»   »  ತಾಜ್‌ಮಹಲ್ ಮತ್ತು ಸುನೀಲ್‌ರಾವ್!

ತಾಜ್‌ಮಹಲ್ ಮತ್ತು ಸುನೀಲ್‌ರಾವ್!

By: *ಜಯಂತಿ
Subscribe to Filmibeat Kannada

ತಾಜ್‌ಮಹಲ್ ಚಿತ್ರ ಹಲವರ ಹಣೆಬರಹ ಬದಲಿಸಿದ ಕಥೆ ಗೊತ್ತಲ್ಲ.ಚಂದ್ರು ಎನ್ನುವ ಕನಸುಕಂಗಳ ನಿರ್ದೇಶಕ ಕೋಟಿ ರೂಪಾಯಿ ಸಂಭಾವನೆ ಬಗ್ಗೆ ಮಾತನಾಡುವ ಯಕ್ಷಿಣಿಗೆ ಈ ಚಿತ್ರವೇ ಕಾರಣ. ಆರಕ್ಕೇರದೆ ಚಡಪಡಿಸುತ್ತಿದ್ದ ಅಜಯ್ ಎನ್ನುವ ಹುಡುಗ ನಾಯಕನಾಗಿ ಒಂದಷ್ಟು ಅವಕಾಶ ಕಾಣಲಿಕ್ಕೂ ಈ ಚಿತ್ರವೇ ಕಾರಣ. ಇಂತಿಪ್ಪ ತಾಜ್‌ಮಹಲ್ ಚಿತ್ರವನ್ನು ಸುನೀಲ್ ರಾವ್ ಒಲ್ಲೆ ಎಂದಿದ್ದರಾ?

ನಿರ್ದೇಶಕ ಚಂದ್ರು ಪ್ರಕಾರ, ಸುನೀಲ್‌ರಾವ್ ಬಾಗಿಲಿಗೆ ಬಂದ ಅದೃಷ್ಟವನ್ನು ಒದ್ದಿದ್ದು ಸತ್ಯ. ತಾಜ್‌ಮಹಲ್‌ಗೆ ನಾನು ಮೊದಲು ಸಂಪರ್ಕಿಸಿದ್ದು ಸುನೀಲ್ ಅವರನ್ನುಆತ ಒಲ್ಲೆ ಎಂದ. ಆ ಕಾರಣಕ್ಕೆ ಅದೃಷ್ಟ ಅಜಯ್‌ಗೊಲಿಯಿತು ಎಂದು ಚಂದ್ರು ಅನೇಕ ಕಡೆ ಹೇಳಿಕೊಂಡಿದ್ದಾರೆ. ಈ ಸುದ್ದಿ ಪತ್ರಿಕೆಗಳಲ್ಲೂ ಪ್ರಕಟವಾಗಿದೆ.

ಸುನೀಲ್ ಯಾಕೆ ಹೀಗೆ ಮಾಡಿದರು?

ಅಪರಾಧಿ ನಾನಲ್ಲ ಎನ್ನುವುದು ಅವರ ಸ್ಪಷ್ಟನೆ. ಈ ಬಗ್ಗೆ ಅವರು ದಟ್ಸ್‌ಕನ್ನಡಕ್ಕೆ ಹೇಳಿದ್ದು:

ಚಂದ್ರು ನಮ್ಮ ಮನೆಗೆ ಬಂದು ಕಥೆ ಹೇಳಿದ್ದು ನಿಜ. ನಾನಾಗ ಅಮೆರಿಕಗೆ ಹೊರಟು ನಿಂತಿದ್ದೆ. ವಾಪಸ್ಸು ಬಂದ ನಂತರ ಮತ್ತೊಮ್ಮೆ ಭೇಟಿಯಾಗಿ ಕಥೆ ಹೇಳುವುದಾಗಿ ಚಂದ್ರು ಹೇಳಿದ್ದರು. ಆದರೆ, ಮರಳಿ ಊರಿಗೆ ಬಂದಾಗ ನನ್ನನ್ನು ಭೇಟಿಯಾದದ್ದು ಚಂದ್ರು ಅವರಲ್ಲ, ವದಂತಿಗಳು. ಆತ ಯಾಕೆ ಹೀಗೆ ಆಪಾದಿಸಿದರೋ ಗೊತ್ತಿಲ್ಲ. ಬರೆಯುವವರಾದರೂ ನನ್ನನ್ನೊಂದು ಮಾತು ಕೇಳಬಹುದಿತ್ತು.

ಸದ್ಯಕ್ಕೆ ಸುನೀಲ್, 'ಮಿನುಗು' ಹಾಗೂ 'ಸರಿಗಮ' ಎನ್ನುವ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಎರಡು ಚಿತ್ರಗಳ ಬಗೆಗೂ ಅವರಿಗೆ ಅಪಾರ ನಿರೀಕ್ಷೆಗಳಿವೆ.

ನಿನ್ನೆ ನಿನ್ನೆಗೆ ನಾಳೆ ನಾಳೆಗೆ ಅನ್ನೋದು ಸುನೀಲ್ ಪಾಲಿಸಿ. ವದಂತಿಗಳನ್ನು ಹಬ್ಬಿಸುವವರು ಹಬ್ಬಿಸುತ್ತಿರಲಿ, ನನ್ನ ಹಾಡು ನನ್ನ ಪಾಡು ಎನಗಿರಲಿ ಎಂದು ಸುನೀಲ್ ಮಾತು ಮುಗಿಸಿದರು.

ಪೂರಕ ಓದಿಗೆ
ಚಿತ್ರವಿಮರ್ಶೆ: ತಾಜ್ ಮಹಲ್.ಎಂಥಾ ಸ್ವಾದ!
ಪೂಜಾಗಾಂಧಿ, ಅಜಯ್ ಅವರ ತಾಜ್ ಮಹಲ್ ಟ್ರೈಲರ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada