»   »  ತರ್ಲೆ ಕೆಲಸಗಳೇ 'ಗುಂಡ್ರಗೋವಿ' ಹವ್ಯಾಸಗಳು!

ತರ್ಲೆ ಕೆಲಸಗಳೇ 'ಗುಂಡ್ರಗೋವಿ' ಹವ್ಯಾಸಗಳು!

Subscribe to Filmibeat Kannada
Gundragovi - The Haphazard youth!
ಶ್ರೀ ಸುದರ್ಶನ್ ಕ್ರಿಯೇಷನ್ಸ್ ಲಾಂಭನದಲ್ಲಿ ಗೋಪಾಲಕೃಷ್ಣ ಹಾಗೂ ಮಹೇಶ್ ನಿರ್ಮಿಸುತ್ತಿರುವ ಗುಂಡ್ರಗೋವಿ ಚಿತ್ರಕ್ಕೆ ಚಿಕ್ಕಮಗಳೂರು ಸುತ್ತಮುತ್ತ ಯಶಸ್ವಿಯಾಗಿ ಚಿತ್ರೀಕರಣ ನಡೆಸಿದ್ದು, ಎಡಿಟಿಂಗ್, ಡಬ್ಬಿಂಗ್ ಮುಗಿಸಿ ಇದೀಗ ಶೇಷಾದ್ರಿಪುರಂನ ದಿಯಾ ಸ್ಟುಡಿಯೋದಲ್ಲಿ ಕಳೆದ ಸೋಮವಾರದಿಂದ ರೀರೆಕಾರ್ಡಿಂಗ್ ಕಾರ್ಯ ನಡೆಯುತ್ತಿದೆ.

ಆ ದಿನಗಳು, ಸ್ಲಂ ಬಾಲ ಚಿತ್ರದಲ್ಲಿ ಗಮನ ಸೆಳೆವ ಪಾತ್ರದಲ್ಲಿ ಮಿಂಚಿದ್ದ ಸತ್ಯ ಈ ಚಿತ್ರದ ನಾಯಕ. ಸಂಪೂರ್ಣವಾಗಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವಂಥ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನಾಯಕ ಒಂಥರ ಬೀದಿ ಬಸವ. ಅವಿದ್ಯಾವಂತ, ತರ್ಲೆ ಕೆಲಸ ಮಾಡುವುದೇ ಆತನ ಹವ್ಯಾಸ. ಆದರೂ ಆತನಲ್ಲಿ ಒಂದು ವಿಶೇಷತೆ ಇರುತ್ತದಂತೆ. ಅದನ್ನು ತೆರೆಯ ಮೇಲೆ ನೋಡಿದರೆ ಚೆನ್ನ ಎನ್ನುತ್ತಾರೆ ನಿರ್ದೇಶಕದ್ವಯರಾದ ತಾರೇಶ್ ರಾಜು ಹಾಗೂ ಅನಿಲ್ ಕುಮಾರ್.

ಬಾಲಿವುಡ್‌ನಲ್ಲಿ ಹಲವಾರು ಚಿತ್ರಗಳಿಗೆ ಕೆಲಸ ಮಾಡಿದ ರಮೇಶ್ ಆಲ್ಬೆ ಈ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ. ಎ.ಆರ್. ರೆಹಮಾನ್ ಅವರ ಬಳಿ ಕೆಲಸ ಮಾಡಿದ ಫೀನಿಕ್ಸ್ ರಾಜು ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕಿ ನವ್ಯಶ್ರೀ ಈಗಾಗಲೇ 'ಐಡ್ಯಾ ಮಾಡ್ಯಾರ' ಎಂಬ ಹಾಸ್ಯ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ ಊರಿನ ಗೌಡ ಹಾಗೂ ಖಳನಾಯಕ. ನಾಯಕ ಸತ್ಯ ಹಾಗೂ ಶರತ್‌ಗೆ ಎಣ್ಣೆ-ಸೀಗೇಕಾಯಿ ಸಂಬಂಧ. ನೀನಾಸಂ ಅಶ್ವತ್ಥ್ ಹಾಗೂ ಆಶಾಲತಾ ಉಳಿದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಯುವ ವೈದ್ಯನ ಮನೋ ವೃತ್ತಾಂತವೇ 'ಮಿಂಚು'
ಕನ್ನಡದಲ್ಲಿ ತೇಲಿ ಬಂದ 'ಪೇಪರ್ ದೋಣಿ'
ತಮಿಳಿನ 'ಅನ್ನಿಯನ್' ಕನ್ನಡದಿಂದ ಕದ್ದ ಕತೆಯೇ?
ಜೊತೆಗಾರನಿಗೆ ಲವ್ಲಿಸ್ಟಾರ್ ಪ್ರೇಮ್ ಎಳ್ಳುನೀರು!
ನಟಿ ನಿರ್ಮಲಾ ಜತೆ ಗುಂಡ್ರಗೋವಿ ಸತ್ಯನ ಮದುವೆ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada