»   » 'ದಿ ವಿಲನ್' ಸಿನಿಮಾದಲ್ಲಿ ಇರಲಿದೆ ಈ ಮೂವರ ತರಲೆ

'ದಿ ವಿಲನ್' ಸಿನಿಮಾದಲ್ಲಿ ಇರಲಿದೆ ಈ ಮೂವರ ತರಲೆ

Posted By:
Subscribe to Filmibeat Kannada

ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟನೆ 'ದಿ ವಿಲನ್' ಸಿನಿಮಾದ ಚಿತ್ರೀಕರಣ ಇನ್ನು ನಡೆಯುತ್ತಿದೆ. ಈ ಸಿನಿಮಾದ ಟೀಸರ್ ನೋಡುವುದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಇವುಗಳ ಜೊತೆಗೆ ಈ ಸಿನಿಮಾದ ಒಂದೊಂದೆ ಸುದ್ದಿ ಹೊರ ಬರುತ್ತಲ್ಲೇ ಇದೆ.

'ದಿ ವಿಲನ್' ಒಂದು ಪಕ್ಕಾ ಕಮರ್ಶಿಯಲ್ ಸಿನಿಮಾ. ಈ ಸಿನಿಮಾದಲ್ಲಿ ಆಕ್ಷನ್, ಲವ್, ಕಾಮಿಡಿ, ಸೆಂಟಿಮೆಂಟ್ ಎಲ್ಲ ಇರುತ್ತದೆ. ಇನ್ನು ಸಿನಿಮಾದಲ್ಲಿ ಕಾಮಿಡಿಗೆ ಕೂಡ ಹೆಚ್ಚು ಒತ್ತು ನೀಡಲಾಗಿದೆ ಎನ್ನುವುದಕ್ಕೆ ಒಂದು ಕಾರಣ ಸಿಕ್ಕಿದೆ. ಚಿತ್ರದಲ್ಲಿ ಮೂರು ಪ್ರತಿಭಾವಂತ ಕಾಮಿಡಿ ಕಲಾವಿದರಿಗೆ ಅವಕಾಶ ನೀಡಲಾಗಿದೆ.

'ಕಾಮಿಡಿ ಕಿಲಾಡಿ' ಶಿವರಾಜ್ ಕೆ.ಆರ್.ಪೇಟೆಗೆ ಗೋಲ್ಡನ್ ಚಾನ್ಸ್! ಯಾವ ಚಿತ್ರದಲ್ಲಿ?

'ಮಜಾ ಟಾಕೀಸ್' ಮೂಲಕ ದೊಡ್ಡ ಹೆಸರು ಮಾಡಿರುವ ಹಾಸ್ಯ ನಟ ಕುರಿ ಪ್ರತಾಪ್, 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಶಿವರಾಜ್.ಕೆ.ಆರ್ ಪೇಟೆ ಹಾಗೂ ಲೋಕೇಶ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಮೂರು ಕಲಾವಿದರು ಸಿನಿಮಾದಲ್ಲಿ ಇದ್ದು, ನೋಡುಗರನ್ನು ನಕ್ಕು ನಗಿಸಲಿದ್ದಾರೆ.

3 comedy actors in The Villain kannada movie

ನಿರ್ದೇಶಕ ಪ್ರೇಮ್ ತಮ್ಮ ಈ ಸಿನಿಮಾದಲ್ಲಿ ಈ ಮೂರು ಜನರಿಗೆ ಅವಕಾಶ ನೀಡಿದ್ದಾರೆ. ವಿಶೇಷ ಅಂದರೆ ಶಿವರಾಜ್.ಕೆ.ಆರ್ ಪೇಟೆ ಹಾಗೂ ಲೋಕಿ ಅವರ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿಯೇ ನಿರ್ದೇಶಕ ಪ್ರೇಮ್ ಪತ್ನಿ ರಕ್ಷಿತಾ ತೀರ್ಪುಗಾರರಾಗಿದ್ದರು.

English summary
Kuri Prathap, Shivaraj KR Pet and Comedy Kiladigalu Lokesh in Kannada Movie 'The Villain'. Sudeep and Shivarajkumar starrer 'The Villain' movie is directed by Prem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada