»   » ಪವರ್ ಸ್ಟಾರ್ ಇಲ್ಲದ 'ಪುನೀತ್' ಅದೆಷ್ಟು ಪವರ್ ಫುಲ್ ?

ಪವರ್ ಸ್ಟಾರ್ ಇಲ್ಲದ 'ಪುನೀತ್' ಅದೆಷ್ಟು ಪವರ್ ಫುಲ್ ?

Posted By:
Subscribe to Filmibeat Kannada
Puneeth
ಪವರ್ ಸ್ಟಾರ್ ಪುನೀತ್ ಪವರ್ ಫುಲ್ ಎಂಬುದು ಕರುನಾಡಿಗೇ ಗೊತ್ತು. ಅದೇ ಪುನೀತ್ ಪವರ್. ಈ ವಿಷ್ಯ ಈಗ್ಯಾಕಪ್ಪಾ ಅಂದ್ರೆ 'ಪುನೀತ್' ಚಿತ್ರದ ಮೊದಲ ಪ್ರತಿ ರೆಡಿಯಾಗಿದೆ. ಅರೇ ಇದ್ಯಾವ ಪುನೀತ್ ಹೊಸ ಚಿತ್ರ ಅಂತೀರಾ? ಇದು 'ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್' ಇಲ್ಲದ ಪುನೀತ್ ಚಿತ್ರ. ಅವರ ಸಿನಿಮಾ ಗೆಲ್ಲೋದು ಮಾಮೂಲಿ ವಿಷಯ. ಆದ್ರೆ ಅವರ ಹೆಸರಿನ ಸಿನಿಮಾ ರೆಡಿಯಾಗಿದೆ. ಅವರ ಹೆಸರಿನ ಚಿತ್ರ ಗೆಲ್ಲುತ್ತೋ ಬಿಡುತ್ತೋ ಅದು ಬೇರೆ ವಿಷ್ಯ. ಆದ್ರೆ ಅವರ ಹೆಸರಿನಲ್ಲಿ ಸಿನಿಮಾ ಆಗಿದೆ, ಅದು ಗ್ರೇಟ್.

ಅವರ ಮೇಲಿನ ಅಭಿಮಾನಕ್ಕೆ ಅವರ ಹೆಸರನ್ನೇ ಚಿತ್ರಕ್ಕಿಟ್ಟು ಅವರಿಂದಲೇ ಆಡಿಯೋ ಬಿಡುಗಡೆ ಮಾಡಿಸಿಕೊಂಡು ಕೋಡು ಮೂಡಿಸಿಕೊಂಡಿರುವ ಚಿತ್ರ 'ಪುನೀತ್'. ಹಾಡುಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ನೀಲ್ ಕಮಲ್ ನಿರ್ದೇಶನ ಮಾಡಿರುವ ಈ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ದಿಲೀಪ್ ಪೈ ಹಾಗೂ ನಿಶಾ ಶೆಟ್ಟಿ ಜೋಡಿ ಪ್ರಮುಖ ಪಾತ್ರದಲ್ಲಿದ್ದಾರೆ. ಭವ್ಯ, ರಾಮಕೃಷ್ಣ ಕೂಡ ಇದ್ದಾರೆ. ನಿರ್ದೇಶಕರಿಗೆ ಇದು ಮೊದಲ ಚಿತ್ರ ಎಂಬುದು ಎಲ್ಲರ ಗಮನಕ್ಕಿರಲಿ.

ಚಿತ್ರದ ಕ್ಲೈಮ್ಯಾಕ್ಸ್ ವಿಭಿನ್ನವಾಗಿದ್ದು ಪ್ರೇಕ್ಷಕರನ್ನು ಸೆಳೆಯುವಂತಿದೆ ಎಂಬುದು ನಿರ್ದೆಶಕರ ಹೇಳಿಕೆ. ಆದರೆ ಆರಂಭ ಚೆನ್ನಾಗಿಲ್ಲ ಅನ್ನೋದು ಅದರ ಅರ್ಥ ಆಗಿರಲಿಕ್ಕಿಲ್ಲ. ಹಾಗಾಗಿ ಅವರು ಹೇಳುವಂತೆ ಇದು ಬಹಳ ರುಚಿಯಾದ ಊಟ. ಸಿನಿಮಾ ಮುಗಿಯುವಾಗ ಪ್ರೇಕ್ಷಕರ ಕಣ್ಣು ಒದ್ದೆಯಾಗುವುದು ಗ್ಯಾರಂಟಿ ಎಂದಿದ್ದಾರೆ ನಿರ್ದೇಶಕರು. ಆದರೆ ಅಲ್ಲಿಯವರೆಗೆ ಪ್ರೇಕ್ಷಕರು ಕುಳಿತಿದ್ದರೆ ಸಾಕು!

English summary
Kannada movie Puneeth first copy got ready. Its audio released by power star Puneet Rajkumar. It is a very good movie to watch according to the director neel kamal.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada