»   »  'ಯೋಧ'ನಿಗೆ ಚಾಲೆಂಜಿಂಗ್ ಸ್ಟಾರ್ ಮುನ್ನುಡಿ

'ಯೋಧ'ನಿಗೆ ಚಾಲೆಂಜಿಂಗ್ ಸ್ಟಾರ್ ಮುನ್ನುಡಿ

Subscribe to Filmibeat Kannada
Darshan
'ಯೋಧ' ಚಿತ್ರ ಖಂಡಿತ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತದೆ ಎನ್ನುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಇಷ್ಟಕ್ಕೂ ಯೋಧನ ಕತೆ ಏನು ಎಂದು ಕೇಳಿದರೆ ನೀವು ಚಿತ್ರಮಂದಿರಕ್ಕೆ ಬಂದು ನೋಡಿದರನೇ ಚೆನ್ನ ಎಂಬ ಸಲಹೆಯನ್ನೂ ನೀಡುತ್ತಾರೆ ದರ್ಶನ್.ಯೋಧ ಹೊರತುಪಡಿಸಿದರೆ ದರ್ಶನ್ ಮತ್ತೆರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ಅಭಿನಯಿಸುತ್ತಿರುವ ಅಭಯ್ ಮತ್ತು ಬಾಸ್ ಚಿತ್ರಗಳು ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ.

ಅಭಯ್ ಚಿತ್ರಕ್ಕೆ ಒಂದೇ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಅದರ ಚಿತ್ರೀಕರಣಕ್ಕಾಗಿ ಶೀಘ್ರದಲ್ಲೇ ಜ್ಯ್ಯೂರಿಚ್ ಗೆ ತೆರಳುತ್ತಿದ್ದೇವೆ.ಹಾಗೆಯೇ ಬಾಸ್ ಚಿತ್ರಕ್ಕೆ ಎರಡು ಹಾಡುಗಳು ಬಾಕಿ ಇವೆ. ಬಾಸ್ ಚಿತ್ರದ ನಿರ್ಮಾಪಕ ರಮೇಶ್ ಯಾದವ್ ಒಟ್ಟೊಟ್ಟಿಗೆ ಹಲವಾರು ಚಿತ್ರಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಹಾಗಾಗಿ ಬಾಸ್ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ ಎಂಬ ವಿವರಗಳನ್ನು ದರ್ಶನ್ ನೀಡಿದ್ದಾರೆ.

'ಪೊರ್ಕಿ' ಚಿತ್ರ ಐದು ದಿನಗಳ ಚಿತ್ರೀಕರಣವನ್ನು ಮಾತ್ರ ಮುಗಿಸಿಕೊಂಡಿದೆ. ಇಷ್ಟೆಲ್ಲಾ ಚಿತ್ರಗಳ ನಡುವೆ ದರ್ಶನ್ ಹೆಚ್ಚಿನ ಸಮಯವನ್ನು ಮನೆಯವರೊಂದಿಗೆ ಕಳೆಯಲು ಸಾಧ್ಯವಾಗುತ್ತಿಲ್ಲವಂತೆ. ಹೆಂಡತಿ ಮತ್ತು ಏಳು ತಿಂಗಳ ಮಗ ವಿನೀಶ್ ದರ್ಶನ್ ಜತೆ ಒಂದಷ್ಟು ಸಮಯ ಕಳೆಯಲು ತೀರ್ಮಾನಿಸಿದ್ದಾರೆ. ವಿನೀಶ್ ಈಗಾಗಲೇ 'ಅಮ್ಮ' ಎಂದು ಕರೆಯಲು ಶುರುಮಾಡಿದ್ದಾನೆ ಎನ್ನುತ್ತಾರೆ ದರ್ಶನ್. ಯೋಧ ಜೂನ್ 19ಕ್ಕೆ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada