»   »  ಆಪ್ತರಕ್ಷಕ ವಿಷ್ಣುವರ್ಧನ್ ಗೆ ಜತೆಯಾದ ನಿಖಿತಾ

ಆಪ್ತರಕ್ಷಕ ವಿಷ್ಣುವರ್ಧನ್ ಗೆ ಜತೆಯಾದ ನಿಖಿತಾ

Posted By:
Subscribe to Filmibeat Kannada
Nikhita
ವಂಶಿ ಚಿತ್ರದಲ್ಲಿ ಪುನೀತ್ ಜೊತೆ ಕುಣಿದು ಕುಪ್ಪಳಿಸಿದ್ದ ನಟಿ ನಿಖಿತಾರ ಅದೃಷ್ಟ ಖುಲಾಯಿಸಿದೆ. ದರ್ಶನ್, ಸುದೀಪ್, ಉಪೇಂದ್ರ ಹಾಗೂ ಜಗ್ಗೇಶ್ ಅವರೊಂದಿಗೆ ನಾಯಕಿಯಾಗಿ ನಟಿಸಿದ ನಂತರ ನಿಖಿತಾಗೆ ಸಾಹಸ ಸಿಂಹ ವಿಷ್ಣುವರ್ಧನ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ವಿಷ್ಣುರ ಭಾರಿ ಬಜೆಟ್ ನ 200 ನೇ ಚಿತ್ರ ಆಪ್ತರಕ್ಷಕದಲ್ಲಿ ನಟಿಸುವ ಸಿದ್ಧತೆಯಲ್ಲಿದ್ದಾರೆ ನಿಖಿತಾ.

ಆಪ್ತರಕ್ಷಕ ಚಿತ್ರಕ್ಕೆ ತೆಲುಗು ಚಿತ್ರರಂಗದ ಬಹುಬೇಡಿಕೆ ನಟಿ ಸ್ನೇಹ ನಾಯಕಿಯಾಗಬೇಕಿತ್ತು. ನಂತರ ಲಕ್ಷ್ಮಿ ಗೋಪಾಲಸ್ವಾಮಿ ಅವರ ಹೆಸರು ಕೂಡ ಕೇಳಿ ಬಂದಿತ್ತು. ಮೀರಾ ಜಾಸ್ಮಿನ್, ನವ್ಯಾ ನಾಯರ್ ಹೆಸರುಗಳು ಚಾಲ್ತಿಯಲ್ಲಿದ್ದವು. ಆದರೆ ಅವೆಲ್ಲಾ ಹುಸಿಯಾಗಿ ನಿಖಿತಾ ಅವರು ವಿಷ್ಣುವರ್ಧನ್ ಮುಂದೆ ಬಂದು ನಿಂತಿದ್ದಾರೆ. ಇದೇ ಮೊದಲ ಬಾರಿಗೆ ವಿಷ್ಣು ವರ್ಧನ್ ಜೊತೆ ನಿಖಿತಾ ಬಣ್ಣ ಹಚ್ಚುತ್ತಿರುವುದು ವಿಶೇಷವಾಗಿದೆ. ಶಿವರಾಜ್ ಕುಮಾರ್ ಹೊರತುಪಡಿಸಿ ಕನ್ನಡದಎಲ್ಲ ಪ್ರಮುಖ ನಾಯಕ ನಟರೊಂದಿಗೆ ನಿಖಿತಾನಟಿಸಿದಂತಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಂದು ಆಪ್ತಮಿತ್ರ ಇಂದು ಆಪ್ತರಕ್ಷಕನಾದ ವಿಷ್ಣು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada