»   »  ಆಗಸ್ಟ್ ನಲ್ಲಿ ರಾಜ್ಯದಾದ್ಯಂತ ವರ್ಷಧಾರೆ

ಆಗಸ್ಟ್ ನಲ್ಲಿ ರಾಜ್ಯದಾದ್ಯಂತ ವರ್ಷಧಾರೆ

Posted By:
Subscribe to Filmibeat Kannada

ಆಕ್ಟಿವ್ ಫಿಲಂಸ್ ಮೇಕರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ವರ್ಷಧಾರೆ' ಚಿತ್ರ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಡಿ.ಟಿ.ಎಸ್‌ನಿಂದ ಅಲಂಕೃತವಾಗುತ್ತಿದೆ ಎಂದು ನಿರ್ದೇಶಕ ವೇಮಗಲ್ ಜಗನ್ನಾಥ್‌ರಾವ್ ತಿಳಿಸಿದ್ದಾರೆ.

ವರುಣ ಈಗಾಗಲೇ ಕರುನಾಡಿನಾದ್ಯಂತ ವರ್ಷಧಾರೆ ಸುರಿಸುತ್ತಿದ್ದಾನೆ. ಆದರೆ ಪಿ.ರಾಮಸ್ವಾಮಿ ಹಾಗೂ ಸಂಧ್ಯಾ ವೆಂಕಟೇಶ್ ನಿರ್ಮಿಸುತ್ತಿರುವ 'ವರ್ಷಧಾರೆ' ಮುಂದಿನ ತಿಂಗಳಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.ಈವರೆಗೂ ಹಲವು ಚಿತ್ರಗಳನ್ನು ನಿರ್ದೇಶಿಸಿ ಅನುಭವ ಹೊಂದಿರುವ ವೇಮಗಲ್ ಜಗನ್ನಾಥ್‌ರಾವ್ ಈ ಪ್ರೇಮ ಕಥಾನಕವನ್ನು ನಿರ್ದೇಶಿಸುತ್ತಿದ್ದಾರೆ.

'ವರ್ಷಧಾರೆ' ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಹಾಗೂ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಈ ಚಿತ್ರ ಮೆಚ್ಚಿಗೆಯಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ವೇಮಗಲ್ ಜಗನ್ನಾಥರಾವ್ ವೆಂಕಟೇಶ್ ಅವರೊಡಗೂಡಿ ಚಿತ್ರಕ್ಕೆ ಕತೆಯನ್ನೂ ರಚಿಸಿದ್ದಾರೆ.

ದೇವರಾಜ್ ಛಾಯಾಗ್ರಹಣವಿರುವ 'ವರ್ಷಧಾರೆ'ಗೆ ಅಜನೀಶ್‌ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಿಥುನ್‌ತೇಜಸ್ವಿ, ಸೂರಜ್, ಪಾಯಲ್‌ಘೋಷ್, ಆಶಿಟ್ಯಾಗೂರ್, ರಾಂಪ್ರಸಾದ್, ಸಂತೋಷ್, ನಿಶಾ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.

(ದಟ್ಸ್ ಕನ್ನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada