»   »  ರಾವಣನಿಗೆ ಜೊತೆಯಾದ ಪಡುಕೋಣೆ ಬೆಡಗಿ

ರಾವಣನಿಗೆ ಜೊತೆಯಾದ ಪಡುಕೋಣೆ ಬೆಡಗಿ

Subscribe to Filmibeat Kannada
'ರಾವಣ' ಚಿತ್ರಕ್ಕೆ ನಾಯಕಿಯಾಗಿ ನಟಿಸಲು ಪಡುಕೋಣೆಯಿಂದ ಬೆಡಗಿಯೊಬ್ಬರು ಬಂದಿದ್ದಾರೆ. ಹಾಗಿದ್ದರೆ ಈಕೆ ದೀಪಿಕಾ ಪಡೆಕೋಣೆಯೇ ಇರಬೇಕು ಎಂದು ನೀವು ಭಾವಿಸಿದ್ದೇ ಆದರೆ ನಿಮ್ಮ ಊಹೆ ಸುಳ್ಳು! ಯೋಗೀಶ್ ಜತೆ ನಾಯಕಿಯಾಗಿ ನಟಿಸುತ್ತಿರುವುದು ಪಡುಕೋಣೆಯ ಮತ್ತೊಬ್ಬ ಬೆಡಗಿ ಸಂಚಿತಾ.

ಸಂಚಿತಾ ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಪಡುಕೋಣೆಯವರು. ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಪ್ರಕಾಶ್, ದೀಪಿಕಾ ಪಡುಕೋಣೆ ಅವರದ್ದೇ ಊರು. ಸಂಚಿತಾ ಪಡುಕೋಣೆ ಚೆಲುವಿನಲ್ಲಿ ದೀಪಿಕಾರಿಗಿಂತಲೂ ಏನೂ ಕಮ್ಮಿ ಇಲ್ಲ. ಪಡುಕೋಣೆಯಿಂದ ಬಂದ ದೀಪಿಕಾ ಇಂದು ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಆದರೆ ತಾನು ನಟಿಸಿದ್ದು ಮೊದಲು ಕನ್ನಡ ಚಿತ್ರದಲ್ಲಿ ಎಂದು ಹೇಳಿಕೊಳ್ಳಲು ಅವರಿಗೆ ಯಾಕೋ ಏನೋ ಮುಜುಗರ. ಆದರೆ ಸಂಚಿತಾ ಹಾಗಾಗದಿರಲಿ ಎಂದು ಆಶಿಸೋಣ!?

ಅಂದಹಾಗೆ 'ರಾವಣ' ತಮಿಳಿನ 'ಕಾದಲ್ ಕೊಂಡೇನ್' ಚಿತ್ರದ ರೀಮೇಕ್. ಯೋಗೀಶ್ ಅಭಿನಯಿಸುತ್ತಿರುವ ರಾವಣ ಚಿತ್ರೀಕರಣ ಮಂಗಳವಾರದಿಂದ ಆರಂಭವಾಗಿದೆ.ಉದಯ್ ಕೆ.ಮೆಹ್ತ, ಮೋಹನ್ ಜಿ ನಾಯಕ ನಿರ್ಮಿಸುತ್ತಿರುವ ಚಿತ್ರಕ್ಕೆ ಯೋಗೀಶ್ ಹುಣಸೂರು ನಿರ್ದೇಶಕರು. ಕ್ಯಾಮೆರಾ ಆರ್.ಗಿರಿ, ಸಂಚಿತಾ ಜೊತೆ ಶ್ರೀನಿವಾಸ ಮೂರ್ತಿ, ದ್ವಾರಕೀಶ್, ನೀನಾಸಂ ಅಶ್ವತ್ಥ್, ಸಂತೋಷ್ ಮುಂತಾದವರು ಅಭಿನಯಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಸಂಚಿತಾ ಪಡುಕೋಣೆ ಮೋಹಕ ಚಿತ್ರಪಟಗಳು!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada