»   »  ಬೆಂಗಳೂರಿನಲ್ಲಿ ಟ್ರೈ ಕಾಂಟಿನೆಂಟಲ್ ಚಿತ್ರೋತ್ಸವ

ಬೆಂಗಳೂರಿನಲ್ಲಿ ಟ್ರೈ ಕಾಂಟಿನೆಂಟಲ್ ಚಿತ್ರೋತ್ಸವ

Subscribe to Filmibeat Kannada

ಮಾನವ ಹಕ್ಕುಗಳನ್ನು ಆಧರಿಸಿ ತಯಾರಿಸಿದ ದೇಶಿ, ವಿದೇಶಿ ಚಿತ್ರಗಳ 'ಐದನೇ ಟ್ರೈ ಕಾಂಟಿನೆಂಟಲ್ ಚಲನ ಚಿತ್ರೋತ್ಸವ' ಶುಕ್ರವಾರದಿಂದ ಭಾನುವಾರದವರೆಗೆ (ಜ.30-ಫೆ.1) ನಡೆಯಲಿದೆ. ಬೆಂಗಳೂರಿನ ವಸಂತನಗರದ ಅಲಯನ್ಸ್ ಫ್ರಾನ್ಸೆ ಸಭಾಂಗಣದಲ್ಲಿ ಚಿತ್ರೋತ್ಸವ ನಡೆಯಲಿದೆ.

ವಿಶ್ವದ ವಿವಿಧ ಯುದ್ಧ ಭೂಮಿಗಳು, ಅಲ್ಲಿಯ ಮಾನ ಹಕ್ಕುಗಳ ಸ್ಥಿತಿಗತಿಗಳ ಚಿತ್ರಗಳಿಗೆ ಒತ್ತು ನೀಡಲಾಗಿದೆ. ಹೆಸರಾಂತ ಮಾನವ ಹಕ್ಕುಗಳ ಹೋರಾಟಗಾರ್ತಿ ಅಲಿಕಾ ಖೋಸ್ಲಾ ಚಿತ್ರೋತ್ಸವದ ನಿರ್ದೇಶಕಿ. 20 ಕ್ಕೂ ಹೆಚ್ಚು ದೇಶಗಳ 27 ಚಿತ್ರಗಳು ಪ್ರದರ್ಶನ ಕಾಣಲಿವೆ. ಇಲ್ಲಿ ಒಂದು ಚಿತ್ರದ ಕಾಲಾವಧಿ ಕೇವಲ 3 ನಿಮಿಷಗಳು. 105 ನಿಮಿಷಗಳ ದೀರ್ಘ ಕಾಲಾವಧಿಯ ಚಿತ್ರವೂ ಪ್ರದರ್ಶನ ಕಾಣಲಿದೆ.

Suresh Heblikar
ಶುಕ್ರವಾರ ಸಂಜೆ 6 ಗಂಟೆಗೆ ಸುರೇಶ್ ಹೆಬ್ಳೀಕರ್ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ನಂತರ ದಿ ಕಾಯರ್ ಚಿತ್ರ ಪ್ರದರ್ಶನ ಕಾಣಲಿದೆ. ಬೆಳಗ್ಗೆ 10.30ಕ್ಕೆ ದಿ ಇನ್ ಫಿನಿಟ್ ಬಾರ್ಡರ್, 12.10ಕ್ಕೆ ಬ್ರೈಡ್ಸ್ ಆಫ್ ಅಲಾಹ್, ಮಧ್ಯಾಹ್ನ 2ಕ್ಕೆ ಆನ್ ದಟ್ ಡೆ, 3.05ಕ್ಕೆ ದೆರ್ ವಾಸ್ ಎ ಕ್ವೀನ್, ಸಂಜೆ 5.05ಕ್ಕೆ ಫೈಯಿಂಗ್ ಇನ್ ಸೈಡ್ ಮೈ ಬಾಡಿ, 7.25ಕ್ಕೆ ಅಂಡರ್ ಕನ್ ಸ್ಟ್ರಕ್ಷನ್, 7.45ಕ್ಕೆ ವಾರ್ ಮೇಡ್ ಈಸಿ ಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ. ಪ್ರವೇಶ ಉಚಿತ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಉಡುಪಿಯಲ್ಲಿ ನಾಗತಿಹಳ್ಳಿ ಚಲನಚಿತ್ರೋತ್ಸವ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada