»   » ಒಬೆರಾಯ್ ಮಾಡಿದ ವಿವೇಕದ ಕೆಲ್ಸ

ಒಬೆರಾಯ್ ಮಾಡಿದ ವಿವೇಕದ ಕೆಲ್ಸ

Subscribe to Filmibeat Kannada
Vivek Oberoi
ಬಾಲಿವುಡ್ ನಲ್ಲಿ ಎರಡನೇ ಇನ್ನಿಂಗ್ ಆರಂಭಿಸಿ ಹೊಸ ಗೆಲುವಿನ ನಿರೀಕ್ಷೆಯಲ್ಲಿರುವ ನಟ ವಿವೇಕ್ ಒಬೆರಾಯ್ ಅವರು ಕರ್ನಾಟಕಕ್ಕೆ ಉಪಕಾರದ ಕೆಲಸ ಮಾಡಿದ್ದಾರೆ. ಭಗ್ನ ಪ್ರೇಮಿ ಆದಮೇಲೊ ಏನೋ ದೇಗುಲಗಳು, ಆಶ್ರಮಗಳ ಮೊರೆ ಹೊಕ್ಕು ಒಂದಷ್ಟು ವಿವೇಕ ಸಂಪಾದಿಸಿದ್ದರೆ ಎಂಬುದು ಬಲ್ಲವರ ಮಾತು. ಅದೇನೆ ಇರಲಿ, ಕರ್ನಾಟಕದ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿರುವ ಬಾಲಿವುಡ್ ನಟ ಭಾರಿ ದೇಣಿಗೆಯನ್ನು ನೀಡಿದ್ದಾರೆ.

ಇತ್ತೀಚೆಗೆ ನಡೆದ ನೆರೆ ಸಹಾಯಾರ್ಥ ಕಲಾಕೃತಿ ಪ್ರದರ್ಶನದಲ್ಲಿ ಪಾಲ್ಗೊಂಡ ವಿವೇಕ್, ಚಿತ್ರಗಳ ಹರಾಜು ಪ್ರಕ್ರಿಯೆ ಮಾರಾಟಕ್ಕೆ ಚಾಲನೆ ನೀಡಿ ಸುಮಾರು 52 ಲಕ್ಷ ಸಂಗ್ರಹಿಸಿದ್ದಲ್ಲದೆ, ಉತ್ತಮ ಕಲಾಕೃತಿಯೊಂದನ್ನು ಖರೀದಿಸಿ ಮಾದರಿಯಾದರು. ನಟ, ನಟಿಯರು ದೇಣಿಗೆ ಸಂಗ್ರಹಕ್ಕೆ ಹೊರಡುವುದು ಆಡಂಬರಕ್ಕೆ ಮಾತ್ರ ಅವರ ಉದ್ದೇಶವೇ ಬೇರೆ ಎಂಬ ಮಾತನ್ನು ಸುಳ್ಳು ಮಾಡುವತ್ತ ವಿವೇ ಕ್ ಹೆಜ್ಜೆ ಇಡುತ್ತಿದ್ದಾರೆ.

ವಿವೇಕ್ ಈ ಹಿಂದೆ ಸುನಾಮಿ ಹಾವಳಿಗೆ ಈಡಾಗಿ ತೊಂದರೆಪಟ್ಟಿದ್ದ ತಮಿಳುನಾಡು ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಗ್ರಾಮವೊಂದನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿದ್ದರು. ಶ್ರೀರಾಮಚಂದ್ರಾಪುರ ಮಠದ ಅನುಯಾಯಿಯಾದ ಒಬೆರಾಯ್ ಕುಟಂಬದವರು, ಗೋ ಸಂರಕ್ಷಣೆಯಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಅಶೋಕ್ ಕಶ್ಯಪ್ ಅವರಸಿಹಿಮುತ್ತು ಚಿತ್ರದಲ್ಲಿ ವಿವೇಕ್ ಒಬೆರಾಯ್ ನಟಿಸುವ ಸಾಧ್ಯತೆಗಳಿವೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada