twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದಲ್ಲಿ ತೇಲಿ ಬಂದ 'ಪೇಪರ್ ದೋಣಿ'

    By Staff
    |

    Naveen Krishna
    ಒಂದು ಚಿತ್ರ ನಿರ್ಮಿಸುವ ಯೋಚನೆ ಬಂದಾಗ ಮೊದಲು ಆಕರ್ಷಕವಾದ ಶೀರ್ಷಿಕೆ ಹುಡುಕಬೇಕು. ಅಂಥಾ ವಿಶಿಷ್ಟವಾದ ಶೀರ್ಷಿಕೆ ಶೋಧಿಸುವಲ್ಲಿ ಆರ್.ಕೆ. ನಾಯಕ್ ಯಶಸ್ವಿಯಾಗಿದ್ದಾರೆ. 'ಪೇಪರ್ ದೋಣಿ' ಹೆಸರಿನ ಈ ಚಿತ್ರದ 6 ಹಾಡುಗಳ ಧ್ವನಿಮುದ್ರಣ ಕಳೆದ ವಾರ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸರಳ ಸಮಾರಂಭದೊಂದಿಗೆ ನೆರವೇರಿತು.

    ಜೈಸುಮನ್ ಅವರು ಈ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೇ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಹಲವಾರು ಹೆಸರಾಂತ ನಿರ್ದೇಶಕರ ಜೊತೆ ಹಾಗೂ ನಿರ್ದೇಶಕ ನಾಗಣ್ಣ ಅವರ ಹೆಚ್ಚಿನ ಚಿತ್ರಗಳಿಗೆ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ಆರ್.ಕೆ. ನಾಯಕ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಶ್ರೀರಾಜರಾಜೇಶ್ವರಿ ಕ್ರಿಯೇಷನ್ಸ್ ಮೂಲಕ ಜಿ. ಜನಾರ್ಧನ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

    ಇದೊಂದು ವಿಭಿನ್ನ ಕಥಾನಕವಾಗಿದ್ದು, ಯುವಕರು ಮನಸ್ಸು ಮಾಡಿದರೆ ಎಂಥಾ ಮಹತ್ಕಾರ್ಯವನ್ನಾದರೂ ಸಾಧಿಸಬಹುದು. ಅದಕ್ಕೊಂದು ಸ್ಫೂರ್ತಿ ಇರಬೇಕು. ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡರೆ ಏನನ್ನಾದರೂ ಸಾಧಿಸಬಹುದು. ಅದು ಹಠದಿಂದ ಆಗಬಹುದು, ಪ್ರೀತಿಯಿಂದ ಅಥವಾ ಛಲದಿಂದಲೂ ಆಗಬಹುದು. ಸಾಧಿಸಲು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಇದೇ ಎಳೆಯನ್ನಿಟ್ಟುಕೊಂಡು 'ಪೇಪರ್ ದೋಣಿ' ಚಿತ್ರದ ಕಥೆ-ಚಿತ್ರಕಥೆಯನ್ನು ನಿರ್ದೇಶಕ ಆರ್.ಕೆ. ನಾಯಕ ರಚಿಸಿದ್ದಾರೆ.

    ಆನಂದ್ ಅವರ ಛಾಯಾಗ್ರಹಣ, ರಾಜೇಶ್ ಅವರ ಸಹನಿರ್ದೇಶನ, ಚಂದು ಅವರ ಸಂಕಲನ ಈ ಚಿತ್ರಕ್ಕಿದ್ದು, ಸು.ರುದ್ರುಮುನಿ ಶಾಸ್ತ್ರಿ, ಮಹೇಶ ಮಳವಳ್ಳಿ, ಆನಂದರಾಮ್, ದಿನೇಶ್ ಬಾಬು ಸಾಹಿತ್ಯ ರಚಿಸಿದ್ದಾರೆ. ನವೀನ್ ಕೃಷ್ಣ ಹಾಗೂ ಶಾಂತಲಾ ಈ ಚಿತ್ರದ ನಾಯಕ-ನಾಯಕಿ ಪಾತ್ರದಲ್ಲಿದ್ದು, ಜಗದೀಶ ಪವಾರ್ ಎರಡನೇ ನಾಯಕನಾಗಿದ್ದಾರೆ. ಪರಮೇಶ ಹರ್ತಿ ಎಂಬ ಹೊಸ ಪ್ರತಿಭೆ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    ಸುದೀಪ್, ರಮ್ಯಾ ಚಿತ್ರದಲ್ಲಿ ಖಳನಟನಾಗಿ ಕೆ.ಮಂಜು!
    ಕನ್ನಡ ನಿರ್ಮಾಪಕರಿಗೆ ಕಾಯ್ಕಿಣಿ ಕಿವಿಮಾತು
    ತಮಿಳಿನ 'ಅನ್ನಿಯನ್' ಕನ್ನಡದಿಂದ ಕದ್ದ ಕತೆಯೇ?
    ಜೊತೆಗಾರನಿಗೆ ಲವ್ಲಿಸ್ಟಾರ್ ಪ್ರೇಮ್ ಎಳ್ಳುನೀರು!

    Tuesday, April 28, 2009, 15:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X