»   »  ಅನಂತ್ ,ಸುಹಾಸಿನಿ 'ಎರಡನೇ ಮದುವೆ' ಸುಖಾಂತ್ಯ!

ಅನಂತ್ ,ಸುಹಾಸಿನಿ 'ಎರಡನೇ ಮದುವೆ' ಸುಖಾಂತ್ಯ!

Subscribe to Filmibeat Kannada
Suhasini
ಸುರೇಶ್ ಆರ್ಟ್ಸ್ ಮತ್ತು ಒಬೇಷನ್ಸ್ ಲಾಂಚನದಲ್ಲಿ ಕೆ ಎ ಸುರೇಶ್ ಮತ್ತು ಕೆ ರಾಜೀವ್ ನಿರ್ಮಿಸಿರುವ 'ಎರಡನೇ ಮದುವೆ' ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಡಿಟಿಂಗ್ ಕೆಲಸ ಮುಗಿಸಿರುವ ಈ ಚಿತ್ರದ ಮಾತಿನ ಮರುಲೇಪನ ಕಾರ್ಯ ಇದೀಗ ಬಾಲಾಜಿ ಡಬ್ಬಿಂಗ್ ಥಿಯೇಟರ್ ನಲ್ಲಿ ಮೇ 24ರಿಂದ ನಡೆಯುತ್ತಿದೆ.

ಈ ಚಿತ್ರದ ವಿಶೇಷವೇನಂದರೆ ಬಹಳ ದಿನಗಳ ನಂತರ ಅನಂತನಾಗ್ ಮತ್ತು ಸುಹಾಸಿನಿ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿರುವುದು. ಚಿತ್ರ ಸಂಪೂರ್ಣ ಹಾಸ್ಯಭರಿತ ಸಾಂಸಾರಿಕ ಪ್ರೇಮ ಕಥಾಹಂದರವಾಗಿದ್ದು ಅನಂತನಾಗ್ ಮತ್ತು ಸುಹಾಸಿನಿ ಪ್ರತಿಭಾವಂತ ಜೋಡಿಯ ಜತೆಗೆ 'ನೆನಪಿರಲಿ' ಪ್ರೇಮ್ ಮತ್ತು ಜೆನಿಫರ್ ಕೊತ್ವಾಲ್ ಯುವ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕತೆ, ಚಿತ್ರಕತೆ, ಛಾಯಾಗ್ರಾಹಣ ಹಾಗು ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ಅವರೇ ಹೊತ್ತಿದ್ದಾರೆ. ಜೈಪಾಲ್ ಅವರ ಸಂಗೀತ ಸಂಯೋಜನೆ, ರಾಜೇಂದ್ರ ಕಾರಂತರ ಸಂಕಲನ ಚಿತ್ರಕ್ಕಿದೆ. ಚಿತ್ರದ ಉಳಿದ ತಾರಾಗಣದಲ್ಲಿ ಶರಣ್, ತಾರಾ, ರಂಗಾಯಣ ರಘು, ಸಿಂಧು, ನವ್ಯಾ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada