»   »  ಕೃಷ್ಣ ನೀ ಲೇಟಾಗಿ ಬಾರೋ ಸಂಕಲನ ಹಂತದಲ್ಲಿ

ಕೃಷ್ಣ ನೀ ಲೇಟಾಗಿ ಬಾರೋ ಸಂಕಲನ ಹಂತದಲ್ಲಿ

Subscribe to Filmibeat Kannada
Ramesh Aravind
ನಟ, ನಿರ್ದೇಶಕ ಮೋಹನ್ ಒಬ್ಬ ಪ್ರತಿಭಾವಂತ ಕಥೆಗಾರ ಹಾಗೂ ಸಂಭಾಷಣೆಕಾರ. ಅವರು ಬರೆಯುವ ಕಥೆ ಅಥವಾ ಸಂಭಾಷಣೆಗಳಲ್ಲಿ ಏನಾದರೂ ಒಂದು ವಿಶೇಷತೆ ಇದ್ದೇ ಇರುತ್ತದೆ. ಅದರಲ್ಲೂ ಹಾಸ್ಯ ಕಥೆಗಳನ್ನು ಕೂಡ ಅತ್ಯುತ್ತಮವಾಗಿ ಬರೆಯಬಲ್ಲರು. ಒಬ್ಬ ನಟನಾಗಿ, ಹಾಸ್ಯ ನಟನಾಗಿ, ನಿರ್ದೇಶಕನಾಗಿ ಸೈ ಎನಿಸಿಕೊಂಡ ಇನ್ನೊಬ್ಬ ವಿಶೇಷ ವ್ಯಕ್ತಿ ಎಂದರೆ ರಮೇಶ್ ಅರವಿಂದ್. ಇವರಿಬ್ಬರೂ ಒಟ್ಟಾಗಿ ನಟಿಸಿದ ಎಲ್ಲಾ ಚಿತ್ರಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.

ಮೋಹನ್ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ 'ಕೃಷ್ಣ ನೀ ಲೇಟಾಗಿ ಬಾರೋ' ಚಿತ್ರದ ಮಾತಿನ ಭಾಗ ಹಾಗೂ 3 ಹಾಡುಗಳ ಚಿತ್ರೀಕರಣ ಸಂಪೂರ್ಣಗೊಂಡಿದ್ದು, 2 ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಈ ಹಾಡುಗಳನ್ನು ಕೇರಳದಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡಕ್ಕಿದೆ. ಈಗ ಈ ಚಿತ್ರದ ಸಂಕಲನ ಕಾರ್ಯ ಭರದಿಂದ ಸಾಗಿದೆ.

ಈ ಚಿತ್ರದಲ್ಲಿ ಹುಡುಗಿಯರ ಕಾಲೇಜಿನ ಏಕೈಕ ಪುರುಷ ಉಪನ್ಯಾಸಕನಾಗಿ ರಮೇಶ್ ಹಾಗೂ ಫ್ಯಾಷನ್ ಫೋಟೋಗ್ರಾಫರ್ ಆಗಿ ಮೋಹನ್ ಹಾಗೂ ಇವರಿಬ್ಬರ ಜೋಡಿಯಾಗಿ ಮಾಡರ್ನ್ ಹುಡುಗಿ ನೀತು, ಸಾಂಪ್ರದಾಯಿಕತೆಯ ಬೆಡಗಿ ನಿಧಿ ಸುಬ್ಬಣ್ಣ ಇವರೆಲ್ಲರ ನಡುವೆ ನಡೆಯುವ ಹಾಸ್ಯ ಪ್ರಸಂಗಗಳನ್ನು ಅತ್ಯಂತ ರಸವತ್ತಾಗಿ ನಿರೂಪಿಸಿದ್ದಾರೆ ನಿರ್ದೇಶಕ ಮೋಹನ್. ಎಂ.ಡಿ. ಪ್ರಕಾಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತ ಸಂಯೋಜನೆ, ಆರ್.ವಿ. ನಾಗೇಶ್ವರರಾವ್ ಅವರ ಛಾಯಾಗ್ರಹಣ, ಚಿನ್ನಿಪ್ರಕಾಶ್, ಲಾಲಿಪಪ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ಹಿರಿಯ ನಟ ದತ್ತಣ್ಣ, ಸುಂದರ್, ದೊಡ್ಡಣ್ಣ ತಾರಾಗಣದಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಚಿತ್ರಮಂದಿರ ತುಂಬಿದೆ; ವೆಂಕಟನ ಸಂಕಟ ಪರಿಹಾರ
ಮಳೆ ನೃತ್ಯದಿಂದ ವೆಂಕಟನ ಗೆದ್ದ ಶರ್ಮಿಳಾ
ಹಾಸ್ಯದ ಸುನಾಮಿ ಉಕ್ಕಿಸುವ ವೆಂಕಟ ಇನ್ ಸಂಕಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada