»   » ವಿಷ್ಣುವರ್ಧನ ತೆರೆಗೆ: ಲೋ ಬಜೆಟ್ ಚಿತ್ರಗಳಿಗೆ ಚಳಿಜ್ವರ

ವಿಷ್ಣುವರ್ಧನ ತೆರೆಗೆ: ಲೋ ಬಜೆಟ್ ಚಿತ್ರಗಳಿಗೆ ಚಳಿಜ್ವರ

Posted By:
Subscribe to Filmibeat Kannada
Sudeep Bhavana
ಬಹುನಿರೀಕ್ಷೆಯ 'ವಿಷ್ಣುವರ್ಧನ' ಚಿತ್ರ ಮುಂದಿನ ತಿಂಗಳು (ಡಿಸೆಂಬರ್ 8) ಕ್ಕೆ ತೆರೆಗೆ ಬರುತ್ತಿದೆ. ಇಷ್ಟು ದಿನ ಆ ಚಿತ್ರ ಯಾವಾಗ ಬರಲಿದೆ ಎಂಬುದು ಖಾತ್ರಿಯಾಗಿರಲಿಲ್ಲ. ಹಾಗಾಗಿ ಒಂದಷ್ಟು ಚಿತ್ರಗಳ ಬಿಡುಗಡೆಯನ್ನು ಘೋಷಿಸಲಾಗಿತ್ತು. ಅವುಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ 'ಶೈಲೂ' ಪ್ರಮುಖವಾದದ್ದು.

ಉಳಿದಂತೆ, ರವಿಚಂದ್ರನ್ ಅಭಿನಯದ 'ನರಸಿಂಹ', ಆದಿತ್ಯ ಅಭಿನಯದ 'ವಿಲನ್' ಬಿಡುಗಡೆಗೆ ಕಾದಿವೆ. ಕೃಷ್ಣಮೂರ್ತಿ ಅಭಿನಯದ 'ಜ್ರೇಡ್ರಳ್ಳಿ', ಹಾಗೂ 'ಎಕೆ 56' ಕೂಡ ಬಿಡುಯಾಗವ ಸಾಧ್ಯತೆ ಇದೆ. ವಿಷ್ಣುವರ್ಧನ್ ಬಿಡುಗಡೆಗೆ ಕಾದು, ಅದನ್ನು ತಿಳಿಯಲಾಗದೇ ತಮ್ಮ 'ಪಾಗಲ್' ಚಿತ್ರದ ಬಿಡುಗಡೆಯನ್ನು ಡಿಸೆಂಬರ್ 2 ಕ್ಕೆ ಘೋಷಿಸಿದ್ದಾರೆ, ನಿರ್ದೇಶಕ ಪಿ ಎನ್ ಸತ್ಯ.

ಕುತೂಹಲದ ವಿಷಯವೆಂದರೆ ಗಣೇಶ್ ಅಭಿನಯದ ಶೈಲೂ ಹಾಗೂ ಸುದೀಪ್ ಅಭಿನಯದ ವಿಷ್ಣುವರ್ಧನ ಒಂದೇ ದಿನ ಬರಲಿದ್ದು, ಗಣೇಶ್ ಹಾಗೂ ಸುದೀಪ್ ಬಾಕ್ಸ್ ಆಫೀಸ್ ನಲ್ಲಿ ಮುಖಾಮುಖಿ ಆಗಲಿದ್ದಾರೆ. ಸೋತು ಸುಣ್ಣವಾಗಿರುವ ಗಣೇಶ್, ಶೈಲೂ ಚಿತ್ರದ ಮೂಲಕ ಮತ್ತೆ ಗೆಲುವಿನ ಸರದಾರನಾಗಲು ಕನಸು ಕಾಣುತ್ತಿದ್ದಾರೆ. ಅದಕ್ಕೆ ಸುದೀಪ್ ಬ್ರೇಕ್ ಹಾಕುತ್ತಾರೋ ಏನೋ! (ಒನ್ ಇಂಡಿಯಾ ಕನ್ನಡ)

English summary
Kannada Movie Vishnuvardhana releases on Dec. 8. Sudeep and Bhavana Pair for this movie. Dwarakish produced this. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada