»   » ಗಾಂಧಿನಗರಕ್ಕೆ ಸದ್ಯದಲ್ಲೇ ಅಪ್ಪಳಿಸಲಿದೆ ತೂಫಾನ್!

ಗಾಂಧಿನಗರಕ್ಕೆ ಸದ್ಯದಲ್ಲೇ ಅಪ್ಪಳಿಸಲಿದೆ ತೂಫಾನ್!

Posted By:
Subscribe to Filmibeat Kannada
yashas-surya
"ತೂಫಾನ್" ಹೀಗೊಂದು ಆಕರ್ಷಕ ಹಾಗೂ ಪವರ್ ಫುಲ್ ಶೀರ್ಷಿಕೆಯುಳ್ಳ ಚಿತ್ರ ಸದ್ಯದಲ್ಲೇ ಗಾಂಧಿನಗರ ಹಾಗೂ ಕರ್ನಾಟಕದಾದ್ಯಂತ ಸಿನಿಮಾ ಮಂದಿರದ ತೆರೆಯ ಮೇಲೆ ಅಪ್ಪಳಿಸಲಿದೆ. "ಯಶಸ್ ಸೂರ್ಯ" ಎಂಬ ಸ್ಪುರದ್ರೂಪಿ ನವನಟ, ನಾಯಕನಾಗಿರುವ ಈ ಚಿತ್ರ, ಹೆಸರಿನಲ್ಲಿಯೇ ಇರುವ ವಿಶೇಷತೆಯಿಂದಾಗಿ ಮುಹೂರ್ತವಾದ ದಿನದಂದೇ ಎಲ್ಲರಲ್ಲಿ ನಿರೀಕ್ಷೆ ಮೂಡಿಸಿದೆ.

ಸ್ಮೈಲ್ ಶ್ರೀನಿವಾಸ್ ಎಂಬ ಹೊಸ ನಿರ್ದೇಶಕರ ನಿರ್ದೇಶನದಲ್ಲಿ ಈಗಾಗಲೇ ಚಿತ್ರೀಕರಣವನ್ನು ಮುಗಿಸಿರುವ ತೂಫಾನ್ ಚಿತ್ರದ ನಿರ್ಮಾಪಕರು ಎಚ್. ಜಡೇಗೌಡ್ರು. ತೆಲುಗಿನಿಂದ ಆಮದಾಗಿರುವ ನಟಿ "ನಕ್ಷತ್ರ" ಈ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಕನ್ನಡದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

"ಶಿಶಿರ" ಚಿತ್ರದಲ್ಲಿ ನೀಡಿರುವ ಮನೋಜ್ಞ ಅಭಿನಯದ ಮೂಲಕ ಈಗಾಗಲೇ ಭರವಸೆ ಮೂಡಿಸಿರುನ ನಾಯಕನಟ ಯಶಸ್, ಈ ಚಿತ್ರದ ಬಗ್ಗೆ ಸಾಕಷ್ಟು ಭರವಸೆ ಇಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಈಗಾಗಲೇ ಆಡಿಯೋ ರಿಲೀಸ್ ಮುಗಿಸಿರುವ ತೂಫಾನ್ ಹಾಡುಗಳು ಜನರ ಮನೆ-ಮನೆ ತಲುಪಿಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಖಾಸಗಿ ಟಿವಿ ವಾಹಿನಿ ನಿರೂಪಕ 'ಚಂದನ್' ಕೂಡ ಒಂದು ಪ್ರಮುಖ ಪಾತ್ರದಲ್ಲಿದ್ದಾರೆ.

ಹೊಸಬರ ಹಾಗು ಹಳಬರ ಸಿನಿಮಾ ಎಂಬ ಬೇಧವಿಲ್ಲದೇ ಕೇವಲ ಜನರ ಅಭಿರುಚಿಯನ್ನೇ ಅವಲಂಬಿಸಿ ಗೆಲ್ಲಬೇಕಾಗಿರುವ ಈ ದಿನಗಳಲ್ಲಿ ಬರಲಿರುವ ತೂಫಾನ್ ಥಿಯೇಟರಿನಲ್ಲಿ ಓಡುತ್ತದೆ, ಥಿಯೇಟರಿನಿಂದಲ್ಲ ಎಂಬುದು ತೂಫಾನ್ ಟೀಮ್ ಅನಿಸಿಕೆ. ಕಾಲ ನಿರ್ಧರಿಸಲಿದೆ, ಕಾಯಲೇಬೇಕು!

English summary
New film "Toofan" is releasing very shortly in sandalwood. This is the film of new team. It is already created a wave in gandhinagar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada