»   » ನಟ ಡಿಂಗ್ರಿ ನಾಗರಾಜ್ ಪ್ರಾಣಾಪಾಯದಿಂದ ಪಾರು

ನಟ ಡಿಂಗ್ರಿ ನಾಗರಾಜ್ ಪ್ರಾಣಾಪಾಯದಿಂದ ಪಾರು

Posted By:
Subscribe to Filmibeat Kannada

ಯಾಕೋ ಏನೋ ಹಾಸ್ಯ ನಟರ ನಸೀಬು ಚೆನ್ನಾಗಿಲ್ಲ ಅನ್ನಿಸುತ್ತದೆ. ಮೊನ್ನೆಮೊನ್ನೆ ಕಾರು ಅಪಘಾತದಲ್ಲಿ ಹಿರಿಯ ಹಾಸ್ಯ ಕಲಾವಿದ ಕರಿಬಸವಯ್ಯ ನಿಧನರಾದರು. ತೀರಾ ಇತ್ತೀಚೆಗೆ ಬುಲೆಟ್ ಪ್ರಕಾಶ್ ಕಾರು ಅಪಘಾತದಲ್ಲಿ ಕಾಲಿನ ಮೂಳೆ ಮುರಿದುಕೊಂಡಿದ್ದಾರೆ. ಈಗ ಮತ್ತೋರ್ವ ಹಿರಿಯ ಹಾಸ್ಯ ನಟ ಡಿಂಗ್ರಿ ನಾಗರಾಜ್‌ಗೆ ಕಾರು ಅಪಘಾತವಾಗಿದೆ.

ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆ.  (ಇದನ್ನೂ ಓದಿ: ಕರಿಬಸವಯ್ಯ ಕಾರು ಆಕ್ಸಿಡೆಂಟ್; ಡಿಂಗ್ರಿ ಹೇಳಿದ ಸತ್ಯ)


ಅಪಘಾತ ಎಲ್ಲಿ ಹೇಗೆ ಯಾವಾಗ ಸಂಭವಿಸಿತು ಎಂಬ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ತಿಳಿಯಬೇಕಾಗಿದೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಒನ್‌ಇಂಡಿಯಾ ಕನ್ನಡ ಹಾರೈಸುತ್ತದೆ. ಡಿಂಗ್ರಿ ನಾಗರಾಜ್ 380ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಬಡಕಲು ದೇಹ, ಕುಳ್ಳಗೆ, ಕೀರಲು ಧ್ವನಿಯ ಮೂಲಕವೇ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಪ್ರತಿಭಾವಂತ ಹಾಸ್ಯ ನಟ ಡಿಂಗ್ರಿ ನಾಗರಾಜ್. 'ಪರಸಂಗದ ಗೆಂಡೆ ತಿಮ್ಮ' (1977) ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಡಿಂಗ್ರಿ ಅದೆಷ್ಟೋ ಒಳ್ಳೊಳ್ಳೆ ಪಾತ್ರಗಳ ಮೂಲಕ ಗಮನಸೆಳೆದವರು. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ. (ಒನ್‌ಇಂಡಿಯಾ ಕನ್ನಡ)

English summary
Kannada films popular comedy actor Dingri Nagaraj injured in a road accident. He is out of danger. Now the actor is admitted to MS Ramaish hospital, Bangalore. More details are awaited.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada