For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್ 'ಜೂಲಿಯಟ್' ಆದ ಜಾಕಿ ಭಾವನಾ

  |

  ಭಾವನಾ ಎಂದಾಕ್ಷಣ ಕನ್ನಡ ಸಿನಿ ಪ್ರೇಕ್ಷಕರಿಗೆ ತಟ್ಟನೆ ನೆನಪಿಗೆ ಬರುವ ಹೆಸರು 'ಜಾಕಿ' ಭಾವನಾ. ನಂತರ ಗಾಳಿಪಟ ಚಿತ್ರದ ಭಾವನಾ ರಾವ್ ಕೂಡ ನೆನಪಿಗೆ ಬರುತ್ತಾರೆ. ಇನ್ನೂ ಹಿಂದಿನ ಪ್ರೇಕ್ಷಕರಿಗೆ 'ಚಂದ್ರಮುಖಿ ಪ್ರಾಣಸಖಿ' ಚಿತ್ರದಲ್ಲಿ ಪ್ರೇಮಾ ಜೊತೆ ಜಗಳವಾಡುವ ಭಾವನಾ ನೆನಪಾದರೆ ಅಚ್ಚರಿಯೇನಲ್ಲ.

  ಈಗ ಹೇಳಹೊರಟಿರುವುದು 'ಜಾಕಿ' ಭಾವನಾ ಬಗ್ಗೆ. ಈಕೆ ಕನ್ನಡದಲ್ಲಿ ಜಾಕಿ ಚಿತ್ರದಲ್ಲಿ ನಟಿಸಿದ ಮೇಲೆ ಸದ್ಯವೇ ಬಿಡುಗಡೆ ಆಗಲಿರುವ ಸುದೀಪ್ ಚಿತ್ರ 'ವಿಷ್ಣುವರ್ಧನ' ದ ನಾಯಕಿ ಈ ಭಾವನಾ. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ರೋಮಿಯೋ' ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಕನ್ನಡದಲ್ಲಿ ನೆಲೆನಿಲ್ಲುವ ಸೂಚನೆ ಸಿಕ್ಕಿದೆ.

  ಮಲೆಯಾಳಂ ನಟಿ ಭಾವನಾ, ಕನ್ನಡವೂ ಸೇರಿ ಈಗಾಗಲೇ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾಳೆ. ಸೆಂಚುರಿ ಸ್ಟಾರ್ ಶಿವಣ್ಣನ ಹಿಂದೆ ಓಡುತ್ತಿದ್ದಾಳಾ ಎಂಬ ಸಂಶಯವಿದೆ. ಮೊದಲ ಚಿತ್ರದ ಅಭಿನಯಕ್ಕೇ ರಾಜ್ಯ ಪ್ರಶಸ್ತಿ ಪಡೆದಿರುವ ಈಕೆ, 'ಚಿತ್ತಿರಂ ಪೇಸುದಡಿ' ಚಿತ್ರದ ಮೂಲಕ ಅಲ್ಲೂ ಸೈ ಅನ್ನಸಿಕೊಂಡಾಕೆ. ಈಗ 'ರೋಮಿಯೋ'ದಲ್ಲಿ ಜೂಲಿಯಟ್. (ಒನ್ ಇಂಡಿಯಾ ಕನ್ನಡ)

  English summary
  Actress Jackie Fame Bhavana now acts in kannada movie Romeo. She is pair for golden star Ganesh in Romeo.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X