»   » ಫಾಲ್ಕೆ ಪುರಸ್ಕೃತ ಮೂರ್ತಿ ಸಂಜೆಗಣ್ಣಿನ ಹಿನ್ನೋಟ

ಫಾಲ್ಕೆ ಪುರಸ್ಕೃತ ಮೂರ್ತಿ ಸಂಜೆಗಣ್ಣಿನ ಹಿನ್ನೋಟ

Posted By:
Subscribe to Filmibeat Kannada
An interaction with V K Murthy
''ಗುರುದತ್ತರ ಕಣ್ಣು'' ಎಂದೇ ಖ್ಯಾತರಾದವರು ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಛಾಯಾಗ್ರಾಹಕ ವಿ ಕೆ ಮೂರ್ತಿ. ಐವತ್ತು, ಅರವತ್ತರ ದಶಕದಲ್ಲಿ ಗುರುದತ್ ರ ಎಲ್ಲಾ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಕೀರ್ತಿ ಮೂರ್ತಿ ಅವರದು. ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು. ವಿಶ್ವಖ್ಯಾತಿಯ ಈ ಕನ್ನಡಿಗನೊಂದಿಗೆ ಮಾತನಾಡುವ ಸದವಕಾಶವನ್ನು ಬೆಂಗಳೂರಿನ ವಿಕಲ್ಪ ಸಂಸ್ಥೆ ಕಲ್ಪಿಸಿದೆ.

ಮಾರ್ಚ್ 27ರ ಶುಕ್ರವಾರ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಜೆ 3 ಗಂಟೆಗೆ ವಿ ಕೆ ಮೂರ್ತಿ ಅವರ ಅಧ್ಬುತ ದೃಶ್ಯ ಕಾವ್ಯ ಪ್ಯಾಸಾ (1957) ಚಿತ್ರದ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಚಿತ್ರರಸಿಕರು ಈ ಕಾರ್ಯಕ್ರಮವನ್ನು ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

ಚಿತ್ರ ಪ್ರದರ್ಶನದ ಬಳಿಕ ಅಂದರೆ ಸಂಜೆ 6 ಗಂಟೆಯ ನಂತರ ವಿ ಕೆ ಮೂರ್ತಿ ಸಹೃದಯರೊಂದಿಗೆ ಚರ್ಚಿಸಲಿದ್ದಾರೆ. ಸಿನಿಮಾ ಛಾಯಾಗ್ರಾಹಕ ನವರೋಜ್ ಅವರು ಮೂರ್ತಿಅವರಿಗೆ ಸ್ವಾಗತಕೋರಲಿದ್ದು ಇದೇ ಸಂದರ್ಭದಲ್ಲಿ ಗೋವಿಂದ ನಿಹಲಾನಿ ಅವರ ಕಿರು ಚಿತ್ರ ಪ್ರದರ್ಶನವಿರುತ್ತದೆ. ವಿ ಕೆ ಮೂರ್ತಿ ಅವರೊಂದಿಗೆ ಕಳೆದ ದಿನಗಳನ್ನು ಗೋವಿಂದ ನಿಹಲಾನಿ ಸಹೃದಯರ ಜೊತೆ ಹಂಚಿಕೊಳ್ಳಲಿದ್ದಾರೆ.

ವಿ ಕೆ ಮೂರ್ತಿ ಅವರ ಆತ್ಮಕತೆ ಬರೆದಿರುವ ಉಮಾರಾವ್ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ಮೂರ್ತಿ ಕುರಿತ ಪುಸ್ತಕದ ಬಗ್ಗೆ ಮತನಾಡಲಿದ್ದಾರೆ. ಈ ಒಂದು ಅಪರೂಪದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ. ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಛಾಯಾಗ್ರಾಹಕರಲ್ಲೊಬ್ಬರಾದ ಮೂರ್ತಿ ಅವರ ಸಂಜೆಗಣ್ಣಿನ ಹಿನ್ನೋಟ ನಿಮ್ಮ ಮುಂದೆ ನಿಲ್ಲದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada