»   »  ಜಗತ್ತಿನ ಅತಿ ಕುಬ್ಜ ಸುಂದರಿ ಜ್ಯೋತಿ ಆಮ್ ಜೆ ಕನ್ನಡಕ್ಕೆ

ಜಗತ್ತಿನ ಅತಿ ಕುಬ್ಜ ಸುಂದರಿ ಜ್ಯೋತಿ ಆಮ್ ಜೆ ಕನ್ನಡಕ್ಕೆ

Subscribe to Filmibeat Kannada

ಶೀಘ್ರದಲ್ಲೇ ಜಗತ್ತಿನ ಅತಿ ಕುಬ್ಜನಟಿ ಜ್ಯೋತಿ ಆಮ್ ಜೆ ಅವರನ್ನು ಕನ್ನಡ ಚಿತ್ರವೊಂದರಲ್ಲಿ ನೋಡಬಹುದು. ಹುತ್ತೇಶ್ ನಿರ್ಮಿಸುತ್ತಿರುವ ಕನ್ನಡ ಮತ್ತು ಹಿಂದಿ ದ್ವಿಭಾಷಾ ಚಿತ್ರದಲ್ಲಿ ಜ್ಯೋತಿ ಅಭಿನಯಿಸಲಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಬಿ ಆರ್ ಪಂತುಲು ಅವರ ತಂಗಿಮಗ ದ್ವಾರಕ ವಿಷ್ಣು ಎಂಬುದು ವಿಶೇಷ. ಇನ್ನೂ ಹೆಸರಿಡದ ಈ ಚಿತ್ರವನ್ನು ಒಟ್ಟು ರು.4 ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ ಹುತ್ತೇಶ್.

ಇನ್ನು ಜ್ಯೋತಿ ವಿಚಾರಕ್ಕೆ ಬಂದರೆ, ಈಕೆಯ ವಯಸ್ಸು 16, ಎತ್ತರ 61 ಸೆಂ.ಮೀ, ತೂಕ ಕೇವಲ 5 ಕೆ.ಜಿ! ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಈಕೆ ನಟನೆಯಲ್ಲಿ ತನ್ನದೇ ಆದ ಸಾಮರ್ಥ್ಯವನ್ನು ತೋರಿದ್ದಾರೆ. ಕುಬ್ಜತನಕ್ಕೆ ಸಂಬಂಧಿಸಿದ Achondroplasia ಎಂಬ ಕಾಯಿಲೆಯಿಂದ ಜ್ಯೋತಿ ಬಳಲುತ್ತಿದ್ದಾರೆ.

ನಾಗಪುರದ ಜಿಂಗಲ್ ಬೆಲ್ಸ್ ಪ್ರೌಢಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿರುವ ಜ್ಯೋತಿ ನನ್ನನ್ನು ಯಾರು ಟೀಸ್ ಮಾಡುವುದಿಲ್ಲ ಎನ್ನುತ್ತಾರೆ. ಮೂರನೇ ವರ್ಷದಲ್ಲಿದ್ದಾಗಲೇ ಆಕೆ ಕುಬ್ಜ ಕಾಯಿಲೆಗೆ ತುತ್ತಾದಳು. ಅವರ ಪೊಷಕರು ಹಲವಾರು ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಲಿಲ್ಲ. ಅಷ್ಟೊತ್ತಿಗಾಗಲೇ ಈ ಕಾಯಿಲೆ ಉಲ್ಭಣಿಸಿ ಆಕೆಯನ್ನು ಕುಬ್ಜಗೊಳಿಸಿಬಿಟ್ಟಿತ್ತು.

ಜಪಾನ್, ಮ್ಯಾಡ್ರಿಡ್ ಮತ್ತು ಅಮೆರಿಕದ ದೂರದರ್ಶನದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜ್ಯೋತಿ ಜನಪ್ರಿಯತೆ ದೇಶದ ಗಡಿದಾಟಿದೆ. ದೊಡ್ಡ ಹೆಸರು ಮಾಡಲು ತನ್ನ ಕುಬ್ಜ ದೇಹವೇನು ಅಡ್ಡಿ ಬರುತ್ತಿಲ್ಲ. ನಾನು ಸಂತೋಷವಾಗಿ ಇದ್ದೇನೆ ಎನ್ನುತ್ತಾರೆ ನಾಗ್ಪುರ ಸುಂದರಿ. ಅಂದಹಾಗೆ ಈ ಚಿತ್ರದಲ್ಲಿ ಜ್ಯೋತಿ ಅವರದು ಹಾಸ್ಯ ಪಾತ್ರ. ಹೊಸಬರಾದ ರಾಜುಲ್ ಗಾಂಧಿ ಮತ್ತು ಮಂಜು ದೀಕ್ಷಿತ್ ಚಿತ್ರದ ಮುಖ್ಯ ಪಾತ್ರಗಳಲ್ಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada