»   » ತಂದೆಯ ಮೇಲೆ ಆಣೆಪ್ರಮಾಣ ಮಾಡಿದ ಲೂಸ್ ಮಾದ ಯೋಗಿ

ತಂದೆಯ ಮೇಲೆ ಆಣೆಪ್ರಮಾಣ ಮಾಡಿದ ಲೂಸ್ ಮಾದ ಯೋಗಿ

Posted By:
Subscribe to Filmibeat Kannada
Yogish and Munirathna
ನಟ ಯೋಗೀಶ್ ನಿರ್ಮಾಪಕರ ವಿರುದ್ದ ತಿರುಗಿ ಬಿದ್ದಿದ್ದಾರೆ. ನಾಯಕ ನಟರು ಗಂಡಸರು ಬಳಸುವ "ಆ" ಸಾಧನವೊಂದನ್ನು ಬಿಟ್ಟು ಬೇರೆ ಎಲ್ಲವನ್ನೂ ನಿರ್ಮಾಪಕರಿಂದಲೇ ಸುಲಿಗೆ ಮಾಡುತ್ತಾರೆ ಎನ್ನುವ ನಿರ್ಮಾಪಕ ಮುನಿರತ್ನ ಮೊದಲಾದವರ ಆರೋಪಕ್ಕೆ ಸರಿಯಾಗಿ ತಿರುಗೇಟು ನೀಡಿದ್ದಾರೆ.

ನಾನು ಸೆಟ್ನಲ್ಲಿ ಮಾಮೂಲಿ ಊಟವೊಂದನ್ನು ಬಿಟ್ಟು ಬೇರೆ ಸ್ಪೆಷಲ್ ಮೀಲ್ಸೆ ಬೇಕು ಎಂದು ಯಾವ ನಿರ್ಮಾಪಕರಿಗೂ ಕಾಟಕೊಟ್ಟಿಲ್ಲ. ಅದನ್ನು ಬೇಕಾದರೆ ನಮ್ಮಪ್ಪ ಸಿದ್ದರಾಜು ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಯೋಗೀಶ್ ಭಾವೋದ್ವೇಗದಿಂದ ಸ್ಪಷ್ಟ ಪಡಿಸಿದ್ದಾರೆ.

ನಾನು ಶೂಟಿಂಗ್ ಸಮಯದಲ್ಲಿ ಇದುವರೆಗೆ ಇದೇ ಬೇಕು ಅದೇ ಬೇಕು ಅಂದವನಲ್ಲ. ಅಕಸ್ಮಾತ್ ಶೂಟಿಂಗ್ ಸಮಯದಲ್ಲಿ ನನ್ನ ಸ್ನೇಹಿತರು ಏನಾದ್ರೂ ಊಟದ ಸಮಯಕ್ಕೆ ಸರಿಯಾಗಿ ಬಂದರೆ, ನಿರ್ಮಾಪಕರು ಊಟ ಕೊಡಿಸಲು ಮುಂದಾದರೆ ಮಾತ್ರ ಊಟ ಮಾಡಿಕೊಂಡು ಹೋಗಿ ಎನ್ನುತ್ತೇನೆ. ಸ್ಪೆಷಲ್ ಊಟ ತರಿಸಬೇಕಾದ ಅಗತ್ಯ ಬಿದ್ದರೆ ನನ್ನ ಸ್ವಂತ ದುಡ್ಡಿನಲ್ಲಿ ಊಟ ತರಿಸುತ್ತೇನೆ ಎಂದು ಲೂಸ್ ಮಾದ ಯಾನೆ ಯೋಗೀಶ್ ಹೇಳಿದ್ದಾರೆ.

ನನ್ನ ತಂದೆಯೂ ನಿರ್ಮಾಪಕರು ಹಾಗಾಗಿ ನಿರ್ಮಾಪಕರ ಕಷ್ಟ ಏನೆಂದು ನನಗೆ ಚೆನ್ನಾಗಿ ಗೊತ್ತು. ಕೆಲವರು ಮಾತನಾಡುವ ಮುನ್ನ ಪಬ್ಲಿಸಿಟಿ ಸಿಗುತ್ತೆ ಎನ್ನುವ ಕಾರಣಕ್ಕೆ ಬಾಯಿಗೆ ಬಂದಂತೆ ಹಲುಬುವುದನ್ನು ನಿಲ್ಲಿಸಲಿ ಎಂದು ಯೋಗೀಶ್ ಪರೋಕ್ಷವಾಗಿ ನಿರ್ಮಾಪಕ ಮುನಿರತ್ನ ಅವರಿಗೆ ಟಾಂಗ್ ನೀಡಿದ್ದಾರೆ.

ಯೋಗಿಯ ಈ ಟಾಂಗ್ ಗೆ ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನ ಅಂಡ್ ಕಂಪೆನಿ ಹೇಗೆ ಉತ್ತರಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

English summary
Loos Mada Yogish unhappy with Producers statement on artists. Yogish said, my father also producers and I know the producers problem.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X