For Quick Alerts
  ALLOW NOTIFICATIONS  
  For Daily Alerts

  ನಾಯಕ ಫಿಕ್ಸಾಗಿಲ್ಲ: ಕೋಕೋ ಚಂದ್ರು ಕಣ್ಣುಮುಚ್ಚಾಲೆ

  |

  ಕೋ ಕೋ ಆಡಿ ಸುಸ್ತಾಗಿರುವ ಚಂದ್ರು 'ಚಾರ್ಮಿನಾರ್' ಎಂಬ ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳಲಿರುವುದು ಸುದ್ದಿಯಾಗಿದೆ. ಆದರೆ ಈ ಚಿತ್ರಕ್ಕೆ ನಾಯಕರಾಗಿ ಅಜಯ್, ಗಣೇಶ್ ಅಥವಾ ಶ್ರೀನಗರ ಕಿಟ್ಟಿ ಈ ಮೂವರಲ್ಲಿ ಯಾರೆಂದು ಇನ್ನೂ ಫಿಕ್ಸ್ ಆಗಿಲ್ಲ ಎನ್ನುವ ಮೂಲಕ ಕೋಕೋ ಆಡುತ್ತಿದ್ದಾರೆ ಚಂದ್ರು.

  ಇದು ಪ್ರಚಾರಪ್ರಿಯ ಚಂದ್ರುರ ಹೊಸ ವರಸೆಯೆಂಬುದು ಎಲ್ಲರಿಗೂ ತಿಳಿದುಬಿಟ್ಟಿದೆ. ಏಕೆಂದರೆ. ಈಗಾಗಲೇ ಇದೇ ಚಂದ್ರುರ 'ತಾಜ್ ಮಹಲ್'ನಲ್ಲಿ ನಾಯಕರಾಗಿದ್ದ ಅಜಯ್ ರಾವ್ ಅವರೇ ನಾಯಕರೆಂದು ಆಯ್ಕೆ ಮಾಡಿ ಅವರಿಗೆ ಅಡ್ವಾನ್ಸ್ ಕೂಡ ಸಂದಿರುವುದು ಗಾಂಧಿನಗರದ ಗಲ್ಲಿಗಲ್ಲಿಗೂ ಗೊತ್ತಿದೆ.

  ಹಾಗಿದ್ದೂ ಚಂದ್ರು ಹೊಸ ಗಿಮಿಕ್ ಮಾಡುತ್ತಿದ್ದೇನೆ ಎಂಬ ಭ್ರಮೆಯಲ್ಲಿದ್ದಾರೆ. ಎಲ್ಲ ಗಿಮಿಕ್ ಗಳನ್ನು ಪಕ್ಕಕ್ಕೆ ಕಟ್ಟಿಟ್ಟು, ತಾಜ್ ಮಹಲ್ ನಂತಹ ಒಳ್ಳೆಯ ಚಿತ್ರ ಕೊಟ್ಟರೆ ಅದೇ ಸಾಕು ಎನ್ನುತ್ತಿದೆ ಪ್ರೇಕ್ಷಕ ವರ್ಗ. ಸಾಕಷ್ಟು ಹಣವಿದ್ದ ಕೋ ಕೋ ನಿರ್ಮಾಪಕರು ಕಷ್ಟುಪಟ್ಟು ಅದನ್ನು 50 ದಿನ ಮುಟ್ಟಿಸಿದ್ದಾರೆ. ಆದರೆ ಎಲ್ಲರೂ ಹಾಗಿರುವುದಿಲ್ಲವಲ್ಲ!

  "ಚಾರ್ಮಿನಾರ್ ಚಿತ್ರಕ್ಕೆ ನಾಯಕರು ಪಕ್ಕಾ ಆದಮೇಲೂ ಹೀಗಾಡಿದರೆ ಅಜಯ್ ಕೂಡ ಕೈಯೆತ್ತಿದರೆ ಚಂದ್ರುಗೇ ಕಷ್ಟ. ಹಾಗಾಗಿ ನಾಯಕರ 'ಡವ್' ಆಟ ಆಡುವುದನ್ನು ಬಿಟ್ಟು ಚಂದ್ರು ಚೆನ್ನಾಗಿ ಚಾರ್ಮಿನರ್ ಮಾಡಲಿ. ಮತ್ತೆ ಕೋ ಕೋ ಆಡಿದರೆ ಮನೆಯಲ್ಲಿಬೇಕಾದೀತೆಂದು ಚಂದ್ರು ಹಿತೈಷಿಗಳು ಹೇಳುತ್ತಿದ್ದಾರೆಂಬುದು ಗಾಂಧಿನಗರದಿಂದ ಬಂದ ಲೇಟೆಸ್ಟ್ ಸುದ್ದಿ. (ಒನ್ ಇಂಡಿಯಾ ಕನ್ನಡ)

  English summary
  Ajay Rao selected as Hero for R Chandru's upcomig movie Charminar. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X