»   »  ಆಗಸ್ಟ್ ಕೊನೆಗೆ 'ಬಳ್ಳಾರಿ ನಾಗ'ನಾಗಿ ವಿಷ್ಣುವರ್ಧನ್

ಆಗಸ್ಟ್ ಕೊನೆಗೆ 'ಬಳ್ಳಾರಿ ನಾಗ'ನಾಗಿ ವಿಷ್ಣುವರ್ಧನ್

Subscribe to Filmibeat Kannada

ಸಾಹಸಸಿಂಹ ವಿಷ್ಣುವರ್ಧನ್ ಸದ್ಯಕ್ಕೆ ಬಿಜಿಯಾಗಿದ್ದಾರೆ. 'ಆಪ್ತರಕ್ಷಕ' ಚಿತ್ರೀಕರಣ ಕೊನೆಯ ಘಟ್ಟಕ್ಕೆ ತಲುಪಿದೆ. ಏತನ್ಮಧ್ಯೆ ಅವರ ಮತ್ತೊಂದು ಚಿತ್ರ 'ಬಳ್ಳಾರಿ ನಾಗ' ಚಿತ್ರವೂ ಸದ್ದಿಲ್ಲದಂತೆ ಚಿತ್ರೀಕರಣ ನಡೆಸಿದೆ.ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ 'ಬಳ್ಳಾರಿ ನಾಗ' ಚಿತ್ರದ ಸ್ಟಿಲ್ ಗಳನ್ನು ಬಿಡುಗಡೆ ಮಾಡಲಾಗಿದೆ. ಬಳ್ಳಾರಿ ನಾಗ ಚಿತ್ರಪಟಗಳಲ್ಲಿ ವಿಷ್ಣು ಎಂದಿಗಿಂತ ವಿಭಿನ್ನ ಗೆಟಪ್ ಕಾಣಿಸಿದ್ದಾರೆ.

ಬಳ್ಳಾರಿ ನಾಗ ಚಿತ್ರಕ್ಕೆ ಈ ಹಿಂದೆ 'ನಾನೇ ಬೇರೆ ನನ್ನ ಸ್ಟೈಲೇ ಬೇರೆ' ಎಂದು ಹೆಸರಿಟ್ಟಿದ್ದರು. ಈ ಚಿತ್ರವನ್ನು ದಿನೇಶ್ ಬಾಬು ನಿರ್ದೇಶಿಸುತ್ತಿದ್ದು ಕೆ.ಮಂಜು ಬಂಡವಾಳ ಹೂಡುತ್ತಿದ್ದಾರೆ. ಬಳ್ಳಾರಿ ನಾಗನ ಸ್ಟಿಲ್ಸ್ ನೋಡಿದವರು ಸಾಹಸಸಿಂಹನ ಗೆಟಪ್ ಗೆ ಬೆರಗಾಗಿದ್ದಾರಂತೆ.

ಎಲ್ಲಾ ಸುಸೂತ್ರವಾಗಿ ನಡೆದರೆ ಬಳ್ಳಾರಿ ನಾಗ ಚಿತ್ರ ಆಗಸ್ಟ್ ಕೊನೆಗೆ ತೆರೆಕಾಣಲಿದೆ. ಸದ್ಯಕ್ಕೆ ಸಾಹಸಸಿಂಹ ತಮ್ಮ 200ನೇ ಚಿತ್ರ ಆಪ್ತರಕ್ಷಕ ನನ್ನು ಬೇಗ ಮುಗಿಸುವ ತರಾತುರಿಯಲ್ಲಿದ್ದಾರೆ.ಕೃಷ್ಣಕುಮಾರ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಪಿ ವಾಸು ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ವಿಷ್ಣು ಅಭಿನಯದ ಮತ್ತೊಂದು ಚಿತ್ರ 'ಸ್ಕೂಲ್ ಮಾಸ್ಟರ್' ರೀ ರೆಕಾರ್ಡಿಂಗ್ ಗೆ ಅಣಿಯಾಗುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada