»   » 'ಕುರುಬನ ರಾಣಿ' ನಗ್ಮಾಗೆ ಕಂಕಣಬಲ

'ಕುರುಬನ ರಾಣಿ' ನಗ್ಮಾಗೆ ಕಂಕಣಬಲ

Posted By:
Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ತಾರೆ ನಗ್ಮಾಗೆ ಕಂಕಣಬಲ ಕೂಡಿಬಂದಿದೆ. ದಿವಂಗತ ವಿಷ್ಣುವರ್ಧನ್ ಅವರ 'ಹೃದಯವಂತ' ಚಿತ್ರದಲ್ಲಿ ನಟಿಸಿದ್ದ ಈಕೆಯ ಯಶಸ್ವಿ ಚಿತ್ರಗಳ ಪಟ್ಟಿಯಲ್ಲಿ ತಮಿಳಿನ ಬಾಷಾ, ಕಾದಲನ್ ಮುಂತಾದ ಚಿತ್ರಗಳು ಸೇರಿವೆ. ಈ ವರ್ಷ ಮದುವೆಯಾಗುತ್ತಿರುವುದಾಗಿ ನಗ್ಮಾ ಘಂಟಾಗೋಷವಾಗಿ ಪ್ರಕಟಿಸಿದ್ದಾರೆ.

''ಈ ವರ್ಷ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದೇನೆ. ಶೀಘ್ರದಲ್ಲೆ ವರಯಾರು ಎಂಬುದನ್ನು ತಿಳಿಸಲಿದ್ದೇನೆ. ಈ ಹಿಂದೆ ತಾವು ನಿರ್ದೇಶಕ ದೀಪಕ್, ಭೋಜ್ ಪುರಿ ನಟ ರವಿ ಕಿಶನ್ ಹಾಗೂ ಕ್ರಿಕೆಟಿಗ ಗಂಗೂಲಿ ಅವರನ್ನು ಮದುವೆಯಾಗಲಿರುವ ವದಂತಿಗಳು ಹಬ್ಬಿದ್ದವು. ಈ ವದಂತಿಗಳಲ್ಲಿ ಹುರುಳಿಲ್ಲ'' ಎಂದು ನಗ್ಮಾ ತಿಳಿಸಿದ್ದಾರೆ.

ತೊಂಬತ್ತರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ರಾಣಿ ಮಹಾರಾಣಿಯಂತೆ ಮೆರೆದ ನಗ್ಮಾ ಬಳಿಕ ಕನ್ನಡ ಸೇರಿದಂತೆ ಹಿಂದಿ, ತೆಲುಗು, ಮಲೆಯಾಳಂ, ಬಂಗಾಳಿ, ಭೋಜ್ ಪುರಿ, ಪಂಜಾಬಿ ಮತ್ತು ಮರಾಠಿ ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ 'ಕುರುಬನ ರಾಣಿ' ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ರವಿಮಾಮ' ಚಿತ್ರಗಳಲ್ಲೂ ನಗ್ಮಾ ಅಭಿನಯಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada