»   »  ತೆರೆಯ ಮೇಲೆ 'ದಾನಚಿಂತಾಮಣಿ ಅತ್ತಿಮಬ್ಬೆ'

ತೆರೆಯ ಮೇಲೆ 'ದಾನಚಿಂತಾಮಣಿ ಅತ್ತಿಮಬ್ಬೆ'

Posted By:
Subscribe to Filmibeat Kannada

ಹತ್ತನೇ ಶತಮಾನ ಕನ್ನಡನಾಡು, ಕವಿರತ್ನಗಳನ್ನು ಕಂಡ ವೈಭವದ ಕಾಲ. ಪಂಪ, ರನ್ನ, ಜನ್ನರಂತಹ ಮಹಾಕವಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಚಿರಂಜೀವಿ ಮಹಾಕಾವ್ಯಗಳನ್ನು ನೀಡಿದ ಪುಣ್ಯಯುಗ.
ಕವಿಶ್ರೇಷ್ಠ ರನ್ನ ರಚಿಸಿದ ಪ್ರಸಿದ್ದ ಕಾವ್ಯ ಅಜಿತ ಪುರಾಣ.

ಅಂದಿನ ಕಾಲದಲ್ಲಿ ಕನ್ನಡಬಲ್ಲ ಪ್ರತಿಭಾವಂತರನ್ನು ಹುಡುಕಿಸಿ ಕರೆತರಿಸಿ ಸನ್ಮಾನಿಸಿ ಅವರಿಂದ ಈ ಮಹಾಕಾವ್ಯದ ಸಾವಿರ ತಾಳೆಗರಿ ಪ್ರತಿಗಳನ್ನು ಸಿದ್ದಪಡಿಸಿ, ಅದರೊಂದಿಗೆ ಸಾವಿರ ಗೊಮಟೇಶನ ರತ್ನ ಖಚಿತ ಮೂರ್ತಿಗಳನ್ನು ಮಾಡಿಸಿ ದಾನ ಮಾಡಿದ ಕನ್ನಡದ ಪುಣ್ಯ ಮಹಿಳೆ ಅತ್ತಿಮಬ್ಬೆ. ಈಕೆ ಕನ್ನಡದ ಪ್ರಥಮ ಪ್ರಕಾಶಕಿ ಕೂಡ.

ಕನ್ನಡದ ಮಹಾಸಾಧಕರಾದ ಅತ್ತಿಮಬ್ಬೆ ಹಾಗೂ ಕವಿ ಚಕ್ರವರ್ತಿ ರನ್ನನ ಜೀವನ ಕುರಿತು ಚಿತ್ರ ಮಾಡಲು ನಿರ್ಮಾಪಕ ಚಿಂದೋಡಿ ಬಂಗಾರೇಶ್ ಮುಂದಾಗಿದ್ದಾರೆ. ಅದ್ದಕ್ಕಾಗಿ ಈ ಮಹಾಸಾಧಕರ ಜೀವನ ಚರಿತೆ ಬರೆದ ಬರಹಗಾರರನ್ನು, ಸಂಶೋಧಕರನ್ನು ಅವರು ಸಂಪರ್ಕಿಸುತ್ತಿದ್ದಾರೆ. ಹಿಂದೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ತೆರೆಗೆ ತಂದಿರುವ ಚಿಂದೋಡಿ ಬಂಗಾರೇಶ್ ಸದ್ಯದಲ್ಲೇ ಈ ಚಿತ್ರವನ್ನು ಆರಂಭಿಸಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada