For Quick Alerts
  ALLOW NOTIFICATIONS  
  For Daily Alerts

  'ಕನ್ನಡ ಹಬ್ಬ'ಕ್ಕೆ ಶಿವಣ್ಣ, ರವಿಚಂದ್ರನ್, ಶ್ರೀಮುರಳಿ ನೀಡ್ತಾರೆ ಭರ್ಜರಿ ಉಡುಗೊರೆ!

  By Naveen
  |

  ಈ ಬಾರಿಯ 'ಕನ್ನಡ ರಾಜ್ಯೋತ್ಸವ'ಕ್ಕೆ ಎರಡೇ ದಿನ ಬಾಕಿ ಇದೆ. ಕನ್ನಡ ಹಬ್ಬಕ್ಕೆ ಕನ್ನಡಿಗರು ಸಜ್ಜಾಗುತ್ತಿದ್ದಾರೆ. ಇದರ ಜೊತೆಗೆ ಕನ್ನಡ ಸಿನಿಮಾರಂಗ ಕೂಡ 'ಕನ್ನಡ ರಾಜ್ಯೋತ್ಸವ'ದ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡುತ್ತಿದೆ.

  85ನೇ ವಯಸ್ಸಿನಲ್ಲಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ನಿರ್ದೇಶಕ ಭಗವಾನ್!

  ನಟ ಅನಂತ್ ನಾಗ್, ಶಿವರಾಜ್ ಕುಮಾರ್, ರವಿಚಂದ್ರನ್, ಶ್ರೀಮುರಳಿ, ದುನಿಯಾ ವಿಜಯ್ ಈ ವರ್ಷದ ರಾಜ್ಯೋತ್ಸವಕ್ಕೆ ಉಡುಗೊರೆ ನೀಡಲಿದ್ದಾರೆ. ಇದೇ ನವೆಂಬರ್ 1ಕ್ಕೆ ಕನ್ನಡದ ಎರಡು ಸಿನಿಮಾಗಳ ಲಾಂಚ್ ಹಾಗೂ ಮೂರು ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ. ಮುಂದೆ ಓದಿ...

  'ಶಿವಣ್ಣ' ಹೊಸ ಸಿನಿಮಾ ಲಾಂಚ್

  'ಶಿವಣ್ಣ' ಹೊಸ ಸಿನಿಮಾ ಲಾಂಚ್

  ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ ನವೆಂಬರ್ 1ಕ್ಕೆ ಲಾಂಚ್ ಆಗಲಿದೆ. ಶಿವಣ್ಣ ಸಂಬಂಧಿಯೇ ಆದ ಲಕ್ಕಿ ಗೋಪಾಲ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಚಿತ್ರಕ್ಕೆ 'ಎಸ್.ಆರ್.ಕೆ' ಎಂಬ ಟೈಟಲ್ ಇಡಲಾಗಿದೆ.

  'ಮಫ್ತಿ' ಟ್ರೇಲರ್

  'ಮಫ್ತಿ' ಟ್ರೇಲರ್

  ಶ್ರೀಮುರಳಿ ಅಭಿನಯದ 'ಮಫ್ತಿ' ಚಿತ್ರದ ಟ್ರೇಲರ್ ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ರಿಲೀಸ್ ಆಗಲಿದೆ. ಈ ಚಿತ್ರವನ್ನು ನರ್ತನ್ ನಿರ್ದೇಶನ ಮಾಡಿದ್ದು, ಶಿವಣ್ಣ ಚಿತ್ರದ ಒಂದು ಪಾತ್ರದಲ್ಲಿ ನಟಿಸಿದ್ದಾರೆ.

  ಶಿವಣ್ಣನ ಹೊಸ ಚಿತ್ರದ ಮುಹೂರ್ತಕ್ಕೆ 'ದೊಡ್ಮನೆ' ಅತಿಥಿಗಳು.! ಯಾರದು?

  'ಕನಕ' ಟ್ರೇಲರ್

  'ಕನಕ' ಟ್ರೇಲರ್

  ದುನಿಯಾ ವಿಜಯ್ ಅವರ 'ಕನಕ' ಚಿತ್ರದ ಟ್ರೇಲರ್ ಅನ್ನು ನವೆಂಬರ್ 1ಕ್ಕೆ ಬಿಡುಗಡೆ ಮಾಡುವ ತಯಾರಿಯನ್ನು ನಿರ್ದೇಶಕ ಆರ್.ಚಂದ್ರು ಮಾಡಿದ್ದಾರೆ.

  'ಆಡುವ ಗೊಂಬೆ' ಚಿತ್ರದ ಮುಹೂರ್ತ

  'ಆಡುವ ಗೊಂಬೆ' ಚಿತ್ರದ ಮುಹೂರ್ತ

  ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಅನಂತ್ ನಾಗ್ ಅವರ 'ಆಡುವ ಗೊಂಬೆ' ಚಿತ್ರದ ಮುಹೂರ್ತ ಚಿಕ್ಕಮಗಳೂರಿನಲ್ಲಿ ನಡೆಯಲಿದೆ. ಈ ಚಿತ್ರದ ಮೂಲಕ ಹಿರಿಯ ನಿರ್ದೇಶಕ ಭಗವಾನ್ 20 ವರ್ಷಗಳ ಕಮ್ ಬ್ಯಾಕ್ ಮಾಡಿದ್ದು, ತಮ್ಮ 85ನೇ ವಯಸ್ಸಿನಲ್ಲಿ ಚಿತ್ರವನ್ನು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.

  'ಬಕಾಸುರ' ಟ್ರೇಲರ್

  'ಬಕಾಸುರ' ಟ್ರೇಲರ್

  ಹಾಡುಗಳು ಮೂಲಕ ಸದ್ದು ಮಾಡುತ್ತಿರುವ 'ಬಕಾಸುರ' ಚಿತ್ರದ ಟ್ರೇಲರ್ ನವೆಂಬರ್ ತಿಂಗಳ ಮೊದಲ ದಿನ ಬಿಡುಗಡೆಯಾಗಲಿದೆ. 'ಕರ್ವ' ಖ್ಯಾತಿಯ ನವನೀತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರವಿಚಂದ್ರನ್ ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  3 Kannada Movie trailers will be released on November 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X