For Quick Alerts
  ALLOW NOTIFICATIONS  
  For Daily Alerts

  ಅಪ್ಪನ ಹಾದಿಯಲ್ಲಿ ಅಪ್ಪು; ಯೋಗಾಸನಕ್ಕೆ ಶರಣು

  By Rajendra
  |

  ಸಿನಿಮಾ ತಾರೆಗಳ ಆರೋಗ್ಯ ಯಾವಾಗಲೂ ಫಿಟ್ ಅಂಡ್ ಫೈನಾಗಿರಬೇಕು. ಆರೋಗ್ಯ ಒಂಚೂರು ಹದಗೆಟ್ಟರೂ ಅದರ ಬಿಸಿ ತಟ್ಟುವುದು ನಿರ್ಮಾಪಕನಿಗೆ. ಹಾಗಾಗಿ ಸಿನಿಮಾ ತಾರೆಗಳು ಫಿಟ್‌ನೆಸ್ ವಿಚಾರದಲ್ಲಿ ಹೆಚ್ಚಿಗೆ ಕಾಳಜಿ ವಹಿಸುತ್ತಾರೆ. ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಂತೂ ಆರೋಗ್ಯದ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ.

  ಇಷ್ಟು ದಿನ ಅವರು ಫಿಟ್‌ನೆಸ್‌ಗಾಗಿ ಜಿಮ್, ವ್ಯಾಯಾಮದಂತಹ ಕಸರತ್ತುಗಳನ್ನು ಮಾಡುತ್ತಿದ್ದರು. ಈಗ ಅವರ ಮನಸ್ಸು ಯೋಗಾಸನದ ಕಡೆಗೆ ಆಕರ್ಷಿತವಾಗಿದೆ. ವರನಟ ಡಾ.ರಾಜ್ ಕುಮಾರ್ ಅವರು ಯೋಗಾಭ್ಯಾಸದಲ್ಲಿ ತುಂಬ ಪರಿಣಿತಿ ಸಾಧಿಸಿದ್ದರು. ಈಗ ಅಪ್ಪು ಕೂಡ ಅವರಷ್ಟಲ್ಲದಿದ್ದರೂ ಆರೋಗ್ಯದ ದೃಷ್ಟಿಯಿಂದ ಯೋಗಾಸನ ಕಲಿಯಲು ಮುಂದಾಗಿದ್ದಾರೆ.

  ಯೋಗಾಭ್ಯಾಸದಲ್ಲಿ ಅಪ್ಪು ಇನ್ನೂ ಅಂಬೆಗಾಲಿಡುತ್ತಿದ್ದು, ಮೈಸೂರಿನ ಯೋಗ ಶಿಕ್ಷಕ ಶಶಿ ಅವರ ಬಳಿ ತರಬೇತಿ ಪಡೆದು ಅವರ ಮಾರ್ಗದರ್ಶನದಲ್ಲಿ ವಿವಿಧ ಆಸನಗಳನ್ನು ಕಲಿಯುತ್ತಿದ್ದಾರೆ. "ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಹಾಗೂ ದೇಹ ಉಲ್ಲಾಸದಾಯಕವಾಗಿರುತ್ತದೆ. ಆದರೆ ಅಪ್ಪಾಜಿ ಅವರಷ್ಟು ಪರಿಣಿತಿ ಸಾಧಿಸುವುದು ಕಷ್ಟ. ನಾನು ಇನ್ನೂ ಈಗಷ್ಟೇ ಯೋಗ ಕಲಿಯುತ್ತಿದ್ದೇನೆ" ಎನ್ನುತ್ತಾರೆ ಪುನೀತ್. [ಪವರ್ ಸ್ಟಾರ್]

  English summary
  Power Star Puneet Rajkumar has steps into his fathers shoes, now he practices yoga for fitness. He has learning yoga from Mysore yoga teacher Shashi. He admitted to using yoga as a means to calm the spirit, tone the muscles of the body, and increase physical strength.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X