For Quick Alerts
  ALLOW NOTIFICATIONS  
  For Daily Alerts

  ಯುಕೆ 'ಗೋಲ್ಡನ್' ಕಲರವಕ್ಕೆ ಗಣೇಶ್ ಕ್ಲೀನ್ ಬೌಲ್ಡ್

  |

  ಗೋಲ್ಡನ್ ಸ್ಟಾರ್ ಗಣೇಶ್ ಫುಲ್ ಖುಷಿಯಾಗಿದ್ದಾರೆ. ಅವರಿಗೆ ಯಾವುದೋ ದೊಡ್ಡ ಬ್ಯಾನರ್ ಚಿತ್ರ ಸಿಕ್ಕಿರಬಹುದು. ಸಕ್ಸಸ್ ಗ್ಯಾರಂಟಿ ಎನ್ನುವ ನಿರ್ದೇಶಕರ ಚಿತ್ರ ಅದಾಗಿರಬಹುದು ಎಂಬ ಊಹೆಗಳೇನೂ ಸದ್ಯಕ್ಕೆ ಬೇಡ. ಗಣೇಶ್ ಖುಷಿಗೆ ಕಾರಣ, ವಿದೇಶದಲ್ಲಿ, ಬರ್ನಿಂಗ್ ಹ್ಯಾಮ್ ಗೆ ಇತ್ತೀಚಿಗೆ ಹೋಗಿದ್ದ ಗಣೇಶ್ ಅವರಿಗೆ ಅಲ್ಲಿನ ಕನ್ನಡಿಗರಿಂದ ಸಿಕ್ಕ ಅಭೂತಪೂರ್ ಸ್ವಾಗತ ಹಾಗೂ ಗಣೇಶ್ ಗುಣಗಾನ.

  ಯುಕೆ ಕನ್ನಡ ಬಳಗಕ್ಕೆ ಅತಿಥಿಯಾಗಿ ಹೋಗಿದ್ದ ಗಣೇಶ್ ರಿಗೆ ಅಲ್ಲಿ ಸೇರಿದ್ದವರು ಯಾವ ಪರಿ ಆತಿಥ್ಯ ನೀಡಿದ್ದಾರೆಂದರೆ ಕನ್ನಡದ ಈ ಗೋಲ್ಡನ್ ಸ್ಟಾರ್ ಗೆ ತಾನು ಕರ್ನಾಟಕದಲ್ಲೇ ಇದ್ದೇನೆ ಎಂಬಂತೆ ಭಾಸವಾಗಿದೆ. ನಾಡಗೀತೆಯಿಂದ ಪ್ರಾರಂಭವಾದ ಕಾರ್ಯಕ್ರಮ, ಕರ್ನಾಟಕದ ಜಾನಪದ ಗೀತೆ, ಕನ್ನಡದ ಸಿನಿಮಾ ಗೀತೆಗಳ ಜೊತೆ ಮುಂದುವರಿದು ಸಂಪೂರ್ಣ ಕನ್ನಡದ ಕಂಪು ಬೀರಿ ಎಲ್ಲರನ್ನೂ ಆಕರ್ಷಿಸಿದೆ.

  ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ಗಣೇಶ್ ಅವರಿಂದ ಅವರ ಚಿತ್ರಗಳ ಡೈಲಾಗ್ ಹೇಳಿಸಿದ್ದಾರೆ. ಮುಂಗಾರು ಮಳೆ, ಮಳೆಯಲಿ ಜೊತೆಯಲಿ ಹಾಗೂ ಚೆಲುವಿನ ಚಿತ್ತಾರ ಚಿತ್ರಗಳ ಡೈಲಾಗ್ ಹೇಳಿ ಗಣೇಶ್ ಅವರನ್ನು ಖುಷಿಪಡಿಸಿದ್ದಾರೆ. ಜೊತೆಗೆ ತಮ್ಮ ಬರಲಿರುವ ಚಿತ್ರ 'ರೋಮಿಯೋ' ಪ್ರಮೋಶನ್ ಕಾರ್ಯವನ್ನು ಸಾಧ್ಯವಾದಷ್ಟು ಮಾಡಿಬಂದಿದ್ದಾರೆ. ಒಟ್ಟಿನಲ್ಲಿ ಅಲ್ಲಿನ ಕನ್ನಡಿಗರು ತೋರಿಸಿದ ಗೋಲ್ಡನ್ ಪ್ರೀತಿಗೆ ಗಣೇಶ್ ಕ್ಲೀನ್ ಬೌಲ್ಡ್ ಆಗಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Kannada Golden Star Ganesh visited United Kingdom recently. He became clean bold from their extra ordinary treatment. They also felt very happy from Ganesh's dialogue of his own movies. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X