»   » ಸುದೀಪ್ ಹೊಸ ಚಿತ್ರದ ಹೆಸರು 'ವಿಷ್ಣುವರ್ಧನ್'

ಸುದೀಪ್ ಹೊಸ ಚಿತ್ರದ ಹೆಸರು 'ವಿಷ್ಣುವರ್ಧನ್'

Posted By:
Subscribe to Filmibeat Kannada

ಕಿಚ್ಚ ಸುದೀಪ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರವೊಂದು ಗುರುವಾರ ಸದ್ದಿಲ್ಲದಂತೆ ಸೆಟ್ಟೇರಿದೆ. ಚಿತ್ರ ನಿರ್ಮಾಣದಿಂದ ತೆರೆಮರೆಗೆ ಸರಿದಿದ್ದ ದ್ವಾರಕೀಶ್ ಸುದೀರ್ಘ ಸಮಯದ ಬಳಿಕ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು ದ್ವಾರಕೀಶ್ ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ನಿರ್ಮಿಸುತ್ತಿರುವ ಅದ್ದೂರಿ ಚಿತ್ರವಿದು.

ತಮ್ಮ ಹೊಸ ಚಿತ್ರಕ್ಕೆ 'ವಿಷ್ಣುವರ್ಧನ್' ಎಂದು ಹೆಸರಿಡಲು ದ್ವಾರಕೀಶ್ ನಿರ್ಧರಿಸಿದ್ದಾರೆ. ಆದರೆ ಈ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ತಮ್ಮ ಜೀವದ ಗೆಳೆಯ ಸಾಹಸಸಿಂಹ ವಿಷ್ಣುವರ್ಧನ್ ಅವರ ನೆನಪಿಗಾಗಿ ಈ ಶೀರ್ಷಿಕೆ ಇಡಲು ದ್ವಾರಕೀಶ್ ಯೋಚಿಸಿದ್ದಾರೆ ಎನ್ನ್ನುತ್ತವೆ ಮೂಲಗಳು.

ಈ ಚಿತ್ರವನ್ನು ವಿ.ಕುಮಾರ್ ಎಂಬುವವರು ನಿರ್ದೇಶಿಸುತ್ತಿದ್ದು ಇವರು ತಮಿಳಿನ ಖ್ಯಾತ ನಿರ್ದೇಶಕರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ಭಾವನಾ ಮತ್ತೊಬ್ಬರಿಗಾಗಿ ಹುಡುಕಾಟ ನಡೆದಿದೆ. ಪ್ರಿಯಾಮಣಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿರುತ್ತದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada