For Quick Alerts
  ALLOW NOTIFICATIONS  
  For Daily Alerts

  ಕಟೀಲು ದುರ್ಗಾ ಪರಮೇಶ್ವರಿಗೆ ಶಿಲ್ಪಾ ಶೆಟ್ಟಿ ವಿಶೇಷ ಪೂಜೆ

  By Rajendra
  |

  ಮದುವೆಯ ಬಳಿಕ ತನ್ನ ಪತಿ ರಾಜ್ ಕುಂದ್ರಾ ಜೊತೆ ಇದೇ ಮೊದಲ ಬಾರಿಗೆ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ತವರಿಗೆ ಸೋಮವಾರ(ಮಾ.28) ಆಗಮಿಸಿದರು. ಈ ಸಂದರ್ಭದಲ್ಲಿ ಅವರು ಕಟೀಲು ದೇವಾಲಯಕ್ಕೆ ಭೇಟಿ ನೀಡಿ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಶಿಲ್ಪಾ ಅವರ ತಾಯಿ ಸುನಂದಾ ಶೆಟ್ಟಿ ಹಾಗೂ ಕುಟುಂಬ ಸದಸ್ಯರು ಜೊತೆಗಿದ್ದರು.

  ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಿಲ್ಪಾ, ಟೀಂ ಇಂಡಿಯಾ ಈ ಬಾರಿಯ ವಿಶ್ವಕಪ್‌ ಕ್ರಿಕೆಟ್ ಗೆಲ್ಲಲಿ ಎಂದು ಶುಭ ಹಾರೈಸಿದರು. ಇದಕ್ಕೂ ಮುನ್ನ ಶಿಲ್ಪಾ ಅವರು ತಮ್ಮ ತವರುರಾದ ನಿಡ್ಡೋಡಿ ಬಳಿಯ ಮುದಲಾಡಿಗೆ ಭೇಟಿ ನೀಡಿದರು. ಅಲ್ಲಿನ ನೆರೆಹೊರೆಯರೊಂದಿಗೆ ತುಳು ಭಾಷೆಯಲ್ಲಿ ಮಾತನಾಡುತ್ತಾ ತಮ್ಮ ಹಳೆಯ ನೆನಪುಗಳಲ್ಲಿ ವಿಹರಿಸಿದ್ದು ಚೇತೋಹಾರಿ ಅನುಭವ ಎಂದಿದ್ದಾರೆ.

  ಇಂದು ಬೆಳಗ್ಗೆ 9 ಗಂಟೆಗೆಲ್ಲಾ ಆಗಮಿಸಿದ ಶಿಲ್ಪಾ ಪೂಜೆ ಪುನಸ್ಕಾರಗಳಲ್ಲಿ ಮೈಮರೆತಿದ್ದರು. ಸೋಮವಾರ ಮಧ್ಯಾಹ್ನ ಅವರು ಮುಂಬೈಗೆ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಕಟೀಲು ದೇವಾಲಯದ ಪ್ರಧಾನ ಅರ್ಚಕರಾದ ಲಕ್ಷ್ಮಿನಾರಾಯನ ಅಸ್ರಣ್ಣ ಹಾಗೂ ಅನಂತ ಪದ್ಮನಾಭ ಅಸ್ರಣ್ಣ ಅವರು ಉಪಸ್ಥಿತರಿದ್ದರು.

  English summary
  Bollywood actress Shilpa Shetty visits Kateel Durgaparameshwari temple on Monday 28th March. Shilpa Shetty and London-based businessman Raj Kundra were arrived at about 9.00 am. she wished all success for team India and hopes that India would winning team in this world cup cricket 2011.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X