»   »  ದ. ಆಫ್ರಿಕಾದಲ್ಲಿ 'ಹೇ ಪಾರೂ' ಹಾಡಿನ ಚಿತ್ರೀಕರಣ

ದ. ಆಫ್ರಿಕಾದಲ್ಲಿ 'ಹೇ ಪಾರೂ' ಹಾಡಿನ ಚಿತ್ರೀಕರಣ

Subscribe to Filmibeat Kannada
Raaj-The showman' in August?
'ರಾಜ್' ಚಿತ್ರದ 'ಹೇ ಪಾರೂ...' ಜನಪ್ರಿಯ ಹಾಡಿನ ಚಿತ್ರೀಕರಣ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಚಿತ್ರದ ನಿರ್ದೇಶಕ ಪ್ರೇಮ್ ತಮ್ಮ ಚಿತ್ರತಂಡದೊಂದಿಗೆ ಜೂನ್ 7 ಕ್ಕೆ ದಕ್ಷಿಣಾ ಆಫ್ರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಇಪ್ಪತ್ತು ಸ್ಥಳೀಯ ಡ್ಯಾನ್ಸರ್ ಗಳ ಮಧ್ಯೆ ಪುನೀತ್ ಮತ್ತು ನಿಶಾ ಕೊಠಾರಿ ಕುಣಿಯಲಿದ್ದಾರೆ.

ಈ ಚಿತ್ರದ ಹಾಡನ್ನು ಅಲ್ಲಿನ ದ್ವೀಪ ಪ್ರದೇಶವೊಂದರಲ್ಲಿ ಚಿತ್ರೀಕರಣ ಮಾಡಿದ ನಂತರ ಇನ್ನೊಂದು ಹಾಡನ್ನು ಚಿತ್ರೀಕರಿಸಲು ರಾಜ್ ಚಿತ್ರತಂಡ ಅಲ್ಲಿಂದ ಬ್ರಿಟನ್ ಗೆ ಹಾರಲಿದೆ. ನಿರ್ಮಾಪಕ ಶ್ರೀನಿವಾಸಮೂರ್ತಿ ಈ ಎರಡೂ ದೇಶಗಳಲ್ಲಿ ಚಿತ್ರೀಕರಿಸಲು ಥಟ್ಟನೆ ಒಪ್ಪಿಕೊಂಡು ಬಿಟ್ಟಿದ್ದಾರೆ. ಚಿತ್ರೀಕರಣ ಆರಂಭವಾದಾಗಿನಿಂದ 'ರಾಜ್' ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಧ್ವನಿಸುರುಳಿ ಈಗಾಗಲೇ ಭರ್ಜರಿ ಮಾರಾಟ ಕಂಡಿದೆ. ಒಟ್ಟಾರೆ ನಿರ್ದೇಶಕ ಪ್ರೇಮ್ ದಿನದಿನಕ್ಕೂ ಅಭಿಮಾನಿಗಳನ್ನು ದೊಡ್ಡ ದೊಡ್ಡ ನಿರೀಕ್ಷೆಗಳತ್ತ ನೂಕುತ್ತಲೇ ಇದ್ದಾರೆ. ಈ ಮುಂಚೆ ಕೆನಡಾದಲ್ಲಿ ರಾಜ್ ಚಿತ್ರದ ಹಾಡುಗಳನ್ನು ಚಿತ್ರೀಕರಿಸಲು ನಿರ್ಧರಿಸಿದ್ದರು. ಅಲ್ಲಿ ಹಂದಿಜ್ವರದ ಪ್ರಭಾವ ಹೆಚ್ಚಾಗಿರುವ ಕಾರಣ ಚಿತ್ರೀಕರಣ ಸ್ಥಳವನ್ನು ದಕ್ಷಿಣಾ ಆಫ್ರಿಕಾಗೆ ಬದಲಾಯಿಸಲಾಯಿತು.

ಆಗಸ್ಟ್ ತಿಂಗಳ ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಪ್ರೇಮ್ ರ ಹಿಂದಿನ ಚಿತ್ರಗಳು ಈ ಹಬ್ಬದ ದಿನ ಬಿಡುಗಡೆಯಾಗಿ ಭರ್ಜರಿ ಹಿಟ್ ದಾಖಲಿಸಿದ್ದವು. ಅದೇ ನಂಬಿಕೆ ಮೇಲೆ ಪ್ರೇಮ್ ಈಗ ರಾಜ್ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಕೆನಡಾದ ರಮಣೀಯ ದೃಶ್ಯಗಳನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಚಿತ್ರೀಕರಿಸಲಿದ್ದೇವೆ ಎನ್ನುತ್ತಾರೆ ಪ್ರೇಮ್.

ಕಳೆದ ವರ್ಷ ಏಪ್ರಿಲ್ 24 ಕ್ಕೆ ಸೆಟ್ಟೇರಿದ ಚಿತ್ರ 2009ರ ಏಪ್ರಿಲ್ 24ಕ್ಕೆ ಬಿಡುಗಡೆ ಮಾಡಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಚಿತ್ರ ಬಿಡುಗಡೆಗೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇವೆ.ಚಿತ್ರದ ನಾಯಕಿ ನಿಶಾ ಕೊಠಾರಿ ಅವರು ರಾಮ್ ಗೋಪಾಲ್ ವರ್ಮಾರ 'ಅಗ್ಯಾತ್' ಚಿತ್ರೀಕರಣದಲ್ಲಿ ಕಾಲು ಮುರಿದುಕೊಂಡರು. ಹಾಗಾಗಿರಾಜ್ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಮುಂದೂಡಲ್ಪಟ್ಟಿತು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada