»   » ಇಷ್ಟಕ್ಕೆ ಪತ್ರಕರ್ತರ ಮೇಲೆ ಬೇಜಾರಾದರೆ ಹೆಂಗೆ ಮೇಷ್ಟ್ರೆ?

ಇಷ್ಟಕ್ಕೆ ಪತ್ರಕರ್ತರ ಮೇಲೆ ಬೇಜಾರಾದರೆ ಹೆಂಗೆ ಮೇಷ್ಟ್ರೆ?

Posted By:
Subscribe to Filmibeat Kannada

ಗಾಸಿಪ್ಪುಗಳಿಂದ ಗಾವುದ ದೂರ ಇರುವ ಚಿತ್ರಲೋಕ ಡಾಟ್ ಕಾಂ ಕನ್ನಡ ಚಿತ್ರರಂಗದಲ್ಲಿ ಮೇಷ್ಟ್ರು ಎಂದೆ ಖ್ಯಾತರಾದ ನಿರ್ದೇಶಕ ನಾಗತಿಹಳ್ಳಿ ಕೆಂಗಣ್ಣಿಗೆ ಗುರಿಯಾಗಿದೆ. ಇದೆಲ್ಲಾ ನಡೆದದ್ದು 'ನೂರು ಜನ್ಮಕು' ಧ್ವನಿಸುರುಳಿ ಬಿಡುಗಡೆಯಾದ ನಂತರ. ನೂರು ಜನ್ಮಕು ಆಡಿಯೋ ಬಿಡುಗಡೆ ಸುದ್ದಿಯನ್ನು ಇದ್ದದ್ದು ಇದ್ದಂಗೆ ಬರೆದದ್ದೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.

ಚಿತ್ರಲೋಕ ವೆಬ್ ಸೈಟಿನ ಕಥೆ ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ನಿರ್ಮಾಣ, ನಿರ್ದೇಶನ, ಪ್ರಚಾರ, ಹಂಚಿಕೆ ಕಡೆಗೆ ಪೋಸ್ಟರ್ ಹಚ್ಚುವ ಕೆಲಸವನ್ನೂ ಮಾಡುವವರು ಮೂಲತಃ ಛಾಯಾಚಿತ್ರಕಾರರಾದ ಕೆ ಎಂ ವೀರೇಶ್; ಕಡೆಗೆ ರೋಸಿಹೋಗಿ ಮೇಷ್ಟ್ರಿಗೆ ಒಂದು ಬಹಿರಂಗ ಪತ್ರವನ್ನು ಎಸೆದಿದ್ದಾರೆ.

"ಗಣಿಧಣಿಗಳ ವಿರುದ್ಧ, ರೈತರ ಪರ ಧ್ವನಿ ಎತ್ತುವ ನಾಗತಿಹಳ್ಳಿ ತಮ್ಮ 'ನೂರು ಜನ್ಮಕು' ಚಿತ್ರವನ್ನು ಗಣಿಧಣಿ ವಿನಯ್ ಲಾಡ್ ಜೊತೆ ನಿರ್ಮಿಸಿದ್ದಾರೆ. ಸರಳತೆ, ದುಂದುವೆಚ್ಚದ ಬಗ್ಗೆ ಅಧಿಕಾರಯುತವಾಗಿ ಭಾಷಣ ಬಿಗಿಯುವ ನಾಗತಿಹಳ್ಳಿ ಮಾಡಿದ್ದೇನು? 'ನೂರು ಜನ್ಮಕು' ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ತಮ್ಮ ಎಲ್ಲಾ ಸಿದ್ಧಾಂತಗಳನ್ನು ಗಾಳಿಗೆ ತೂರಿದರು. ಅಲ್ಲಿ ಗುಂಡು ಪಾರ್ಟಿ ಇತ್ತು ಜೊತೆಗೆ ಅರೆನಗ್ನ ಫ್ಯಾಶನ್ ಶೋ ಸಹ ಆಯೋಜಿಸಲಾಗಿತ್ತು" ಹಾಗಂತ ಚಿತ್ರಲೋಕ ಬರೆದದ್ದೆ ತಪ್ಪಾಗಿ ಹೋಯಿತು.

ನೂರು ಜನ್ಮಕು ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಕಂಡದ್ದು ಕಂಡಂಗೆ ಚಿತ್ರಲೋಕದಲ್ಲಿ ಸುದ್ದಿ ಬರೆದರು. ಇದನ್ನು ಓದಿದ ನಾಗತಿಹಳ್ಳಿ ತುಂಬಾ ಬೇಜಾರು ಮಾಡಿಕೊಂಡು, I deeply hurt by your writings. I lost faith in my press friends ಎಂದು ಕೆ ಎಂ ವೀರೇಶ್ ಅವರಿಗೆ ಎಸ್ ಎಂಎಸ್ ಹಾಕಿದ್ದಾರೆ.

ಪತ್ರಕರ್ತರು ಕಷ್ಟಕ್ಕೆ ಮಾತ್ರ ಉಂಟು ಎನ್ನುವುದು ಸಮಾಜದಲ್ಲಿ ಪ್ರತೀತಿ. ಇಂಥ ಸಮುದಾಯದ ಮೇಲೆ ಇಷ್ಟೆಲ್ಲ ಬೇಜಾರಾದರೆ ಹೆಂಗೆ ಮೇಷ್ಟ್ರೆ ಎಂದು ಚಿತ್ರಲೋಕದ ವರದಿಗಾರ ನಾಗತಿಹಳ್ಳಿಮೇಷ್ಟರನ್ನು ಕೇಳಿದ್ದಾನೆ. ಪತ್ರ ಸ್ವಲ್ಪ ದೀರ್ಘವಾಗೇ ಇದೆ. ನಿರಾತಂಕವಾಗಿ ಓದಿಕೊಂಡು ಹೋಗಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada