For Quick Alerts
  ALLOW NOTIFICATIONS  
  For Daily Alerts

  ನೀ ಬರೆದ ಕಾದಂಬರಿ ಮಾಸ್ಟರ್ ಅರ್ಜುನ್ ಮದುವೆ

  By Rajendra
  |

  ಬಾಲ ಕಲಾವಿದನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮಾಸ್ಟರ್ ಅರ್ಜುನ್ ಭಾನುವಾರ (ಫೆ.27) ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಬಿ ಕೆ ದಿವ್ಯಾ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಅರ್ಜುನ್ ಬರಮಾಡಿಕೊಂಡರು. ಇವರ ಮದುವೆ ಬೆಂಗಳೂರು ಇಂದಿರಾನಗರದ ಎನ್ ಡಿ ಕೆ ಕಲ್ಯಾಣ ಮಂಟಪದಲ್ಲಿ ನಡೆಯಿತು.

  ನಟಿ ಭವ್ಯಾ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ಮುಖ್ಯಭೂಮಿಕೆಯಲ್ಲಿರುವ 'ನೀ ಬರೆದ ಕಾದಂಬರಿ' ಚಿತ್ರದಪುಟ್ಟ ಪಾತ್ರದಲ್ಲಿ ಅರ್ಜುನ್ ಗಮನಸೆಳೆದಿದ್ದರು. ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ ಎಂದು ಭವ್ಯಾ ಹಾಡುತ್ತಿದ್ದರೆ ಅರ್ಜುನ್ ಅಮ್ಮಾ ಅಮ್ಮಾ... ಎಂದು ಬರುವ ಹಾಡನ್ನು ಚಿತ್ರರಸಿಕರು ಇನ್ನೂ ಮರೆತಿಲ್ಲ.

  'ಅಬ್ಬಬ್ಬ ಎಂಥಾ ಹುಡುಗ' ಎಂಬ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅರ್ಜುನ್ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಆ ಚಿತ್ರವನ್ನು ಅರ್ಜುನ್ ಅವರ ತಂದೆ ಅರುಣ್ ನಿರ್ಮಿಸಿದ್ದರು. ಅರ್ಜುನ್ ಅವರ ಮದುವೆಗೆ ಕನ್ನಡ ಚಿತ್ರರಂಗದ ಬಹುತೇಕ ಗಣ್ಯರು ಆಗಮಿಸಿ ನೂತನ ದಂಪತಿಗಳಿಗೆ ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಎಂದು ಹಾರೈಸಿದರು.

  English summary
  Kannada actor popularly known as Master Arjun and Divya have tie the knot on Sunday (Feb 27) in Bangalore. Who is he now? Arjun is still known as Master Arjun for he was a popular child actor and is known mainly for his roles as a child artiste. Master Arjun acted in Nee Bareda Kadambri and Abbabba Entha Huduga etc movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X