For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್ 'ಬಚ್ಚನ್' ಆದ ಕಿಚ್ಚ ಸುದೀಪ್

  By Rajendra
  |

  ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ಕಿಚ್ಚ ಸುದೀಪ್ ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಶಶಾಂಕ್ ಆಕ್ಷನ್ ಕಟ್ ಹೇಳಲಿರುವ ಈ ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಆಗಿದೆ. ಚಿತ್ರದ ಹೆಸರು 'ಬಚ್ಚನ್'. ಉದಯ ಮೆಹತಾ ನಿರ್ಮಿಸುತ್ತಿರುವ ಚಿತ್ರವಿದು.

  ಸದ್ಯಕ್ಕೆ ಸುದೀಪ್ ತೆಲುಗು ರೀಮೇಕ್ 'ಕಿಕ್‌'ನಲ್ಲಿ ತೊಡಗಿಕೊಂಡಿದ್ದು ಆ ಚಿತ್ರ ಮುಗಿದ ಬಳಿಕವಷ್ಟೇ 'ಬಚ್ಚನ್' ಸೆಟ್ಟೇರಲಿದೆ. ಎನ್ ಕುಮಾರ್ ನಿರ್ಮಿಸುತ್ತಿರುವ 'ಕಿಕ್' ಚಿತ್ರವನ್ನು ನಿರ್ದೇಶಿಸುತ್ತಿರುವವರು ಹರ್ಷ. ಈ ಮೂಲಕ ತಮ್ಮ ಗಾಢ್ ಫಾದರ್ ಸುದೀಪ್ ಅವರಿಗೆ ಆಕ್ಷನ್ ಕಟ್ ಹೇಳುವ ಸದಾವಕಾಶ ಹರ್ಷ ಪಾಲಿಗೆ ಒದಗಿ ಬಂದಿದೆ.

  'ಬಚ್ಚನ್' ಚಿತ್ರದ ಚಿತ್ರಕತೆ, ಸಂಭಾಷಣೆ ಸಿದ್ಧವಾಗಿದೆ. ಚಿತ್ರದಲ್ಲಿ ಮೂವರು ನಾಯಕಿಯರು, ಕತೆ ಏನು? ಚಿತ್ರದ ತಾರಾಬಳದಲ್ಲಿ ಇನ್ಯಾರಿದ್ದಾರೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ವಿ ಹರಿಕೃಷ್ಣ ಸಂಗೀತ, ಶೇಖರ್ ಚಂದ್ರು ಛಾಯಾಗ್ರಹಣ ಚಿತ್ರಕ್ಕಿದೆ. 'ಕೃಷ್ಣನ್ ಲವ್ ಸ್ಟೋರಿ'ಗೆ ಸಂಭಾಷಣೆ ಬರೆದಿದ್ದ ಪ್ರಸನ್ನ 'ಬಚ್ಚನ್‌'ಗೆ ಡೈಲಾಗ್ಸ್ ಬರೆದಿದ್ದಾರೆ. (ಏಜೆನ್ಸೀಸ್)

  English summary
  Kichcha Sudeep is now Sandalwood Bachchan. His new movie titled as Bachchan to be directed by Shashank and produced by Uday Mehta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X