For Quick Alerts
  ALLOW NOTIFICATIONS  
  For Daily Alerts

  ಗಾನ ಬಜಾನ ಚಿತ್ರಕ್ಕೆ ಹಿನ್ನಲೆ ಸಂಗೀತ

  By Rajendra
  |

  ನಿಮ್ಮ ಸಿನಿಮಾ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ದ್ವಿತೀಯ ಚಿತ್ರ 'ಗಾನ ಬಜಾನ'. ಈ ಚಿತ್ರಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ಜೋಶ್ವಾಶ್ರೀಧರ್ ಅವರ ಸಾರಥ್ಯದಲ್ಲಿ ಹಿನ್ನಲೆ ಸಂಗೀತ ಅಳವಡಿಸಲಾಗಿದೆ ಎಂದು ನಿರ್ಮಾಪಕ ನವೀನ್ ತಿಳಿಸಿದ್ದಾರೆ.

  ಹಿಂದೆ ಈ ಸಂಸ್ಥೆಯಿಂದ ನಿರ್ಮಾಣವಾದ 'ಲವ್‌ಗುರು' ಚಿತ್ರ ನೋಡುಗರ ಪ್ರಶಂಸೆಗೆ ಪಾತ್ರವಾಗಿತ್ತು. ಈ ಚಿತ್ರ ಕೂಡ ವಿಭಿನ್ನ ಪ್ರೇಮಕತೆಯನ್ನೊಳಗೊಂಡಿದೆ. ಸಿರಿಗಂಧದ ನಾಡಿನ ಮಡಿಕೇರಿ, ಬೆಂಗಳೂರು, ಮೈಸೂರು ಮುಂತಾದೆಡೆಗಳಲ್ಲಿ 'ಗಾನ ಬಜಾನ' ಚಿತ್ರದ ಚಿತ್ರೀಕರಣ ನಡೆದಿದೆ. ಪ್ರಶಾಂತ್‌ರಾಜ್ ನಿರ್ದೇಶನದ ಈ ಚಿತ್ರಕ್ಕೆ ಶೇಖರ್ ಅವರ ಛಾಯಾಗ್ರಹಣವಿದೆ.

  ಧನಂಜಯ್ ಸಂಭಾಷಣೆ, ಇಸ್ಮಾಯಿಲ್ ಕಲಾನಿರ್ದೇಶನ ಹಾಗೂ ರವಿಶಂಕರ್, ನರಸಿಂಹ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ತರುಣ್, ರಾಧಿಕಾಪಂಡಿತ್, ದಿಲೀಪ್‌ರಾಜ್, ಮಂಜುನಾಥ್‌ಹೆಗ್ಡೆ, ಯಶವಂತ್‌ಸರದೇಶಪಾಂಡೆ, ಶರಣ್, ಸಿ.ಆರ್. ಸಿಂಹ, ಲಲಿತಾ,ಲಕ್ಷ್ಮೀದೇವಮ್ಮ ಮುಂತಾದವರಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X