»   »  ಉಜ್ಬೆಕಿಸ್ತಾನದಲ್ಲಿ ಅರಳಲಿದೆ 'ಸೂರ್ಯಕಾಂತಿ'

ಉಜ್ಬೆಕಿಸ್ತಾನದಲ್ಲಿ ಅರಳಲಿದೆ 'ಸೂರ್ಯಕಾಂತಿ'

Subscribe to Filmibeat Kannada
KM Chaitanya
ಕೆ ಎಂ ಚೈತನ್ಯ ನಿರ್ದೇಶಿಸುತ್ತಿರುವ 'ಸೂರ್ಯಕಾಂತಿ' ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಕೆ.ವೈ.ನಾರಾಯಣಸ್ವಾಮಿ ಅವರ ಚಿತ್ರಕತೆ ಆಧಾರವಾಗಿ ಈ ಚಿತ್ರ ಸಿದ್ಧವಾಗುತ್ತಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಉಜ್ಬೆಕಿಸ್ತಾನದಲ್ಲಿ ಚಿತ್ರಿತವಾಗುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು.

ಅಪರಾಧಿ ಹಿನ್ನೆಲೆಯುಳ್ಳವರರು ಪ್ರೇಮಕ್ಕೆ ಸಿಲುಕಿ ಉತ್ತಮರಾಗುವ ಕಥಾ ಹಂದರವೇ ಸೂರ್ಯಕಾಂತಿ. ''ಕರ್ಮರ್ಷಿಯಲ್ ಚಿತ್ರದಲ್ಲಿರಬೇಕಾದ ಎಲ್ಲ ಅಂಶಗಳನ್ನು ಪರಿಗಣಿಸಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ. ಖಂಡಿತವಾಗಿಯೂ ಈ ಚಿತ್ರ ಪ್ರೇಕ್ಷಕರ ಮನಗೆಲ್ಲುತ್ತದೆ ಎಂಬ ವಿಶ್ವಾಸವನ್ನ್ನು ಚೈತನ್ಯ ವ್ಯಕ್ತಪಡಿಸಿದ್ದಾರೆ.

''ಚಿತ್ರೀಕರಣ ಬೆಂಗಳೂರು, ಬೆಳಗಾವಿ, ಗೋವಾ ಮತ್ತು ಉಜ್ಬೆಕಿಸ್ತಾನಗಳಲ್ಲಿ 70 ದಿನಗಳ ಕಾಲ ನಡೆಯಲಿದೆ. ಚಿತ್ರಕತೆಯನ್ನು ಬಹಳ ಅದ್ಭುತವಾಗಿ ಬರೆದಿದ್ದಾರೆ ನಮ್ಮ ಗುರು ನಾರಾಯಣಸ್ವಾಮಿ'' ಎನ್ನುತ್ತಾರೆ ಚೈತನ್ಯ. ಚೇತನ್, ರೆಗಿನಾ, ನಾಸಿರ್, ಮನದೀಪ್ ರಾಜ್, ರಾಮಕೃಷ್ಣ, ಹಿಂದಿಯ ಟ್ಯಾಕ್ಸಿ ನಂ.1 ಚಿತ್ರದಲ್ಲಿ ನಟಿಸಿದ್ದ್ದ ಗಣೇಶ್ ಯಾದವ್ ಚಿತ್ರದ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸೂರ್ಯಕಾಂತಿ, ಕಾಲ್ಪನಿಕ ಪ್ರೇಮಕಥಾ ಚಿತ್ರ
ಆ ದಿನಗಳು ಚೈತನ್ಯರ ಹೊಸ ಚಿತ್ರ ಸೂರ್ಯಕಾಂತಿ
ಬಿರುಗಾಳಿ: ಗಾಳಿಯಲ್ಲೊಂದು ಹೊಸ ಗೋಪುರ
ಚೇತನ್, ಏನಿದು ವೈರಾಗ್ಯ? ಏನಿದು ಗಾಂಭೀರ್ಯ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada