»   » ತಿರುಪತಿ ಗಿರಿವಾಸನ ದರ್ಶನ ಭಾಗ್ಯ ಪಡೆದ ನಮಿತಾ

ತಿರುಪತಿ ಗಿರಿವಾಸನ ದರ್ಶನ ಭಾಗ್ಯ ಪಡೆದ ನಮಿತಾ

Posted By:
Subscribe to Filmibeat Kannada

ಸೆಕ್ಸಿತಾರೆ ಎಂದೇ ಖ್ಯಾತರಾಗಿರುವ ನಮಿತಾರಿಗೆ ಯಾಕೋ ಏನೋ ಇದ್ದಕ್ಕಿದ್ದಂತೆ ತಿರುಪತಿ ಗಿರಿವಾಸ ಶ್ರೀವೆಂಕಟೇಶನ ಮೇಲೆ ಭಕ್ತಿ ಭಾವ ಉಕ್ಕಿ ಬಂದಂತಿದೆ. ಇತ್ತೀಚೆಗೆ ಆಕೆ ತಿರುಮಲ ತಿರುಪತಿಗೆ ಭೇಟಿ ನೀಡಿ ಶ್ರೀವಾರಿ ದರ್ಶನ ಭಾಗ್ಯ ಪಡೆದರು.

ಈ ಸಂದರ್ಭದಲ್ಲಿ ಆಕೆ ಮಾಧ್ಯಮಗಳೊಂದಿಗೆ ಹೆಚ್ಚಾಗಿ ಮಾತನಾಡದೆ ಎಸ್ಕೇಪ್ ಆದರು. ಹೋಗಲಿ ನಿಮ್ಮ ಮುಂದಿನ ಚಿತ್ರಗಳ ಬಗ್ಗೆಯಾದರೂ ತಿಳಿಸಿ ಎಂದು ಕೇಳಿದ ಪತ್ರಕರ್ತರಿಗೆ ಮುಗುಳ್ನಗೆಯಲ್ಲೇ ಉತ್ತರ ನೀಡಿದ್ದಾರೆ.

ಕುಟುಂಬ ಸಮೇತ ಆಗಮಿಸಿದ ನಮಿತಾ ವೈಕುಂಠ ದ್ವಾರದ ಮೂಲಕ ಕ್ಯೂನಲ್ಲಿ ತೆರಳಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು. ತಿರುಪತಿಗೆ ಬಂದಿದ್ದಕ್ಕೆ ತುಂಬಾ ಆನಂದವಾಗಿದೆ ಎಂದಷ್ಟೇ ಹೇಳಿ ಅಲ್ಲಿಂದ ತರಾತುರಿಯಲ್ಲಿ ಹೊರಟು ಹೋಗಿದ್ದಾರೆ. (ಏಜೆನ್ಸೀಸ್)

English summary
South Indian Actress Namitha visits Tirumala Tirupati-Namitha offers prayers at Tirumala.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada