For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಮನೆ ಮುಂದೆ ಸೆಲೆಬ್ರೆಟಿಗಳ ಜಾತ್ರೆ.. ಉತ್ತರ ಕರ್ನಾಟಕ, ಮೈಸೂರು, ಬೆಂಗಳೂರು ಫ್ಯಾನ್ಸ್ ಭೇಟಿ ರಹಸ್ಯ ಏನು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆಗೆ 2 ದಿನ ಮಾತ್ರ ಬಾಕಿಯಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಮತ್ತೊಂದು ಕಡೆ ಕಳೆದೆರಡು ದಿನಗಳಿಂದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ದರ್ಶನ್ ನಿವಾಸಕ್ಕೆ ಬರುತ್ತಿದ್ಧಾರೆ. ನೆಚ್ಚಿನ ನಟನನ್ನು ನೋಡಿ ಕೈ ಕುಲುಕಿ ವಿಶ್ ಮಾಡಿ, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ಧಾರೆ.

  ಸ್ಯಾಂಡಲ್‌ವುಡ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬಹಳ ದೊಡ್ಡ ಅಭಿಮಾನಿ ಬಳಗ ಇದೆ. ಪ್ರತಿದಿನ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ನಗರದ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸಕ್ಕೆ ಬರುತ್ತಾರೆ. ಗಂಟೆಗಟ್ಟಲೆ ಕಾಯುತ್ತಾರೆ. ತಮ್ಮ ಹೊಸ ಕಾರ್, ಬೈಕ್ ತಂದು ಆಟೋಗ್ರಾಫ್ ತೆಗೆದುಕೊಂಡು ಹೋಗುತ್ತಾರೆ. ಇತ್ತೀಚೆಗೆ 'ಕ್ರಾಂತಿ' ಚಿತ್ರದ ಸಾಂಗ್‌ ರಿಲೀಸ್‌ಗಾಗಿ ಚಿತ್ರತಂಡ ರಾಜ್ಯದ 4 ಜಿಲ್ಲೆಗಳಿಗೆ ಭೇಟಿ ನೀಡಿತ್ತು. ಎಲ್ಲಾ ಕಡೆ ಅಭಿಮಾನಿಗಳು ಸಾಗರದಂತೆ ಜಮಾಯಿಸಿ ಚಿತ್ರಕ್ಕೆ ಬೆಂಬಲ ಸೂಚಿಸಿದ್ದರು. ಚಿತ್ರದ ಹಾಡುಗಳಿಗೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ತಿದೆ. ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಮತ್ತೆ ದರ್ಶನ್ ಮನೆ ಮುಂದೆ ಅಭಿಮಾನೋತ್ಸವ ನಡೀತಿದೆ.

  'ಕ್ರಾಂತಿ' ರಿಲೀಸ್‌ಗೆ 3 ದಿನ ಬಾಕಿ: ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗದಲ್ಲಿ ಎಷ್ಟೆಷ್ಟು ಶೋ?'ಕ್ರಾಂತಿ' ರಿಲೀಸ್‌ಗೆ 3 ದಿನ ಬಾಕಿ: ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗದಲ್ಲಿ ಎಷ್ಟೆಷ್ಟು ಶೋ?

  ಕಳೆದೆರಡು ದಿನಗಳಿಂದ ದರ್ಶನ್ ಮನೆ ಮುಂದೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ಕಿಲೋ ಮೀಟರ್‌ ದೂರಕ್ಕೆ ಸಾಲು ನಿಂತು ಕಾಯುತ್ತಿದ್ದಾರೆ. ದರ್ಶನ್ ಕೂಡ ಅಭಿಮಾನಿಗಳಿಗೆ ಬೇಸರ ಮಾಡದೇ ಎಲ್ಲರನ್ನು ಭೇಟಿ ಮಾಡಿ, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

  ದರ್ಶನ್ ಮನೆ ಮುಂದೆ ಅಭಿಮಾನೋತ್ಸವ

  ದರ್ಶನ್ ಮನೆ ಮುಂದೆ ಅಭಿಮಾನೋತ್ಸವ

  ಭಾನುವಾರ 3 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ದರ್ಶನ್ ನಿವಾಸಕ್ಕೆ ಆಗಮಿಸಿದ್ದರು. ನಿವಾದ ಸುತ್ತಾಮುತ್ತಲಿನ ರಸ್ತೆಗಳೆಲ್ಲಾ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ರಾತ್ರಿವರೆಗೂ ಅಭಿಮಾನಿಗಳನ್ನು ಭೇಟಿ ಮಾಡಿ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಉತ್ತರ ಕರ್ನಾಟಕದ ದರ್ಶನ್ ಅಭಿಮಾನಿ ಸಂಘಗಳಿಂದ ನೂರಾರು ಸಂಖ್ಯೆ ಅಭಿಮಾನಿಗಳು ಬಂದಿದ್ದರು. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಚಾಲೆಂಜಿಂಗ್ ಸ್ಟಾರ್ ದರ್ಶನಕ್ಕಾಗಿ ಕಾದಿದ್ದರು. ಆಗಿಂದಾಗ್ಗೆ ಅಭಿಮಾನಿಗಳು ನೆಚ್ಚಿನ ನಟನನ್ನು ಭೇಟಿ ಮಾಡಲು ಬರುತ್ತಿರುತ್ತಾರೆ. ಇದೀಗ ರಾಜ್ಯದ ಎಲ್ಲಾ ಅಭಿಮಾನಿಗಳನ್ನು ಭೇಟಿ ಆಗಲು ದರ್ಶನ್ ಮುಂದಾಗಿದ್ದಾರೆ.

  ಇಂದು ಕೂಡ ಅಭಿಮಾನಿಗಳ ಜಾತ್ರೆ

  ಇಂದು ಕೂಡ ಅಭಿಮಾನಿಗಳ ಜಾತ್ರೆ

  ನಿನ್ನೆ ಉತ್ತರ ಕರ್ನಾಟಕದ ಅಭಿಮಾನಿಗಳು ಬಂದರೆ ಇವತ್ತು(ಜನವರಿ 23) ಮೈಸೂರು, ಮಂಡ್ಯ, ಬಿಡದಿ, ರಾಮನಗರದ ಸುತ್ತಾ ಮುತ್ತಾ ಇರುವ ಅಭಿಮಾನಿಗಳು ಸಾಗರೋಪಾದಿಯಲ್ಲಿ ಬೆಂಗಳೂರಿಗೆ ಬಂದಿದ್ಧಾರೆ. ಆರ್‌ಆರ್‌ ನಗರದಲ್ಲಿರುವ ನಟ ದರ್ಶನ್ ಮನೆ ಮುಂದೆ ಜಮಾಯಿಸಿದ್ದಾರೆ. ನೆಚ್ಚಿನ ನಟನನ್ನು ನೋಡಲು ಸಾಲುಗಟ್ಟಿ ನಿಂತಿದ್ದಾರೆ. ದರ್ಶನ್ ತಮ್ಮ ಅಭಿಮಾನಿಗಳನ್ನು ಸೆಲೆಬ್ರೆಟಿಗಳು ಎಂದು ಕರೆಯುತ್ತಾರೆ. ತಮ್ಮ ಸೆಲೆಬ್ರೆಟಿಗಳಿಗೆ ನಿರಾಸೆ ಮಾಡದೇ ಅವರೊಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

  ಬೆಂಗಳೂರು ಸೆಲೆಬ್ರೆಟಿಗಳು ಕಾತರ

  ಬೆಂಗಳೂರು ಸೆಲೆಬ್ರೆಟಿಗಳು ಕಾತರ

  ಉತ್ತರ ಕರ್ನಾಟಕ, ಮೈಸೂರಿನ ನಂತರ ನಾಳೆ ಬೆಂಗಳೂರಿನ ಅಭಿಮಾನಿಗಳನ್ನು ದರ್ಶನ್ ಭೇಟಿ ಮಾಡಲಿದ್ದಾರೆ. ಬೆಂಗಳೂರಿನಲ್ಲಿರುವ ಅಭಿಮಾನಿಗಳು ಕೂಡ ನೆಚ್ಚಿನ ನಟನನ್ನು ನೋಡಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಕಾತರರಾಗಿದ್ದಾರೆ. 'ಕ್ರಾಂತಿ' ಸಿನಿಮಾ ರಿಲೀಸ್ ಹೊಸ್ತಿಲಲ್ಲೇ ದರ್ಶನ್ ಅಭಿಮಾನಿಗಳ ಭೇಟಿ ಕುತೂಹಲ ಮೂಡಿಸಿದೆ. ಮತ್ತೊಂದು ಕಡೆ ಆನ್‌ಲೈನ್‌ನಲ್ಲಿ 'ಕ್ರಾಂತಿ' ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸುಳಿವು ಸಿಕ್ತಿದೆ.

  2 ಕೋಟಿಗೂ ಅಧಿಕ ಕಲೆಕ್ಷನ್

  2 ಕೋಟಿಗೂ ಅಧಿಕ ಕಲೆಕ್ಷನ್

  ಈಗಾಗಲೇ 'ಕ್ರಾಂತಿ' ಚಿತ್ರದ ಮೊದಲ ದಿನದ ಹಲವು ಶೋಗಳು ಹೌಸ್‌ಫುಲ್ ಆಗಿದೆ. ಕೆಜಿ ರಸ್ತೆಯ ಅನುಪಮಾ ಥಿಯೇಟರ್ ಮುಂದೆ 2 ದಿನ ಮೊದಲೇ ಹೌಸ್‌ಫುಲ್ ಬೋರ್ಡ್ ಬಿದ್ದಿದೆ. ಒಂದೇ ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ ಆಗಿರುವ ಲೆಕ್ಕಾಚಾರ ನಡೀತಿದೆ. ಆ ಲೆಕ್ಕದಲ್ಲಿ ಈಗಾಗಲೇ ಸಿನಿಮಾ 2 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದಂತಾಗಿದೆ. ಬುಕ್ಕಿಂಗ್ ನೋಡ್ತಿದ್ರೆ, ಚಿತ್ರಕ್ಕೆ ಜನವರಿ 26ರಂದು ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆ ಇದೆ.

  English summary
  3 Days Darshan meets fans outside his house, ahead of Kranti Release. Kranti Day 1 Advance booking in full swing. Know more.
  Monday, January 23, 2023, 14:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X