Just In
Don't Miss!
- Sports
ದೀಪಕ್ ಕೂಡಾಗೆ ಅಮಾನತಿನ ಬಿಸಿ ಮುಟ್ಟಿಸಿದ ಬರೋಡಾ ಕ್ರಿಕೆಟ್ ಮಂಡಳಿ
- Finance
ಕೊಟಕ್ ಮಹೀಂದ್ರಾದಿಂದ ತಕ್ಷಣವೇ ಹೋಮ್ ಲೋನ್ ಮಂಜೂರು ಸ್ಕೀಮ್
- News
ಅರ್ನಬ್ ವಾಟ್ಸಾಪ್ ಚಾಟ್ ಸೋರಿಕೆ: ಸರ್ಕಾರದ ಮೌನದ ಕುರಿತು ಸೋನಿಯಾ ಗಾಂಧಿ ತರಾಟೆ
- Lifestyle
ಪದೇ ಪದೇ ಬದಲಾಗುವ ನಿಮ್ಮ ಸಂಗಾತಿಯ ಭಾವನೆಗಳನ್ನು ಈ ರೀತಿ ಸರಿ ಮಾಡಿ
- Automobiles
ಅನಾವರಣವಾಯ್ತು 2021ರ ಕೆಟಿಎಂ 890 ಡ್ಯೂಕ್ ಬೈಕ್
- Education
KIOCL Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೂರರ ಸರದಾರ ಶಿವರಾಜ್ ಕುಮಾರ್‌ಗೆ ಬೆಳ್ಳಿಹಬ್ಬದ ಸಂಭ್ರಮ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಾಳಿನಲ್ಲಿ ಮತ್ತೊಂದು ಮಹಾಶಿವರಾತ್ರಿ ಬಂದಿದೆ. ಆದರೆ ಈ ಶಿವರಾತ್ರಿ ಹಲವಾರು ವಿಶೇಷತೆಗಳಿಂದ ಕೂಡಿದೆ. ಶಿವಣ್ಣ ಅಭಿನಯದ ನೂರನೇ ಚಿತ್ರ ಜೋಗಯ್ಯ ಧ್ವನಿಸುರುಳಿ ಮತ್ತು ಧ್ವನಿಮುದ್ರಿಕೆ ಮಹಾಶಿವರಾತ್ರಿಯಂದು(ಮಾ.2) ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲು ಅರಮನೆ ಮೈದಾನದಲ್ಲಿ ವೇದಿಕೆ ಸಿದ್ಧವಾಗಿದೆ.
ಫೆಬ್ರವರಿ 2011ಕ್ಕೆ ಶಿವರಾಜ್ ಕುಮಾರ್ ಬೆಳ್ಳಿಪರದೆಗೆ ಅಡಿಯಿಟ್ಟು 25 ವರ್ಷಗಳಾಗುತ್ತವೆ. ಮಾರ್ಚ್ 2ರಂದು ಶಿವಣ್ಣ ಮತ್ತು ಗೀತಾ ದಂಪತಿಗಳನ್ನು ಬೆಳ್ಳಿಹಬ್ಬದ ಸಂಭ್ರಮದಲ್ಲಿ ಸನ್ಮಾನಿಸಲಾಗುತ್ತದೆ. ಅಂದು ಸತತ ಮೂರು ಗಂಟೆಗಳ ಕಾಲ ಮನರಂಜನಾ ಕಾರ್ಯಕ್ರಮಗಳು ಪ್ರೇಕ್ಷಕರಿಗೆ ರಸದೌತಣ ನೀಡಲಿವೆ. ಇದೇ ಸಂದರ್ಭದಲ್ಲಿ ಜೋಗಯ್ಯ ಆಡಿಯೋ ಕೂಡ ಬಿಡುಗಡೆಯಾಗಲಿದೆ.
ಅಶ್ವಿನಿ ರೆಕಾರ್ಡಿಂಗ್ ಕಂಪನಿ ಹೊರತಂದಿರುವ 'ಜೋಗಯ್ಯ' ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ನಕಲು ಮಾಡಲು ಸಾಧ್ಯವಾಗದ 'ಲಾಕಿಂಗ್ ಸಿಸ್ಟಂ' ತಂತ್ರಜ್ಞಾನದ ಮೂಲಕ ಸಿಡಿಗಳನ್ನು ಹೊರತರಲಾಗುತ್ತಿದೆ. ಜೋಗಯ್ಯ ಚಿತ್ರದ ಮೂಲಕ ಪೈರಸಿ ಅಂತ್ಯ ಹಾಡಲು ನಿರ್ದೇಶಕ ಪ್ರೇಮ್ ದೃಢ ನಿಶ್ಚಯ ಮಾಡಿದಂತಿದೆ.
ಅರಮನೆ ಗಾಯತ್ರಿ ವಿಹಾರ್‌ನಲ್ಲಿ ಮಾರ್ಚ್ 2ರ ಮಹಾಶಿವರಾತ್ರಿಯಂದು ಸಂಜೆ 6.30ಕ್ಕೆ ಸಮಾರಂಭ ಆರಂಭವಾಗಲಿದೆ. ಕನ್ನಡ ಸಿನಿಮಾ ತಾರೆಗಳು ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಂಭ್ರಮ ಒಂದೆಡೆ ಮತ್ತೊಂದೆಡೆ ನೂರು ಚಿತ್ರಗಳಲ್ಲಿ ಅಭಿನಯಿಸಿದ ಸಂತಸ.