»   » ಚಿತ್ರರಂಗದ ದುಃಸ್ಥಿತಿಗೆ ವಿತರಕರು ಕಾರಣ: ಬರಗೂರು

ಚಿತ್ರರಂಗದ ದುಃಸ್ಥಿತಿಗೆ ವಿತರಕರು ಕಾರಣ: ಬರಗೂರು

Posted By:
Subscribe to Filmibeat Kannada
Baraguru Ramachandrappa
ಕನ್ನಡ ಚಿತ್ರಗಳ ಸೋಲಿಗೆ ವಿತರಕರ ಕೊರತೆಯೇ ಕಾರಣ ಎನ್ನಬಹುದು. ವಿತರಕರ ಕೊರತೆಯಿಂದಾಗಿ ಕನ್ನಡ ಚಿತ್ರರಂಗ ತೀರಾ ಸಂಕಷ್ಟ ಎದುರಿಸುತ್ತಿದೆ ಎಂದು ಹಿರಿಯ ಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ಭಾನುವಾರ ನಗರದಲ್ಲಿ ಆಯೋಜಿಸಿದ್ದ ತಮ್ಮ ನಿರ್ದೇಶನದ ಉಗ್ರಗಾಮಿ ಚಲನಚಿತ್ರದ ಪೂರ್ವಭಾವಿ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಪ್ರಸ್ತುತ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಇಲ್ಲವಾಗುತ್ತಿದೆ. ಒಳ್ಳೆಯ ಚಿತ್ರಗಳನ್ನು ಮಾಡಿದರೂ ಕೂಡ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಕೊರತೆಯಾಗುತ್ತಿದೆ.

ಇದರಿಂದಾಗಿ ವಿತರಕರು ಹೊಸ ಚಿತ್ರಗಳನ್ನು ಕೊಳ್ಳಲು ಮುಂದೆ ಬರುತ್ತಿಲ್ಲ. ನಿರ್ಮಾಪಕರು ಬಂಡವಾಳ ಹೂಡಿದ ಹಣವನ್ನೂ ಹಿಂಪಡೆಯಲಾಗದ ದುಸ್ಥಿತಿ ಬಂದೊದಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಉಗ್ರವಾದದ ಹಿನ್ನೆಲ್ಲೆಯಲ್ಲಿಉಂಟಾಗುವ ಸಾಮಾಜಿಕ ತೊಂದರೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು
ನಿರ್ಮಿಸಲಾಗಿದೆ.

ರಾಜ್ಯದಾದ್ಯಂತ ಒಟ್ಟು 100 ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹಲವಾರು ಸಂಘಸಂಸ್ಥೆಗಳು ನಿರ್ಮಾಪಕರಿಗೆ ಹಣ ನೀಡಿ ಪ್ರೇಕ್ಷಕರಿಗೆ ಉಚಿತ ಪ್ರದರ್ಶನದ ವ್ಯವಸ್ಥೆ ಕಲ್ಪಿಸಿವೆ ಎಂದು ರಾಮಚಂದ್ರಪ್ಪ ಹೇಳಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada