For Quick Alerts
  ALLOW NOTIFICATIONS  
  For Daily Alerts

  ಭಕ್ತಿ, ಭಾವ, ಪ್ರೇಮ : ಈ ವಾರ ಕನ್ನಡದಲ್ಲಿ 3 ಹೊಸ ಸಿನಿಮಾ ರಿಲೀಸ್

  By Naveen
  |
  ಈ ವಾರ ತೆರೆಗೆ ಅಪ್ಪಳಿಸಲಿರೋ ಸಿನಿಮಾಗಳು | Filmibeat Kannada

  ಪ್ರತಿ ಶುಕ್ರವಾರ ಕನ್ನಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲು ಕಾಯುತ್ತಿರುತ್ತವೆ. ಈ ವಾರ ಕನ್ನಡದಲ್ಲಿ ಮೂರು ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ವಿಶೇಷ ಅಂದರೆ, ಒಂದು ಸಿನಿಮಾ ಭಕ್ತಿಯ ಬಗ್ಗೆ ಇದ್ದರೆ, ಇನ್ನೊಂದು ಸಿನಿಮಾ ಭಾವನೆಗಳ ಮೇಲೆ ಇದೆ, ಮತ್ತೊಂದು ಸಿನಿಮಾ ಪ್ರೇಮದ ಕಥೆ ಹೊಂದಿದೆ.

  ಹಿರಿಯ ನಟ ಅನಂತ್ ನಾಗ್ ಅವರ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ', ಯಶಸ್ ಸೂರ್ಯ ನಟಿಸಿರುವ ಕನಕದಾಸರ ಜೀವನ ಸಾಧನೆ ಆಧಾರಿತ 'ರಾಮಧ್ಯಾನ' ಹಾಗೂ ವಿಜಯ್ ರಾಘವೇಂದ್ರ ಅವರ 'ರಾಜ ಲವ್ಸ್ ರಾಧೆ' ಈ ಮೂರು ಚಿತ್ರಗಳು ಇದೇ ವಾರ ತೆರೆಗೆ ಬರುತ್ತಿವೆ.

  'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಟೈಟಲ್ ಕೊಟ್ಟಿದ್ದು ಅವರೇ.!'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಟೈಟಲ್ ಕೊಟ್ಟಿದ್ದು ಅವರೇ.!

  ಅಂದಹಾಗೆ, ಈ ವಾರ ಬಿಡುಗಡೆಯಾಗುತ್ತಿರುವ ಈ ಮೂರು ಸಿನಿಮಾಗಳ ವಿವರ ಮುಂದಿದೆ ಓದಿ...

  ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

  ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

  ನಟ ಅನಂತ್ ನಾಗ್ ಮತ್ತೊಂದು ವಿಭಿನ್ನ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಲಿವಿಂಗ್‌ ರಿಲೇಷನ್ ‌ಶಿಪ್‌ ಕುರಿತಾದ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರದಲ್ಲಿ ಅನಂತ್ ನಾಗ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಎರಡು ಜನರೇಷನ್ ಕಥೆ ಹೊಂದಿದೆ. ಒಂದು ಕಡೆ ಅನಂತ್ ‌ನಾಗ್‌ ಅವರ ಕಥೆ ಸಾಗಿದರೆ, ಇನ್ನೊಂದು ಕಡೆ ರಾಧಿಕಾ ಚೇತನ್ ಜನರೇಷನ್ ಕಥೆ ತೆರೆದುಕೊಳ್ಳುತ್ತೆ. ಇನ್ನು 'ಕಬ್ಬಡಿ' ಮತ್ತು 'ಸಂತೆಯಲಿ ನಿಂತ ಕಬೀರ' ಚಿತ್ರದ ಖ್ಯಾತಿಯ ನರೇಂದ್ರ ಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

  ಮುಖ್ಯ ಚಿತ್ರಮಂದಿರ : ಅನುಪಮ

  ರಾಮಧ್ಯಾನ

  ರಾಮಧ್ಯಾನ

  ಸಂತ ಕವಿ ಕನಕದಾಸರ ಜೀವನ ಸಾಧನೆ ಆಧಾರಿತ ಸಿನಿಮಾ 'ರಾಮಧ್ಯಾನ' ಚಿತ್ರ ಮೇ 25ಕ್ಕೆ ಬಿಡುಗಡೆಯಾಗಲಿದೆ. ಯಶಸ್ ಸೂರ್ಯ ಹಾಗೂ ನಿಮಿಕಾ ರತ್ನಾಕರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾವನ್ನ ದಶಮುಖ ವೆಂಚರ್ಸ್ ನಿರ್ಮಾಣ ಮಾಡಿದ್ದು ಟಿ ಎನ್ ನಾಗೇಶ ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದರೆ ಈ ಸಿನಿಮಾಗೆ ನಟ ದರ್ಶನ್ ಕಂಠದಾನ ಮಾಡಿದ್ದಾರೆ. 'ರಾಮಧಾನ್ಯ' ಚಿತ್ರ ಶುರುವಾಗುವ ಮೊದಲು ಮತ್ತು ಚಿತ್ರದ ಕೊನೆಯಲ್ಲಿ ಕನಕದಾಸರ ಆಶಯವನ್ನು ಡಿ ಬಾಸ್ ಧ್ವನಿಯಲ್ಲಿ ಕೇಳಬಹುದಾಗಿದೆ.

  ಮುಖ್ಯ ಚಿತ್ರಮಂದಿರ : ಮೇನಕಾ

  ರಾಮನ ಕಥೆ ಕಂಡು ಧನ್ಯನಾದ ಚಾಲೆಂಜಿಂಗ್ ಸ್ಟಾರ್ ರಾಮನ ಕಥೆ ಕಂಡು ಧನ್ಯನಾದ ಚಾಲೆಂಜಿಂಗ್ ಸ್ಟಾರ್

  ರಾಜ ಲವ್ಸ್ ರಾಧೆ

  ರಾಜ ಲವ್ಸ್ ರಾಧೆ

  ನಟ ವಿಜಯ್ ರಾಘವೇಂದ್ರ 'ರಾಜ ಲವ್ಸ್ ರಾಧೆ' ಇದೇ ಶುಕ್ರವಾರ ಚಿತ್ರಮಂದಿರಕ್ಕೆ ಕಾಲಿಡುತ್ತಿದೆ. ಹೆಚ್.ಎಲ್.ಎನ್.ಎಂಟರ್‌ಟೈನರ್ಸ್ ಲಾಂಛನದಲ್ಲಿ 'ರಾಜ ಲವ್ಸ್ ರಾಧೆ' ಸಿನಿಮಾ ನಿರ್ಮಾಣ ಆಗಿದೆ. ರಾಜಶೇಖರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ವಿಭಿನ್ನವಾದ ಪ್ರೇಮಕಥೆಯನ್ನು ಹೊಂದಿದ್ದು, ವಿಜಯ್ ಬರಮಸಾಗರ ಸಂಭಾಷಣೆ ಬರೆದಿದ್ದಾರೆ. ವಿಜಯ್ ರಾಘವೇಂದ್ರ ಜೋಡಿಯಾಗಿ ರಾಧಿಕಾ ಪ್ರೀತಿ ಕಾಣಿಸಿಕೊಂಡಿದ್ದಾರೆ.

  ಮುಖ್ಯ ಚಿತ್ರಮಂದಿರ : ತ್ರಿವೇಣಿ

  ಭಕ್ತಿ, ಭಾವ, ಪ್ರೇಮ

  ಭಕ್ತಿ, ಭಾವ, ಪ್ರೇಮ

  ಭಕ್ತಿ, ಭಾವ, ಪ್ರೇಮ ಈ ಮೂರು ಅಂಶಗಳನ್ನು ಹೊಂದಿರುವ ಈ ಮೂರು ಸಿನಿಮಾಗಳ ಪೈಕಿ ನೀವು ನೋಡಲು ಬಯಸುವ ಚಿತ್ರದ ಹೆಸರನ್ನು ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.

  English summary
  3 kannada movies are releasing on may 25th. Hottegagi Genu Battegagi, Raja Loves Radhe and Ramadhanya kannada movies will release day after tomorrow (May 25th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X