»   »  ತಮಿಳಿಗೆ ಜೋಶ್; ಹೊಸ ಹುರುಪಿನಲ್ಲಿ ಶಿವಮಣಿ

ತಮಿಳಿಗೆ ಜೋಶ್; ಹೊಸ ಹುರುಪಿನಲ್ಲಿ ಶಿವಮಣಿ

Subscribe to Filmibeat Kannada

ಹೊಸಬರು ನಟಿಸಿದ ಕನ್ನಡ ಯಶಸ್ವಿ ಚಿತ್ರ 'ಜೋಶ್' ತಮಿಳುನಾಡಿಗೆ ಹಾರಿದೆ. ಎಸ್ ವಿ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರ ತಮಿಳಿಗೆ ರೀಮೇಕ್ ಆಗುತ್ತಿದ್ದು ತಮಿಳಿನಲ್ಲಿ ಶಿವಮಣಿ ಜತೆ ಶರವಣನ್ ಅವರು ಕೈಜೋಡಿಸಿ ಆಕ್ಷನ್, ಕಟ್ ಹೇಳಲಿದ್ದಾರೆ. ಈ ಮೂಲಕ ನಿರ್ದೇಶಕರಾಗಿ ಶಿವಮಣಿ ತಮಿಳು ಚಿತ್ರರಂಗಕ್ಕೆ ಪ್ರವೇಶ ಪಡೆದಂತಾಗುತ್ತದೆ.

ಸಂಭಾಷಣೆಗೆ ನಂಜುಂಡ ಅವರನ್ನು ಅಂತಿಮಗೊಳಿಸಲಾಗಿದೆ. 'ಬುದ್ಧಿವಂತ' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ವಿಜಯ್ ಆಂತೋನಿ ಅವರು ತಮಿಳಿನ ಜೋಶ್ ಗೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಮೂಲ 'ಜೋಶ್' ಚಿತ್ರಕ್ಕೆ ಮತ್ತೊಂದಿಷ್ಟು ಒಗ್ಗರಣೆ ಹಾಕಿ ಎಸ್ ವಿ ಬಾಬು ಅವರೇ ಈ ಚಿತ್ರವನ್ನು ನಿರ್ಮಿಸುತ್ತಿರುವುದು ವಿಶೇಷ.

ಮುಖ್ಯಭೂಮಿಕೆಯಲ್ಲಿ ತಮಿಳಿನ ಜನಪ್ರಿಯ ನಿರ್ದೇಶಕರ ಮಕ್ಕಳು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಕೆ ಭಾಗ್ಯರಾಜ್, ರಾಜೇಶ್, ಕಾರ್ತಿಕ್ ಮತ್ತು ಸಾಹಸ ನಿರ್ದೇಶಕ ಮತ್ತು ನಿರ್ದೇಶಕರ ಮಕ್ಕಳನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ. ಹೊಸ ಮುಖಗಳಿಗಾಗಿ ಶಿವಮಣಿ ಆಡಿಷನ್ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ತಮಿಳಿನಲ್ಲಿ 'ಜೋಶ್'ಗೆ ಬದಲಾಗಿ ಹೊಸ ಶೀರ್ಷಿಕೆ ಇಡುವ ಬಗ್ಗೆ ಚಿಂತನೆ ನಡೆಯುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada