»   » 'ಪ್ರಾರ್ಥನೆ'ಗೆ ಕೈಜೋಡಿಸಿದ ಪ್ರಕಾಶ್ ರೈ

'ಪ್ರಾರ್ಥನೆ'ಗೆ ಕೈಜೋಡಿಸಿದ ಪ್ರಕಾಶ್ ರೈ

Subscribe to Filmibeat Kannada

ಸದಾಶಿವ ಶೆಣೈ ನಿರ್ದೇಶಿಸುತ್ತಿರುವ 'ಪ್ರಾರ್ಥನೆ' ಚಿತ್ರದಲ್ಲಿ ನಟ ಪ್ರಕಾಶ್ ರೈಅಭಿನಯಿಸಲು ಸಮ್ಮತಿ ಸೂಚಿಸಿದ್ದಾರೆ. 'ಪ್ರಾರ್ಥನೆ' ಚಿತ್ರದಲ್ಲಿ ಕಾರಣಾಂತರಗಳಿಂದ ನಟಿಸುತ್ತಿಲ್ಲ ಎಂದು ಸುಧಾರಾಣಿ ಇತ್ತೀಚೆಗಷ್ಟೇ ಪ್ರಕಟಿಸಿದ್ದರು. ಇದೇ ಕೊರಗಿನಲ್ಲಿದ್ದ ಶೆಣೈ ಅವರಿಗೆ ಪ್ರಕಾಶ್ ರೈ ಆಗಮನ ಸಂತಸ ತಂದಿದೆಯಂತೆ.

ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಭಾನುವಾರ ನಡೆದ 'ಜೋಗಿ ' ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಪ್ರಕಾಶ್ ರೈ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶೆಣೈ ಅವರಿಗೆ ಪ್ರಕಾಶ್ ರೈ ನಿಮ್ಮ 'ಪ್ರಾರ್ಥನೆ' ಚಿತ್ರದಲ್ಲಿ ನಟಿಸಲಿದ್ದೇನೆ ಎಂದು ತಿಳಿಸಿ ಅಚ್ಚರಿ ಉಂಟು ಮಾಡಿದ್ದರು. ಶೆಣೈ 'ಪ್ರಾರ್ಥನೆ'ಗೆ ಕಡೆಗೂ ಫಲ ಸಿಕ್ಕಿ ಆನೆ ಬಲ ಬಂದಂತಾಗಿದೆ.

ಪ್ರಕಾಶ್ ರೈ ಹಾಗೂ ಅನಂತನಾಗ್ 'ಪ್ರಾರ್ಥನೆ'ಯಲ್ಲಿ ಜತೆಯಾಗಿ ನಟಿಸಲಿದ್ದಾರೆ. ರೈ ಅವರು ಮೂರು ದಿನಗಳ ಕಾಲ್ ಶೀಟನ್ನು ಕೊಟ್ಟಾಗಿದೆ. ಪ್ರಾರ್ಥನೆ ಈಗಾಗಲೆ ಏಳು ದಿನಗಳ ಕಾಲದ ಚಿತ್ರೀಕರಣ ಮುಗಿಸಿಕೊಂಡಿದೆ. ಇನ್ನು ಒಟ್ಟು 15 ದಿನಗಳ ಚಿತ್ರೀಕರಣ ಬಾಕಿ ಇದೆ.

ಏತನ್ಮಧ್ಯೆ ಸುಧಾರಾಣಿ ಅವರಿಂದ ತೆರವಾಗಿರುವ ನಟಿಯ ಸ್ಥಾನವನ್ನು ತುಂಬಲು ಶೆಣೈ ಹುಡುಕಾಟ ಆರಂಭವಾಗಿದೆ. ಜನವರಿ ಎರಡನೇ ವಾರದಿಂದ ಎರಡನೇ ಹಂತದ ಚಿತ್ರೀಕರಣ ಚಾಲನೆ ಪಡೆದುಕೊಳ್ಳಲಿದೆ. ಪ್ರಕಾಶ್ ರೈಆಗಮನ 'ಪ್ರಾರ್ಥನೆ' ಚಿತ್ರತಂಡವನ್ನು ಗೆಲುವಾಗಿಸಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada