»   »  ಪುನೀತ್ ಕಟ್ಟಾ ಅಭಿಮಾನಿಯಾಗಿ 'ಯೋಗಿ'

ಪುನೀತ್ ಕಟ್ಟಾ ಅಭಿಮಾನಿಯಾಗಿ 'ಯೋಗಿ'

Subscribe to Filmibeat Kannada

ಸಂವೇದನಾಶೀಲ ನಟ ಯೋಗೀಶ್ ಅಲಿಯಾಸ್ ಲೂಸ್ ಮಾದ ಅಭಿನಯದ ಮತ್ತೊಂದು ಚಿತ್ರ'ಯೋಗಿ' ತೆರೆಗೆ ಅಪ್ಪಳಿಸಲಿದೆ. ಅಕ್ಟೋಬರ್ 30ರಂದು 'ಯೋಗಿ' ಚಿತ್ರ ಬಿಡುಗಡೆಯಾಗಲಿದೆ. ಚಿತ್ರದ ನಿರ್ಮಾಪಕ ಕೆ.ಮಂಜು 'ಯೋಗಿ' ಚಿತ್ರದ ಮೇಲೆ ಭಾರಿ ಭರವಸೆಗಳನ್ನು ಇಟ್ಟಿಕೊಂಡಿದ್ದಾರೆ.

ಅಪಾರ ಭರವಸೆ ಹುಟ್ಟಿಸಿದ್ದ 'ಬಳ್ಳಾರಿ ನಾಗ' ಬಾಕ್ಸಾಫೀಸಲ್ಲಿ ಮಕಾಡೆ ಮಲಗಿತು. ಬ್ರೇಕ್ ಗಾಗಿ ಕಾಯುತ್ತಿದ್ದ ವಿಷ್ಣುವರ್ಧನ್ ಹಾಗೂ ಮಂಜು ಅವರಿಗೆ ಈ ಚಿತ್ರ ತೀರಾ ನಿರಾಸೆ ಮೂಡಿಸಿತ್ತು. ಹಾಗಾಗಿ 'ಯೋಗಿ' ಚಿತ್ರದ ಮೇಲೆ ಮಂಜು ನಿರೀಕ್ಷೆಗಳು ಮುಗಿಲು ಮುಟ್ಟಿವೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿ 'ಯೋಗಿ'ಪಾತ್ರದಲ್ಲಿ ಯೋಗೀಶ್ ಕಾಣಿಸಲಿದ್ದಾರೆ. ಹೋಟೆಲೊಂದರ ನೌಕರನಾಗಿ ಯೋಗೀಶ್ ಅಭಿನಯವಿದೆ. ಚಿತ್ರದಲ್ಲಿರುವ ಐದು ಹಾಡುಗಳು ಪ್ರೇಕ್ಷಕರನ್ನು ರಂಜಿಸಲಿವೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರು.

ಉದಯ ಪ್ರಕಾಶ್ ನಿರ್ದೇಶಿಸಿರುವ ಯೋಗಿ ಚಿತ್ರಕ್ಕೆ ಇಮಿಲ್ ಸಂಗೀತ ಸಂಯೋಜನೆಯಿದೆ. ಎ ಆರ್ ರೆಹಮಾನ್ ಅವರ ಸಹೋದರಿ ಎ ಆರ್ ರೆಹಾನಾ ಅವರು ಹಾಡೊಂದನ್ನ್ನು ಚಿತ್ರದಲ್ಲಿಹಾಡಿದ್ದಾರೆ. ಬಿಯಾಂಕ ದೇಸಾಯಿ ಹಾಗೂ ಶಿರಿನ್ ಚಿತ್ರದ ಇಬ್ಬರು ನಾಯಕಿಯರು. ರೇಖಾ ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ದಾಸರಿ ಸೀನು ಅವರ ಛಾಯಾಗ್ರಹಣ ಯೋಗಿ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada