»   » ಸೈಲೆನ್ಸ್ ಪ್ಲೀಸ್; ಗೌಡರು ಪೃಥ್ವಿ ನೋಡಲಿದ್ದಾರೆ

ಸೈಲೆನ್ಸ್ ಪ್ಲೀಸ್; ಗೌಡರು ಪೃಥ್ವಿ ನೋಡಲಿದ್ದಾರೆ

Posted By:
Subscribe to Filmibeat Kannada

ಸಿನಿಮಾಗೂ ದೇವೇಗೌಡರಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಸದಾ ರಾಜಕೀಯ ಜಂಟಾಟಗಳಲ್ಲಿ ಮುಳುಗಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕಡೆಗೂ ಸಿನಿಮಾ ನೋಡುಲು ದೊಡ್ಡ ಮನಸ್ಸು ಮಾಡಿದ್ದಾರೆ. ದೇವೇಗೌಡರು ಸಿನಿಮಾ ನೋಡಿದ್ದು ಬಲು ಅಪರೂಪ ಎಂತಲೇ ಹೇಳಬೇಕು.

ಇಷ್ಟಕ್ಕೂ ದೇವೇಗೌಡರು ನೋಡಲಿರುವ ಸಿನಿಮಾ ಯಾವುದು ಎಂಬುದು ತಾನೆ ನಿಮ್ಮ ಅನುಮಾನ. ವಿಷ್ಣುವರ್ಧನ್ ಅಭಿನಯದ ಕಟ್ಟ ಕಡೆಯ ಚಿತ್ರ 'ಆಪ್ತರಕ್ಷಕ' ಎಂದುಕೊಂಡರೆ ತಪ್ಪಾಗುತ್ತದೆ. ಅವರು ನೋಡಲಿರುವ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಲೇಟೆಸ್ಟ್ ಚಿತ್ರ 'ಪೃಥ್ವಿ'.

ಮೇ1ರ ಕಾರ್ಮಿಕರ ದಿನಾಚರಣೆಯಂದು ಬೆಂಗಳೂರಿನ ಮಿನಿ ಥಿಯೇಟರ್ ಒಂದರಲ್ಲಿ ದೇವೇಗೌಡರು 'ಪೃಥ್ವಿ' ಚಿತ್ರವನ್ನು ವೀಕ್ಷಿಸಲಿದ್ದಾರೆ.ಈ ಚಿತ್ರ ಬಳ್ಳಾರಿ ಗಣಿಗಾರಿಕೆ,ಆಂಧ್ರ ಕರ್ನಾಟಕ ಗಡಿ ಸಮಸ್ಯೆ, ಗಣಿಧಣಿಗಳ ಸುತ್ತ ಸುತ್ತುವ ಕತೆಯಾದ ಕಾರಣ ಗೌಡರ ಗಮನ ಸೆಳೆದಿದೆ. ಹಾಗಾಗಿ ಗೌಡರ ಕಣ್ಣು ಸಹಜವಾಗಿಯೇ ಈ ಚಿತ್ರದ ಮೇಲೆ ಬಿದ್ದಿದ್ದು ಚಿತ್ರಮಂದಿರದ ತನಕ ಪಾದ ಬೆಳೆಸಲಿದ್ದಾರೆ.

ದೇವೇಗೌಡರು ಈ ಚಿತ್ರವನ್ನು ಕೇವಲ ಮನರಂಜನೆಗಾಗಿ ನೋಡುತ್ತಿದ್ದಾರೋ, ಕುತೂಹಲಕ್ಕಾಗಿ ನೋಡುತ್ತಿದ್ದಾರೋ ಅಥವಾ ಇದರ ಹಿಂದೆ ಯಾವುದಾದರೂ ರಾಜಕೀಯ ಕುಟಿಲ ತಂತ್ರವಿದೆಯೋ? ಎಂಬ ಪ್ರಶ್ನೆಗಳು ಗಾಂಧಿನಗರದ ಚಿತ್ರ ಪಂಡಿತರು ಸೇರಿದಂತೆ ಹಲವು ರಾಜಕಾರಣಿಗಳನ್ನು ಕಾಡುತ್ತಿವೆ. ಚಿತ್ರದ ನೋಡಿದ ಬಳಿಕ ದೇವೇಗೌಡರ ಮುಂದಿನ ನಡೆ ಏನು ಎಂಬುದು ಸ್ಪಷ್ಟವಾಗಲಿದೆ ಎಂಬ ಗುಮಾನಿ ಹಲವು ರಾಜಕಾರಣಿಗಳ ನಿದ್ದೆ ಕೆಡಿಸಿದೆ.

ಏತನ್ಮಧ್ಯೆ 'ಆಪ್ತರಕ್ಷಕ' ಚಿತ್ರವನ್ನು ವೀಕ್ಷಿಸುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದರು. ಚಿತ್ರದ ನಿರ್ಮಾಪಕ ಕೃಷ್ಣ ಪ್ರಜ್ವಲ್ ಪ್ರಕಾರ ಏ.26 ಅಥವಾ 27ರಂದು ಸಿಎಂ ಚಿತ್ರವನ್ನು ವೀಕ್ಷಿಸಬೇಕಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಮತ್ತೆ ಯಾವಾಗ ನೋಡುತ್ತಾರೆ ಎಂಬುದು ಇನ್ನೂ ನಿಗದಿಯಾಗಿಲ್ಲ. ಕೃಷ್ಣ ಪ್ರಜ್ವಲ್ ಮಾತ್ರ ಶೀಘ್ರದಲ್ಲೇ ನೋಡಲಿದ್ದಾರೆ ಎಂದು ಹೇಳುತ್ತಲೆ ಇದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada