»   » ದರ್ಶನ್ ಜೊತೆ ಅನೈತಿಕ ಸಂಬಂಧವಿಲ್ಲ: ನಟಿ ನಿಖಿತಾ

ದರ್ಶನ್ ಜೊತೆ ಅನೈತಿಕ ಸಂಬಂಧವಿಲ್ಲ: ನಟಿ ನಿಖಿತಾ

Posted By:
Subscribe to Filmibeat Kannada
<ul id="pagination-digg"><li class="next"><a href="/news/28-actress-nikita-thukral-rejects-illegal-relationship-aid0172.html">Next »</a></li></ul>

"ನಮ್ಮಿಬ್ಬರ ನಡುವೆ ಇದ್ದದ್ದು ಕೇವಲ ಸ್ನೇಹ, ಅನೈತಿಕ ಸಂಬಂಧ ಅಲ್ಲ. ಇದು ಸ್ವತಃ ವಿಜಯಲಕ್ಷ್ಮಿ ದರ್ಶನ್ ಸೇರಿದಂತೆ ಇಡೀ ಕನ್ನಡ ಚಿತ್ರರಂಗಕ್ಕೂ ಗೊತ್ತಿತ್ತು. ಆದರೂ ಅನಾವಶ್ಯಕವಾಗಿ ನನ್ನನ್ನು ಬಲಿಪಶು ಮಾಡಲಾಯಿತು. ಒಬ್ಬ ಕಲಾವಿದೆಯಾದ ನಾನು ಯಾವುದೇ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಲು ಹೋದಾಗ ಅಲ್ಲಿ ನಟ, ನಟಿಯರ ಜೊತೆ ಸ್ನೇಹ ಬೆಳೆಸುವುದು ಸಹಜ. ಆದರೆ ಇದನ್ನೇ ದೊಡ್ಡ ವಿವಾದ ಮಾಡಲಾಯಿತು. ದರ್ಶನ್ ರ ಕುಟುಂಬದ ಗಲಾಟೆಯಲ್ಲಿ ಅನಗತ್ಯವಾಗಿ ನನ್ನ ಹೆಸರು ಎಳೆದುತರಲಾಯಿತು.

ನಾನು ಲಂಡನ್ ನಲ್ಲಿ ಚಿತ್ರೀಕರಣದಲ್ಲಿದ್ದೆ. ಆಗ ಬಿಬಿಸಿ ವಾಹಿನಿಯ ವರದಿಗಾರರೊಬ್ಬರು ನನ್ನನ್ನು ಸಂಪರ್ಕಿಸಿ 'ನೀವು ಕನ್ನಡ ನಟನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀರಿ. ಇದರಿಂದ ಅವರ ಮನೆಯಲ್ಲಿ ಕೌಟುಂಬಿಕ ಕಲಹವಾಗಿದೆ' ಎಂದು ಅತ್ಯಂತ ಮುಜುಗರ ಹಾಗೂ ಕಿರಿಕಿರಿ ಉಂಟುಮಾಡುವ ಪ್ರಶ್ನೆಗಳನ್ನು ಕೇಳಿದರು. ಅನಗತ್ಯ ವಿಷಯವನ್ನು ದೊಡ್ಡದಾಗಿ ಮಾಡಿದರು. ಇದರಿಂದ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ.

ಅವರ ವೈಯಕ್ತಿಕ ವಿವಾದದಲ್ಲಿ ನನ್ನ ಹೆಸರು ತಂದು ಕೆಟ್ಟದಾಗಿ ಬಿಂಬಿಸಿ ಮಾಡಿದರು, ಬರೆದರು. ಆದರೆ ಒಬ್ಬ ಹೆಣ್ಣುಮಗಳಾಗಿ ನಾನೇನು ಮಾಡಲು ಸಾಧ್ಯವಿತ್ತು? ಇಡೀ ದಿನ ಮನೆಯಲ್ಲಿ ಒಬ್ಬಳೇ ಕೂತು ಕಣ್ಣೀರಿಟ್ಟೆ. ನನ್ನ ಜೀವನದಲ್ಲಿ ಅನುಭವಿಸಿದ ಅತೀ ದೊಡ್ಡ ನೋವಿನ ಸಂಗತಿಯಿದು. ಅಮ್ಮ, ನನ್ನ ಯೋಗ ಗುರು, ಹಾಗೂ ಮಾಧ್ಯಮಗಳು ನನ್ನ ಪರವಾಗಿ ನಿಂತು ವಾಸ್ತವ ಬರೆದರು. ಮುಂದಿನ ಪುಟ ನೋಡಿ....

<ul id="pagination-digg"><li class="next"><a href="/news/28-actress-nikita-thukral-rejects-illegal-relationship-aid0172.html">Next »</a></li></ul>

English summary
Actress Nikita Thukral Rejects the news, she had Illegal Relationship with Kannada Actor Darshan. She told that she has only friendship with him.&#13; &#13;

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X