»   » ಅಂಧರಿಗೆ ಬೆಳಕಾದ ರೇಡಿಯೋ ಮಿರ್ಚಿ ಹರಾಜು

ಅಂಧರಿಗೆ ಬೆಳಕಾದ ರೇಡಿಯೋ ಮಿರ್ಚಿ ಹರಾಜು

By: * ಮಹೇಶ್ ಮಲ್ನಾಡ್
Subscribe to Filmibeat Kannada

ಇತ್ತೀಚೆಗೆ ಐಪಿಎಲ್ ಹರಾಜಿನಲ್ಲಿ ಆದ ಗೊಂದಲ ಎಲ್ಲರಿಗೂ ತಿಳಿದೇ ಇದೆ. ಆದರೆ ರೇಡಿಯೋ ಎಫ್ ಎಂ ಲೋಕದಲ್ಲಿ ಕೂಡ ವಿನೂತನ ಹರಾಜು ಪ್ರಕ್ರಿಯೆ ನಡೆಯಿತು. ಕನ್ನಡದ ಖ್ಯಾತ ನಟರಾದ ಪವರ್ ಸ್ಟಾರ್ ಪುನೀತ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರುಗಳ ಹಸ್ತಾಕ್ಷಾರವುಳ್ಳ ಕಾಫಿ ಮಗ್ ಗಳನ್ನು ಹರಾಜು ಮಾಡಲಾಯಿತು. ಇದರಲ್ಲಿ ಬಂದ ಹಣವನ್ನು ಅಂಧಮಕ್ಕಳ ಶಾಲೆಗೆ ನೀಡಿ ಆರ್ ಜೆ ಅವಿನಾಶ್ ಸಾರ್ಥಕತೆ ನಗೆ ಬೀರಿದರು.

ಹಳೆ ನಾಯಕಿಯ ರೆಟ್ರೋ ರಾಣಿ, ಸಕತ್ ಹಾಟ್ ಸ್ಟಾರ್ ಸ್ಪರ್ಧೆ, ಸಂಕ್ರಾಂತಿಗೆ ಕೊಂಬುಮೇಳೆ ಹೀಗೆ ವಿನೂತನ ಸ್ಪರ್ಧೆಗಳನ್ನು ಆಯೋಜಿಸಿ, ಜನಮನ ಗೆದ್ದಿರುವ ರೇಡಿಯೋ ಮಿರ್ಚಿ 98.3 ಎಫ್ ಎಂ ವಾಹಿನಿಯ ಅತಿ ಜನಪ್ರಿಯ ಕಾರ್ಯಕ್ರಮಗಳಲ್ಲಿ ಬಿಟ್ಟಿ ಟೀಕೆಟ್ (ಸೋಮವಾರದಿಂದ ಶನಿವಾರ ಮಧ್ಯಾನ್ಹ2 ರಿಂದ ಸಂಜೆ 5)ಕೂಡ ಒಂದು. ಬಾಲ್ಕನಿ ಬಾದ್ ಷಹ ಆರ್ ಜೆ ಅವಿನಾಶ್ ಅವರು ಕನ್ನಡದ ಶ್ರೋತೃಗಳಿಗೆ ಬಿಟ್ಟಿ ಟಿಕೆಟ್ ಹಂಚುವ ಜೊತೆಗೆ ರಿಯಲ್, ಪವರ್ ಹಾಗೂ ಗೋಲ್ಡನ್ ಸ್ಟಾರ್ ಗಳು ಪ್ರೀತಿಯಿಂದ ಸಹಿಹಾಕಿರುವ ಮಗ್ ಗಳನ್ನು ಹರಾಜು ಹಾಕುವ ಕಾರ್ಯಕ್ಕೆ ಮುಂದಾದರು.

20 ರೂ ನಿಂದ ಆರಂಭವಾದ ಬಿಡ್ ಕೊನೆಗೆ 2,500 ರು ವರೆಗೂ ಮುಟ್ಟಿತು. ಒಟ್ಟಾರೆ ಹರಾಜಿನಲ್ಲಿ 5,500 ರೂ ಸಂಗ್ರಹಿಸಲಾಯಿತು. ಉಪೇಂದ್ರ ಅವರ ಕಟ್ಟಾ ಅಭಿಮಾನಿ ಲಕ್ಷ್ಮಣ್ ಅವರು ಉಪ್ಪಿ ಹಸ್ತಾಕ್ಷರ ಮಗ್(mug)ಗೆ 2500 ರೂ ತನಕ ಬಿಡ್ ಕೂಗಿದರು. ಗಣೇಶ್ ಮಗ್ ಗೆ 2,025 ರು ಎಂದು ಲಕ್ಷ್ಮಿ ಎಂಬುವರು ಬಿಡ್ ಮಾಡಿದರೆ, ಪುನೀತ್ ಮಗ್ 1,051 ರೂ ಗಳಿಗೆ ಡಾ. ನಾಥನ್ ಪಾಲಾಯಿತು.

ಅಭಿಮಾನಿಗಳ ಬಿಡ್ಡಿಂಗ್ ಹಾಗೂ ಸದಭಿರುಚಿಯ ಹರಾಜು ಪ್ರಕ್ರಿಯೆಯಿಂದ ಖುಷಿಗೊಂಡ ಆರ್ ಜೆ ಅವಿನಾಶ್ ತಮ್ಮ ಕಿಸೆಯಿಂದ ಸಾವಿರದ ನೋಟನ್ನು ಸೇರಿಸಿ, ರಮಣ ಮಹರ್ಷಿ ಅಂಧ ಮಕ್ಕಳ ಶಾಲೆಗೆ 6,500 ರೂ ಗಳ ಚೆಕ್ ನೀಡಿದರು. ಐಪಿಎಲ್ ಹರಾಜು ಬಗ್ಗೆ ಸುದ್ದಿ ತಿಳಿದಾಗ ಈ ರೀತಿ ಬಿಡ್ಡಿಂಗ್ ಐಡಿಯಾ ಹೊಳೆಯಿತು. ಅಂಧ ಮಕ್ಕಳಿಗೆ ಇದು ಅಲ್ಪಸಹಾಯವಾದರೂ ಅಭಿಮಾನಿಗಳ ಹಾರೈಕೆ ಅವರೊಂದಿಗೆ ಸದಾ ಇರುತ್ತದೆ . ನನಗಂತೂ ಖುಷಿ ಕೊಟ್ಟಿದೆ ಎನ್ನುತ್ತಾರೆ ಆರ್ ಜೆ ಅವಿನಾಶ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada