»   » ಪುನೀತ್ ಜೊತೆ ಯೋಗರಾಜ್ ಭಟ್ ಹೊಸ ಆಟ

ಪುನೀತ್ ಜೊತೆ ಯೋಗರಾಜ್ ಭಟ್ ಹೊಸ ಆಟ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ಯೋಗರಾಜ ಭಟ್ಟರ ಪ್ರಯತ್ನ ಕಡೆಗೂ ಫಲಿಸಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಚಿತ್ರ ತೆಗೆಯುವ ಭಟ್ಟರ ಕನಸಿನ ಯೋಜನೆ ಕಡೆಗೂ ಕೈಗೂಡಿದೆ. ಪುನೀತ್ ಹಾಗೂ ಭಟ್ಟರ ಕಾಂಬಿನೇಷನ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಬಿದ್ದಿದೆ.

ಈ ಹಿಂದೆ ಇವರಿಬ್ಬರ ಕಾಂಬಿನೇಷನಲ್ಲಿ ಬರಬೇಕಿದ್ದ 'ಲಗೋರಿ' ಚಿತ್ರ ಹಲವಾರು ಕಾರಣಗಳಿಂದ ರದ್ದಾಗಿತ್ತು. ಇದೀಗ ಮತ್ತೆ ಭಟ್ಟರು 'ಲಗೋರಿ' ಬದಲಾಗಿ ಪುನೀತ್ ಜೊತೆ ಹೊಸ ಆಟ ಶುರು ಮಾಡಿದ್ದಾರೆ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ ಎಂದು ಸ್ವತಃ ಯೋಗರಾಜ್ ಭಟ್ ತಿಳಿಸಿದ್ದಾರೆ.

ಪ್ರಸ್ತುತ 'ಪಂಚರಂಗಿ' ಚಿತ್ರದ ನಿರ್ಮಾಣ ನಂತರದ ಕೆಲಸಗಳಲ್ಲಿ ಭಟ್ ಬ್ಯುಸಿಯಾಗಿದ್ದಾರೆ. ಚಿತ್ರ ಶೀರ್ಷಿಕೆ, ನಾಯಕಿ, ತಂತ್ರಜ್ಞರು, ಬಜೆಟ್ ಬಗ್ಗೆ ಭಟ್ ಸಸ್ಪೆನ್ಸ್ ಕಾದಿರಿಸಿದ್ದಾರೆ. ಚಿತ್ರದ ವಿವರಗಳು ಆಗಸ್ಟ್ ಅಂತ್ಯಕ್ಕೆ ಬಹಿರಂಗವಾಗುವ ಸಾಧ್ಯತೆಯಿದೆ. ಇದು ಲಗೋರಿ ಚಿತ್ರವೇ ಅಥವಾ ಬೇರೆ ಕತೆಯೇ ಎಂಬ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ.

ಈ ನಡುವೆ ಭಟ್ಟರ 'ಪಂಚರಂಗಿ' ಚಿತ್ರದ ಡಬ್ಬ್ಬಿಂಗ್ ಕಾರ್ಯ ನಡೆಯುತ್ತಿದ್ದು ರೀರೆಕಾರ್ಡಿಂಗ್ ಪ್ರಗತಿಯಲ್ಲಿದೆ. ಚಿತ್ರದ ಹಾಡುಗಳು ಅದ್ಭುತವಾಗಿ ಮೂಡಿಬಂದಿದ್ದು ಪ್ರೇಕ್ಷಕರ ಮನತಣಿಸಲಿವೆ ಎನ್ನುತ್ತಾರೆ ಭಟ್. ಪಂಚರಂಗಿ ಚಿತ್ರ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷಿಸುವಂತಾಗಿದೆ. 


ಒಂದು ಮೂಲದ ಪ್ರಕಾರ ಭಟ್ಟರ ಪೆಟಾರಿಯಲ್ಲಿ ಹಲವಾರು ಕಥೆಗಳು ಸಿದ್ಧವಾಗಿವೆಯಂತೆ. ಅವುಗಳಲ್ಲಿ ಒಂದು ಕಥೆ ಪುನೀತ್ ಚಿತ್ರವಾಗಲಿದೆ. ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಲಿದೆ. ನಿರ್ಮಾಪಕರಲ್ಲಿ ಭಟ್ಟರು ಒಬ್ಬರು ಎಂಬುದು ಸದ್ಯಕ್ಕೆ ಲಭ್ಯವಿರುವ ಮಾಹಿತಿ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X