನಾಟಕ ಫಿಲಂ ಅಕಾಡೆಮಿ ಲಿಂಗೈಕ್ಯ!
ಸಿನಿಮಾ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನಟಿ ಶ್ರುತಿ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada