»   »  ಸ್ವಿಜರ್ ಲ್ಯಾಂಡ್ ನಿಂದ ಮರಳಿ ಬಂದ ಪೊರ್ಕಿ

ಸ್ವಿಜರ್ ಲ್ಯಾಂಡ್ ನಿಂದ ಮರಳಿ ಬಂದ ಪೊರ್ಕಿ

Posted By:
Subscribe to Filmibeat Kannada

ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷೆಯ ಚಿತ್ರ 'ಪೊರ್ಕಿ. ಪ್ರಸ್ತುತ ಚಿತ್ರಕ್ಕೆ ದೂರದ ಸ್ವಿಜರ್ ಲ್ಯಾಂಡ್‌ನಲ್ಲಿ, ದರ್ಶನ್ ಹಾಗೂ ಪ್ರಣೀತಾ ಅವರ ಅಭಿನಯದಲ್ಲಿ ಎರಡು ಹಾಡುಗಳ ಚಿತ್ರೀಕರಣ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ಅವರ ಸಾರಥ್ಯದಲ್ಲಿ ಪೂರ್ಣವಾಗಿದೆ ಎಂದು ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ ತಿಳಿಸಿದ್ದಾರೆ.

ಸ್ವಿಜರ್ ಲ್ಯಾಂಡ್ ಪ್ರವಾಸಿಗರ ಸ್ವರ್ಗ. ಅಲ್ಲಿನ ರಮಣೀಯ ಪರಿಸರದಲ್ಲಿ ನಮ್ಮ ಚಿತ್ರದ ಗೀತೆಗಳ ಚಿತ್ರೀಕರಣ ಅದ್ದೂರಿಯಾಗಿ ಮೂಡಿ ಬಂದಿದೆ. ವಿದೇಶದಿಂದ ಮರಳಿ ಬಂದಿರುವ ಚಿತ್ರತಂಡ ಉಳಿದ ಭಾಗದ ಚಿತ್ರೀಕರಣಕ್ಕಾಗಿ ಮುತ್ತಿನ ನಗರ ಹೈದರಾಬಾದ್‌ಗೆ ತೆರಳಲಿದೆ ಎನ್ನುತ್ತಾರೆ ಚಿತ್ರದ ಸಹನಿರ್ಮಾಪಕರಾದ ರಮೇಶ್‌ಬಾಬು.

ಪತ್ರಕರ್ತ ಗಣೇಶ್‌ಕಾಸರಗೋಡು ಅರ್ಪಿಸುತ್ತಿರುವ ಈ ಚಿತ್ರ ತೆಲುಗಿನ 'ಪೋಕಿರಿ' ಚಿತ್ರದ ಅವತರಣಿಕೆ. ದತ್ತ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಪೊರ್ಕಿ" ಚಿತ್ರವನ್ನು ಖ್ಯಾತ ನಿರ್ದೇಶಕ ಎಂ.ಡಿ.ಶ್ರೀಧರ್ ನಿರ್ದೇಶಿಸುತ್ತಿದ್ದಾರೆ. ನಿರ್ದೇಶಕರೇ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಕೃಷ್ಣಕುಮಾರ್ ಛಯಾಗ್ರಹಣವಿರುವ ಈ ಚಿತ್ರಕ್ಕೆ ಸಂತೋಷ್ ಪೈ ಕಾರ್ಯಕಾರಿ ನಿರ್ಮಾಪಕರು.

ಮೋಹನ್ ಕಲಾ ನಿರ್ದೇಶನ, ರವಿವರ್ಮ ಸಾಹಸ, ಸೌಂದರ್‌ರಾಜ್ ಸಂಕಲನ ಹಾಗೂ ಬಿ.ಎ.ಮಧು ಅವರ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ದರ್ಶನ್, ಪ್ರಣೀತಾ, ಅವಿನಾಶ್, ಆಶೀಷ್ ವಿದ್ಯಾರ್ಥಿ, ಶೋಭ್‌ರಾಜ್, ವಿನಾಯಕರಾಮ, ಮನೋಜ್, ಧರ್ಮ, ಸಂಗೀತಾ ಶೆಟ್ಟಿ, ಚಿತ್ರಾಶೆಣೈ, ಸಾಧುಕೋಕಿಲಾ, ಶರಣ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada