»   »  ಮೇಘವೇ ಮೇಘವೇ ಸೇರಿ ಮೂರು ಚಿತ್ರಗಳು ತೆರೆಗೆ

ಮೇಘವೇ ಮೇಘವೇ ಸೇರಿ ಮೂರು ಚಿತ್ರಗಳು ತೆರೆಗೆ

Subscribe to Filmibeat Kannada
Meghave Meghave still
'ಅಂಬಾರಿ', 'ಮೇಘವೇ ಮೇಘವೇ' ಮತ್ತು 'ಚಂದ್ರಗಿರಿ ರಹಸ್ಯ' ಇವು ಈ ವಾರ ತೆರೆಕಾಣಲಿರುವ ಮೂರು ಚಿತ್ರಗಳು. ಅಂಬಾರಿ ಕಳೆದ ವಾರವೇ ತೆರೆ ಕಾಣಬೇಕಿತ್ತು, ಮೇಘವೇ ಮೇಘವೇ ಕಳೆದ ವರ್ಷ ಬಿಡುಗಡೆಯಾಗಬೇಕಿತ್ತು! ಕಾರಣಾಂತರಗಳಿಂದ ಈ ಎರಡು ಚಿತ್ರಗಳು ವಾರ ತೆರೆಕಾಣಲಿವೆ.

ಪೂರ್ಣ ಪ್ರಮಾಣದ ನಾಯಕ ನಟನಾಗಿ ಯೋಗೀಶ್ ಅಭಿನಯದ ಎರಡನೇ ಚಿತ್ರ ಅಂಬಾರಿ. ನಂದ ನಂದಿತಾ ನಂತರ ಅವರು ಹೃದಯಾ ಐ ಮಿಸ್ ಯು ಚಿತ್ರದಲ್ಲಿ ಅತಿಥಿ ನಟನಾಗಿ ಬಂದು ಹೋಗಿದ್ದರು. ಚಿತ್ರದ ಹಾಡುಗಳು ಮತ್ತು ಚಿತ್ರೀಕರಣ ವಿಷಯದಲ್ಲಿ ಅಂಬಾರಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದ ಬಗ್ಗೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನಾಗೇಂದ್ರ ಪ್ರಸಾದ್ ನಿರ್ದೇಶನದ ಮೇಘವೇ ಮೇಘವೇ ವಿಮಾನದಲ್ಲಿ ಧ್ವನಿ ಸುರುಳಿ ಬಿಡುಗಡೆ ಮಾಡುವ ಮೂಲಕ ದಾಖಲೆ ನಿರ್ಮಿಸಿತ್ತು. ವಿಶೇಷ ಪಾತ್ರದಲ್ಲಿ ಸುದೀಪ್ ನಟಿಸಿದ್ದಾರೆ. ರಾಮ್ ಮತ್ತು ಲಗಾನ್ ಖ್ಯಾತಿಯ ಗ್ರೇಸಿ ಸಿಂಗ್ ಚಿತ್ರದ ಪ್ರಮುಖ ಪಾತ್ರಧಾರಿಗಳು. ಕಳೆದ ವರ್ಷ ಅಕ್ಟೋಬರ್ ನಲ್ಲಿ ತೆರೆಕಾಣಬೇಕಿದ್ದ ಚಿತ್ರ ಮೂರು ತಿಂಗಳು ತೆರೆಕಾಣುತ್ತಿದೆ.

ರೋಮಾಂಚಕಾರಿ ಕಥೆಯನ್ನು ಹೊಂದಿರುವ 'ಚಂದ್ರಗಿರಿಯ ರಹಸ್ಯ' ಈ ವಾರ ಬಿಡುಗಡೆಯಾಗುತ್ತಿರುವ ಮತ್ತೊಂದು ಚಿತ್ರ. ಈ ಚಿತ್ರದ ಉಳಿದ ವಿವರಗಳು ರಹಸ್ಯವಾಗಿವೆ! ಜನವರಿಯಲ್ಲಿ ತೆರೆ ಕಾಣಬೇಕಿದ್ದ ನಂ ಯಜಮಾನ್ರು, ಬಿರುಗಾಳಿ, ವೆಂಕಟ ಇನ್ ಸಂಕಟ, ಐಡ್ಯಾ ಮಾಡ್ಯಾರ ಚಿತ್ರಮಂದಿರಗಳ ಕೊರತೆ ಕಾರಣ ಫೆಬ್ರವರಿಯಲ್ಲಿ ತೆರೆಕಾಣಲಿವೆ. ಹೊಸ ವರ್ಷದ ಮೊದಲ ತಿಂಗಳಲ್ಲಿ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳು ಸೇರಿದರೆ ಒಟ್ಟು 14 ಚಿತ್ರಗಳು ತೆರೆಗೆ ಅಪ್ಪಳಿಸಿವೆ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ

ಆ ದಿನಗಳು ಚೇತನ್ ರ ಬಿರುಗಾಳಿ ಟ್ರೈಲರ್
ವೆಂಕಟ ಇನ್ ಸಂಕಟನಾಗಿ ರಮೇಶ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada